Home News ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿರುವ ಕಡಬ ಪೋಲೀಸ್ ಸಿಬ್ಬಂದಿಯ ವ್ಯಭಿಚಾರ ಸುದ್ದಿ | ಕಡಬ ಠಾಣೆಗೆ ಎಎಸ್ಪಿ...

ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿರುವ ಕಡಬ ಪೋಲೀಸ್ ಸಿಬ್ಬಂದಿಯ ವ್ಯಭಿಚಾರ ಸುದ್ದಿ | ಕಡಬ ಠಾಣೆಗೆ ಎಎಸ್ಪಿ ಭೇಟಿ

Hindu neighbor gifts plot of land

Hindu neighbour gifts land to Muslim journalist

ಕಡಬ : ಯುವತಿಯೊಬ್ಬಳಿಗೆ ಅತ್ಯಾಚಾರ ವೆಸಗಿ, ಆಕೆ ಗರ್ಭವತಿಯಾಗಲು ಕಾರಣನಾಗಿ, ಬಳಿಕ ಆತನ ಉಸ್ತುವಾರಿಯಲ್ಲೇ ಅಬಾರ್ಶನ್ ಮಾಡಲಾಗಿದೆ ಎನ್ನಲಾದ ಪೋಲೀಸ್ ಸಿಬ್ಬಂದಿಯೊಬ್ಬರ ವ್ಯಭಿಚಾರದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಎ ಎಸ್‌ಪಿಯವರು ಶನಿವಾರ ಕಡಬಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಸಾರ್ವಜನಿಕರ ರಕ್ಷಣೆಗೆಂದು ಇರುವವರೇ ಸಮಾಜದಲ್ಲಿ ಮಾಡಬಾರದ ಕೆಲಸವನ್ನು ಮಾಡಿದರೆ, ಜನರ ರಕ್ಷಣೆ ಮಾಡುವವರು ಯಾರು.. ಹಾಗಂತ ಪೋಲಿಸ್ ಇಲಾಖೆಯ ಎಲ್ಲರೂ ಇಂತಹ ಹಲ್ಕಾ ಕೆಲಸ ಮಾಡುತ್ತಿದ್ದಾರೆಂದು ಅಲ್ಲ, ಆದರೇ ಇಂತಹ ಒಬ್ಬಿಬ್ಬರಿಂದ ಇಡೀ ಪೋಲಿಸ್ ಇಲಾಖೆಯೇ ತಲೆ ತಗ್ಗಿಸುವ ಕೆಲಸ ಮಾಡಿದರೆ ಅಂತವರಿಗೆ ಈ ನೆಲದಲ್ಲಿ ಶಿಕ್ಷೆ ಖಂಡಿತಾ ಆಗಬೇಕು, ಮುಂದೆ ಇಂತಹ ತಪ್ಪು ಕೆಲಸ ಮಾಡುವವರಿಗೆ ಇದೊಂದು ಪಾಠ ಆಗಬೇಕು ಎನ್ನುವ ಒಕ್ಕಣೆಯೊಂದಿಗೆ ಶುಕ್ರವಾರ ಸುದ್ದಿ ಹರಿದಾಡುತ್ತಿತ್ತು. .

ಹೌದು ಹೇಳಿ ಕೇಳಿ ಕಡಬ ಪೋಲಿಸ್ ಠಾಣೆ ಹಲವಾರು ಇತಿಹಾಸಗಳನ್ನು ಹೊಂದಿದೆ. ಇಲ್ಲಿ ಸತ್ಯ ಧರ್ಮದಿಂದ ಕರ್ತವ್ಯ ನಿರ್ವಹಿಸಿದವರು ಕಡಬವನ್ನು ಬಿಟ್ಟು ಹೋದರೂ ಮತ್ತೆ ಎಂದಿಗೂ ಕಡಬವನ್ನು ಮರೆಯುವುದಿಲ್ಲ. ಇಂತಹ ಒಂದು ಊರಿನಲ್ಲಿರುವ ಠಾಣೆಯಲ್ಲಿ ಓರ್ವ ಕಾಮಸುರ ಕರ್ತವ್ಯ ನಿರ್ವಹಿಸುತ್ತಿದ್ದನೆಂದರೆ ನೀವು ನಂಬುತ್ತಿರಾ? ಹೌದು ನಂಬಲೇ ಬೇಕು. ಎನ್ನುವ ಸಾಲುಗಳು ಮನರಂಜನೀಯವಾಗಿ ಊರೆಲ್ಲಾ ಗಬ್ಬೆದ್ದು ನಾರುತ್ತಿದೆ.
ಕಡಬ ಪೋಲಿಸ್ ಠಾಣೆಯ ಪೋಲಿಸ್ ಓರ್ವ ಠಾಣಾ ವ್ಯಾಪ್ತಿಯ ಯುವತಿಯೋರ್ವಳಿಗೆ ಗರ್ಭದಾನ ಮಾಡಿದನೆಂದು, ಪೋಲಿಸ್ ಪ್ರಭಾವದಿಂದ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಈ ಪೋಲಿಸಪ್ಪನ ಕಾಮ ಪುರಾಣ ಪುಂಕಾನುಪುAಕವಾಗಿ ರಂಜನೀಯವಾಗಿ ಹರಿದಾಡುತ್ತಿದೆ. ಯುವತಿಯೋರ್ವಳಿಗೆ ಗರ್ಭದಾನ ಮಾಡಿ ಇದೀಗ ಈತ ಪ್ರಕರಣವನ್ನು ಮುಚ್ಚಿ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾನೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದೆ.

ಠಾಣೆಗೆ ನ್ಯಾಯ ಅರಸುತ್ತಾ ಬರುವ ಮಹಿಳೇಯರೇ ಈ ಪೋಲಿಸ್‌ಗೆ ಟಾರ್ಗೆಟ್ ಎನ್ನಲಾಗಿದೆ. ಹಲವಾರು ಕುಟುಂಬ ಕಲಹ, ಪತಿಯಿಂದ ಸಮಸ್ಯೆ ಬೇರೆ ಬೇರೆ ಸಮಸ್ಯೆಗಳಲ್ಲಿ ಠಾಣೆಗೆ ನ್ಯಾಯ ಅರಸುತ್ತಾ ಬರುವವರನ್ನು ಇವರು ತಮ್ಮ ಬಲೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಸಮಸ್ಯೆಗೆ ಸ್ಪಂಧಿಸಲಿ ಎಂದು ಪ್ರಾರಂಭದಲ್ಲಿ ಇವರ ಖೆಡ್ಡಾಕ್ಕೆ ಬೀಳುತ್ತಾರೆ, ಮತ್ತೆ ಇವರ ನಿಜ ಬಣ್ಣ ಗೊತ್ತಾದ ಮೇಲೆ ಅವರಿಂದ ತಪ್ಪಿಸಿಕೊಂಡರೇ ಸಾಕು ಎಂದು ಹೆಣಗಾಡಿದವರು ಅದೆಷ್ಟೋ ಮಂದಿ. ಕಡಬ ಠಾಣೆಯ ಅಧಿಕಾರಿಯವರು ಈ ಪೋಲಿಸರ ಕಾಮ ಪುರಾಣಗಳು ತಿಳಿದು ಇವರನ್ನು ತಮ್ಮ ಛೇಂಬರ್ ಗೆ ಕರೆಸಿ ಬುದ್ದಿವಾದ ಹೇಳಿದ್ದೂ ಆಗಿದೆ.

ಠಾಣೆಗೆ ಏನಾದರೂ ಮಹಿಳೆಯ ವಿಚಾರದಲ್ಲಿ ದೂರು ಬಂದರೆ ಆಯಿತು, ಆ ವಿಚಾರಕ್ಕೆ ಎಂಟ್ರಿ ಕೊಡುವ ಈ ಪೋಲೀಸಪ್ಪ , ರಾತ್ರಿ ಅವರ ಮನೆಗೆ ಹೋಗಿ ಅವರಿಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಬೇಲೆ ಬೆಯಿಸುವ ಪ್ರಯತ್ನ ಮಾಡುತ್ತಾನೆ ಎನ್ನಲಾಗಿದೆ. . ಕಡಬ ಠಾಣೆಯಲ್ಲಿ ಈ ಪೋಲಿಸ್ ಓರ್ವನೆ ಅಲ್ಲ..ಮಹಿಳೆಯರಿಗೆ, ಯುವತಿಯರಿಗೆ ಚಾಟಿಂಗ್ ಮಾಡುವ ಪೋಲಿಸರು ಇನ್ನೂ ಒಂದಿಬ್ಬರು ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇತನ ಹಲ್ಕಾ ಕೆಲಸಗಳನ್ನು ವೆಬ್ ನ್ಯೂಸ್ ಚಾನಲ್‌ಗಳು ವರದಿ ಮಾಡುತ್ತವೆ ಎಂದು ಗೊತ್ತಾದ ತಕ್ಷಣ ಪತ್ರಕರ್ತರೊಬ್ಬರಿಗೆ ಇದೇ ಪೋಲೀಸ್ ವರದಿ ಮಾಡದಂತೆ ದುಂಬಾಲು ಬೀಳುವ ವಿಡಿಯೋ ಕೂಡಾ ವೈರಲ್ ಆಗಿದೆ. ಈ ಸಂಬAದ ಪುತ್ತೂರು ಎಎಸ್‌ಪಿ ಗಾನಾ ಕುಮಾರಿ ಪತ್ರಕರ್ತರೊಂದಿಗೆ ಮಾತನಾಡಿ ವಿಷಯ ಗಮನಕ್ಕೆ ಬಂದಿದೆ, ನೊಂದ ಯುವತಿ ಅಥವಾ ಸಾರ್ವಜನಿಕರು ಹೆಸರು ಉಲ್ಲೇಖ ಮಾಡಿ ದೂರು ನೀಡಿದರೆ ಆರೋಪಿಯ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.