Home Breaking Entertainment News Kannada Tamannah Bhatia : ಕಿಸ್‌ ಕೊಡೊದಾದರೆ ಈ ನಟನಿಗೆ ಮಾತ್ರ, ಬೇರೆ ಯಾರಿಗೂ ಕೊಡಲ್ಲ ಎಂದ...

Tamannah Bhatia : ಕಿಸ್‌ ಕೊಡೊದಾದರೆ ಈ ನಟನಿಗೆ ಮಾತ್ರ, ಬೇರೆ ಯಾರಿಗೂ ಕೊಡಲ್ಲ ಎಂದ ಮಿಲ್ಕ್‌ ಬ್ಯೂಟಿ!!!

Hindu neighbor gifts plot of land

Hindu neighbour gifts land to Muslim journalist

ಕಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ 15ನೇ ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್​ ಗೆ ಪಾದಾರ್ಪಣೆ ಮಾಡಿದರು. ಈಗ ಅವರಿಗೆ 32 ವರ್ಷವಾಗಿದ್ದು ಕಳೆದ 17 ವರ್ಷಗಳ ಕರಿಯರ್​ನಲ್ಲಿ ಕನ್ನಡ, ಹಿಂದಿ, ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದೀಗ ತಮನ್ನಾ ತಮ್ಮ ವೃತ್ತಿಪರ ರೂಲ್ಸ್ ಕುರಿತಂತೆ ಹೊಸ ಸ್ಟೇಟ್ಮೆಂಟ್ ಒಂದನ್ನು ರಿವಿಲ್ ಮಾಡಿದ್ದಾರೆ. ಹೌದು ತಮನ್ನಾ ಭಾಟಿಯಾ ಆನ್​ಸ್ಕ್ರೀನ್​ನಲ್ಲಿ ಕಿಸ್ ಮಾಡುವುದಿಲ್ಲ. ಆದರೆ ಈ ಒಬ್ಬ ನಟನ ಜೊತೆ ಸಿನಿಮಾ ಮಾಡಿದ್ರೆ ಖಂಡಿತಾ ನಾನು ಕಿಸ್ ಮಾಡುತ್ತೇನೆ ಎಂದಿದ್ದಾರೆ.

ಹೌದು ಯಾಕೆಂದರೆ ಕಾಲಿವುಡ್ ನಟಿ ತಮನ್ನಾ ಅವರದ್ದು ವೃತ್ತಿಪರ ಷರತ್ತು ಒಂದಿದೆ. ಅವರು ಯಾವುದೇ ಕಾರಣಕ್ಕೂ ಕಿಸ್ ಮಾಡಲ್ಲ. ಇದು ಅವರ ಪ್ರೊಫೆಷನಲ್ ರೂಲ್ಸ್. ಆದರೆ ಮಿಲ್ಕಿ ಬ್ಯೂಟಿ ಒಬ್ಬ ನಟನಿಗಾಗಿ ಈ ಚುಂಬನದ ಷರತ್ತು ಬ್ರೇಕ್ ಮಾಡೋಕೆ ರೆಡಿ ಎಂದು ಹೇಳಿದ್ದಾರೆ. ಆದರೆ ಆ ನಟನ ಜೊತೆಗೆ ಮಾತ್ರವಂತೆ.

ಹಾಗಿದ್ದರೆ ಯಾರು ಆ ಅದೃಷ್ಟವಂತ ನಟ ಎಂದು ನಿಮಗೆ ಕಾತುರವಿರಬಹುದು. ಅವರು ಬೇರೆ ಯಾರು ಅಲ್ಲ ನಟ ಹೃತಿಕ್ ರೋಷನ್ ಅಂತೆ.

ಹೃತಿಕ್ ರೋಷನ್ ಬಂದರೆ ನಾನು ಖಂಡಿತಾ ಈ ರೂಲ್ಸ್ ಬ್ರೇಕ್ ಮಾಡುತ್ತೇನೆ ಎಂದು ಹೇಳಿದ್ದಾರೆ. ತಮನ್ನಾ ಹೃತಿಕ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡ ಸಮಯದಲ್ಲಿ, ಹೃತಿಕ್ ರೋಷನ್ ಅವರನ್ನು ಭೇಟಿಯಾದಾಗ ಅವರು ಸ್ವತಃ ಮುಜುಗರಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ. ಅದಲ್ಲದೆ ನಾನು ಅವರನ್ನು ಇತ್ತೀಚೆಗೆ ಭೇಟಿಯಾದೆ. ನಾನು ಅವರನ್ನು ಕಂಡೊಡನೆ ನಾಚಿದೆ. ಸೋ ಸ್ಟುಪಿಡ್ ಎಂದಿದ್ದಾರೆ ತಮನ್ನಾ.

ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ!’ ಎಂದಿದ್ದೆ. ಅವರು ‘ಸರಿ!’ ಎಂದು ಹೇಳಿದರು. ನನಗೆ ಬೇರೆ ಏನು ಹೇಳಬೇಕೆಂದು ತಿಳಿದಿರಲಿಲ್ಲ ಎಂದಿದ್ದಾರೆ. ನಂತರ ಅವರು ಸ್ವಲ್ಪ ಹೊತ್ತು ಮುಂದಕ್ಕೆ ಹೋಗಿ ಮತ್ತೆ ಹಿಂತಿರುಗಿ ನೋಡಿ ನಿಮಗೆ ಫೋಟೋ ಬೇಕೇ? ಎಂದು ಕೇಳಿದರು. ನಾನು ಹೌದು ನನಗೆ ಫೋಟೋ ಬೇಕು ಎಂದೆ ಎಂದಿದ್ದಾರೆ ತಮನ್ನಾ.

ಒಟ್ಟಿನಲ್ಲಿ ತಮನ್ನಾ ತನ್ನ ನೆಚ್ಚಿನ ನಟನ ಜೊತೆ ಅವಕಾಶ ಸಿಕ್ಕರೆ ನಾನು ಖಂಡಿತಾ ನನ್ನ ರೂಲ್ಸ್ ಬ್ರೇಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.