Home News ಸುಬ್ರಹ್ಮಣ್ಯ: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರಕ್ಕೆ ನ.ಸೀತಾರಾಮ ಅವರಿಂದ ಚಾಲನೆ

ಸುಬ್ರಹ್ಮಣ್ಯ: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರಕ್ಕೆ ನ.ಸೀತಾರಾಮ ಅವರಿಂದ ಚಾಲನೆ

Hindu neighbor gifts plot of land

Hindu neighbour gifts land to Muslim journalist

ಕಡಬ : ಮಾನವನ ಜೀವನವು ಸಾರ್ಥಕ್ಯವನ್ನು ಸಾಧಿಸಲು ಗುರಿ ಪ್ರಧಾನವಾಗಿರುತ್ತದೆ. ಯುವ ಜನಾಂಗವು ದೇಶದ ಸಂಪತ್ತಾಗಿದ್ದು ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ನಿರಂತರ ಪ್ರೋತ್ಸಾಹ ಅಗತ್ಯ. ಜೀವನದಲ್ಲಿ ಹಣ ಸಂಪತ್ತು ಮಾತ್ರ ಗೌರವ ನೀಡುವುದಲ್ಲ. ಬದಲಾಗಿ ಭಾರತೀಯವಾದ ಭವ್ಯವಾದ ಸನಾತನ ಸಂಸ್ಕೃತಿಯ ಅನುಷ್ಠಾನ ಯುವ ಜನಾಂಗದ ಅಭ್ಯುದಯಕ್ಕೆ ಸಂಪತ್ತಾಗಿದೆ. ಮಹಾಪುರುಷರನ್ನು ಅವರ ಗುಣ ನಡತೆ, ಪರಿಶ್ರಮ ಮತ್ತು ಸಾಧನೆಯಿಂದ ಅವರನ್ನು ಗೌರವಿಸುತ್ತೇವೆ. ಆದುದರಿಂದ ಜೀವನದಲ್ಲಿ ಅದ್ವಿತೀಯತೆಯನ್ನು ಸಾಧಿಸಲು ಪರಿಶ್ರಮ ಅತ್ಯಗತ್ಯ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಹಾ ಸೇವಾ ಪ್ರಮುಖ್ ನ.ಸೀತರಾಮ ಹೇಳಿದರು.

ಕ್ರೀಡಾ ಭಾರತಿ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ಒಂದು ವಾರದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ವಹಿಸಿದ್ದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ ಪಾಲ್ತಾಡು, ಮನೋಜ್ ಸುಬ್ರಹ್ಮಣ್ಯ ಮುಖ್ಯಅತಿಥಿಗಳಾಗಿದ್ದರು. ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಕ್ರೀಡಾ ಭಾರತಿ ಕಡಬ ತಾಲೂಕು ಅಧ್ಯಕ್ಷ ಶಿವರಾಮ ಯೇನೆಕಲ್ಲು, ಕಾರ್ಯದರ್ಶಿ ಮಾಧವ ಕೋಲ್ಪೆ, ಶಿಬಿರದ ಸಂಘಟಕ ಸೋಮಶೇಖರ ನಾಯಕ್, ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂಧಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.