Home latest ವಿದ್ಯಾರ್ಥಿಗಳ ಅಮ್ಮಂದಿರಿಗೆ “ಸೆಕ್ಸ್” ಮೆಸೇಜ್ ಕಳುಹಿಸುವ ಶಿಕ್ಷಕ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಕೃತ ಕಾಮುಕ!...

ವಿದ್ಯಾರ್ಥಿಗಳ ಅಮ್ಮಂದಿರಿಗೆ “ಸೆಕ್ಸ್” ಮೆಸೇಜ್ ಕಳುಹಿಸುವ ಶಿಕ್ಷಕ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಕೃತ ಕಾಮುಕ! ಹೇಗೆ ಗೊತ್ತಾ?!!!

Hindu neighbor gifts plot of land

Hindu neighbour gifts land to Muslim journalist

ಶಿಕ್ಷಕನೋರ್ವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಬಿಟ್ಟು, ಅವರ ತಾಯಂದಿರಿಗೆ ಅಸಭ್ಯ ಹಾಗೂ ಅಶ್ಲೀಲ ಮೆಸೇಜ್ ಕಳಿಹಿಸಿದ ಕಾಮುಕನೋರ್ವ ಸಿಕ್ಕಿಬಿದ್ದಿದ್ದಾನೆ.

ಈ ಶಿಕ್ಷಕ, ಮಧುಗಿರಿ ತಾಲೂಕಿನ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಸುರೇಶ್ ಎಂಬಾತನೇ ಈ ಕೃತ್ಯ ಎಸಗಿದವನು. ಈತ ತನ್ನ ಕುಕೃತ್ಯಕ್ಕೆ ವಿದ್ಯಾರ್ಥಿಗಳಿಂದಲೇ ಪೋಷಕರ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ಕೊಡುತ್ತಿದ್ದನಂತೆ.

ಇವನ ವರ್ತನೆಯಿಂದ ಸಿಟ್ಟಿಗೆಟ್ಟ ಗ್ರಾಮಸ್ಥರು ಶಿಕ್ಷಕನಿಗೆ ತಕ್ಕ ಪಾಠ ಕಲಿಸಿದ್ದಾರೆ.

ತರಗತಿ ಮುಗಿದ ಬಳಿಕ ವಿದ್ಯಾರ್ಥಿಗಳ ತಾಯಂದಿರಿಗೆ ವಾಟ್ಸ್‌ಆಯಪ್‌ನಲ್ಲಿ ಸುರೇಶ್ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ಕೊಡುತ್ತಿದ್ದ. ಅಷ್ಟೇ ಅಲ್ಲ ಗ್ರಾಮದ ಕೆಲ ಯುವಕರೊಂದಿಗೆ ಸುರೇಶ್ ಪ್ರತಿನಿತ್ಯ ಪಾರ್ಟಿ ಮಾಡುತ್ತಾ ಕುಣಿಸು ಕುಪ್ಪಳಿಸುತ್ತಿದ್ದ. ಈ ಬಗ್ಗೆ ಗ್ರಾಮಸ್ಥರಿಂದ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ಅವರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ತನಿಖೆ ನಡೆಸಿದಾಗ ಆರೋಪ ಸಾಬೀತಾಗಿದೆ. ಹಾಗಾಗಿ ಶಿಕ್ಷಕ ಸುರೇಶ್‌ನನ್ನು ಕೆಲಸದಿಂದ ಮಂಗಳವಾರ ಅಮಾನತು ಮಾಡಲಾಗಿದೆ