Home News ದೇಶವನ್ನೇ ಬೆಚ್ಚಿ ಬೀಳಿಸಿದ ಟೈಲರ್ ಶಿರಚ್ಛೇದ ನಡೆಸಿದ ಆರೋಪಿಗಳ ಬಂಧನ

ದೇಶವನ್ನೇ ಬೆಚ್ಚಿ ಬೀಳಿಸಿದ ಟೈಲರ್ ಶಿರಚ್ಛೇದ ನಡೆಸಿದ ಆರೋಪಿಗಳ ಬಂಧನ

Hindu neighbor gifts plot of land

Hindu neighbour gifts land to Muslim journalist

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿ ಉದ್ವಿಗ್ನತೆಗೆ ತಳ್ಳಿದ ರಾಜಸ್ಥಾನದ ಉದಯಪುರದ ಟೈಲರ್ ಹತ್ಯೆಯ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಮಾಲ್ದಾಸ್ ಸ್ಟ್ರೀಟ್ ಪ್ರದೇಶದಲ್ಲಿ ಟೇಲರ್ ಒಬ್ಬರ ಶಿರಚ್ಛೇದ ಮಾಡಿ, ಬಳಿಕ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ಈ ಇಬ್ಬರು ದುಷ್ಕರ್ಮಿಗಳನ್ನು ರಾಜಸಮಂದ್ ನಿಂದ ಬಂಧಿಸಲಾಗಿದೆ.
ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ಮೂಲಕ ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಸೋಮವಾರ ಉದಯ್‌ಪುರದಲ್ಲಿ ಇಬ್ಬರು ವ್ಯಕ್ತಿಗಳು ಟೈಲರ್‌ನ ಕತ್ತು ಸೀಳಿ ಹತ್ಯೆ ಮಾಡಿದ್ದರು. ಬಳಿಕ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪಿಗಳು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಕ್ಕಾಗಿ ಪ್ರತೀಕಾರವಾಗಿ ಈ ಕೃತ್ಯ ನಡೆಸಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ರಾಜಸ್ಥಾನದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದೆ.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಕ್ಲಿಪ್‌ನಲ್ಲಿ ದುಷ್ಕರ್ಮಿಯೊಬ್ಬ, ಟೈಲರ್ ನೊಬ್ಬನನ್ನು ಶಿರಚ್ಚೇದ ಮಾಡಿರುವುದಾಗಿ ಹೇಳಿರುವುದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಇದರಿಂದ ರಾಜಸ್ಥಾನ ಬೀದಿಗೆ ಇಳಿದಿತ್ತು.

ಈ ಮಧ್ಯೆ ಟೈಲರ್ ಓರ್ವ ಅಮಾಯಕ ನಾಗಿದ್ದು ನೂಪುರ್ ಪರ ಪೋಸ್ಟ್ ಕೂಡ ಹಾಕಿಲ್ಲ ಎನ್ನಲಾಗಿದೆ. ಟೈಲರ್ ಕನ್ನಯ್ಯ ಲಾಲ್ ಅವರ ಪುತ್ರ 8 ವರ್ಷದ ಹುಡುಗ ಈ ಪೋಸ್ಟ್ ಅನ್ನು ಹಾಕಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೀಡಿಯೋದಲ್ಲಿ ಏನಿದೆ?
ನಾನು ರಿಯಾಜ್ ಅಹ್ಮದ್.. ಇವನು ನನ್ನಣ್ಣ ಮೊಹಮ್ಮದ್‌. ಉದಯಪುರದಲ್ಲಿರುವ ಮಾಲ್ಡಾಸ್ ಸ್ಟ್ರೀಟ್‍ನಲ್ಲಿರುವ ಹಿಂದೂ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದೇವೆ. ನಾವು ಬದುಕುತ್ತಿದ್ದೇವೆ ಪ್ರವಾದಿ ಸಲುವಾಗಿ. ಪ್ರವಾದಿಗಾಗಿ ಜೀವ ಬಿಡಲು ಸಿದ್ದ. ಏಯ್ ನರೇಂದ್ರ ಮೋದಿ ಬೆಂಕಿ ಹಬ್ಬಿಸಿದ್ದು ನೀನು. ಅದನ್ನು ಆರಿಸುತ್ತೇವೆ ನಾವು. ನಾನು ಜೀವಂತವಿದ್ದರೆ ಈ ನನ್ನ ಕತ್ತಿ ನಿನ್ನ ಕುತ್ತಿಗೆ ತಲುಪಿ, ನಿನ್ನನ್ನು ಸಂಹಾರ ಮಾಡುತ್ತೇನೆ.