

JOB: ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ(Job) ಭರ್ತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಲ್ಲೇಖಿತ ಇ-ಸಂದೇಶದಲ್ಲಿ ಪೊಲೀಸ್ ಪ್ರಧಾನ ಕಛೇರಿಯ ಪತ್ರ ಸಂಖ್ಯೆ: 195/ಸಿಬ್ಬಂದಿ-1/2020-21 ದಿನಾಂಕ 13-10-2025ನ್ನು ಉಲ್ಲೇಖಿಸಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಕಾನ್ಸ್ ಟೇಬಲ್ ವೃಂದಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಕುರಿತು ಕೆಲವು ಅಂಶಗಳಿಗೆ ಸರ್ಕಾರದಿಂದ ಸ್ವೀಕೃತಗೊಂಡಿರುವ ಸ್ಪಷ್ಟಿಕರಣ ಹಾಗೂ ಆದೇಶಗಳಲ್ಲಿನ ನಿರ್ದೇಶನಗಳನ್ವಯ ಸಂಬಂಧಪಟ್ಟ ಘಟಕಗಳಿಂದ ವರ್ಗೀಕರಣವನ್ನು ಪಡೆದು ಪ್ರಸ್ತಾಪಿತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು. ಕ್ರಮಕ್ಕಾಗಿ ಕೋರಲಾಗಿರುತ್ತದೆ.
ಈಗಾಗಲೇ ತಮ್ಮ ಘಟಕಗಳಿಗೆ ಹಂಚಿಕೆ ಮಾಡಿರುವ ಹುದ್ದೆಗಳಂತೆ ಸಲ್ಲಿಸಲಾಗಿರುವ ನೇರ ಮತ್ತು ಸಮತಳ ವರ್ಗೀಕರಣವನ್ನು ಪೊಲೀಸ್ ಪ್ರಧಾನ ಕಛೇರಿಯ ಪತ್ರ ದಿನಾಂಕ 13-10-2025ರಲ್ಲಿ ನೀಡಿರುವ ನಿರ್ದೇಶನದನ್ವಯ ಮಾರ್ಪಡಿಸಿ ನೇರ ಮತ್ತು ಸಮತಳ ವರ್ಗೀಕರಣವನ್ನು (ಪ್ರಶಂಸನೀಯ ಕ್ರೀಡಾಪಟುಗಳ ವರ್ಗೀಕರಣವನ್ನು ಒಳಗೊಂಡಂತೆ) ಸರ್ಕಾರದ ಪತ್ರ ಸಂಖ್ಯೆ: ಹೆಚ್ಡಿ 149 ಪಿಪಿಎ 2025 ದಿನಾಂಕ 10-10-2025ರಲ್ಲಿ ಪ್ರತಿಯೊಂದು ನೇರ ಮೀಸಲಾತಿ ವರ್ಗದಡಿ ಶೇಕಡಾ 2% ರಷ್ಟು ಮೀಸಲಾತಿ ನಿಗದಿಪಡಿಸಿರುವಂತೆ ಮರು ಪ್ರಸ್ತಾವನೆಯನ್ನು ಈ ಕಛೇರಿಯ ಇ-ಮೇಲ್ ಐಡಿ: cn16ksrpha@ksp.gov.in ಗೆ ದಿನಾಂಕ 16-10-2025ರೊಳಗಾಗಿ ಮರು ಸಂದೇಶದಲ್ಲಿ ಕಳುಹಿಸಿಕೊಡುವಂತೆ ಸೂಚಿಸಿದೆ.













