Home Interesting ನಿದ್ದೆ ಮಾಡಿ ವಾರದಲ್ಲಿ 2ಲಕ್ಷ ರೂ.ಗಳಿಸೋ ಯುಟ್ಯೂಬರ್ |ಇಷ್ಟು ಆರಾಮವಾದ ಕೆಲಸದ ಹಿಂದಿರುವ ಪ್ಲಾನ್ ಏನು...

ನಿದ್ದೆ ಮಾಡಿ ವಾರದಲ್ಲಿ 2ಲಕ್ಷ ರೂ.ಗಳಿಸೋ ಯುಟ್ಯೂಬರ್ |ಇಷ್ಟು ಆರಾಮವಾದ ಕೆಲಸದ ಹಿಂದಿರುವ ಪ್ಲಾನ್ ಏನು ಗೊತ್ತಾ!?

Hindu neighbor gifts plot of land

Hindu neighbour gifts land to Muslim journalist

ಜೀವನ ನಡೆಸಬೇಕಾದರೆ ಕೆಲಸ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸುಲಭದಾಯಕವಾದ ಕೆಲಸವನ್ನೇ ಹುಡುಕುತ್ತಾರೆ.ಕಡಿಮೆ ದುಡಿಮೆಯಲ್ಲಿ ಅತೀ ಹೆಚ್ಚು ಸಂಪಾದಿಸೋ ಉದ್ಯೋಗದತ್ತ ಅತಿಯಾದ ಆಸಕ್ತಿ ತೋರಿಸುತ್ತಾರೆ ಇಂದಿನ ಯುವ ಜನತೆ. ಇಂತಹ ಕೆಲಸ ಸಾಮಾನ್ಯವಾಗಿ ಇರೋದೇ ಆನ್ಲೈನ್ ವರ್ಕ್ ಗಳಲ್ಲಿ. ಆದರೆ ಇಲ್ಲೊಬ್ಬ ಯುಟ್ಯೂಬರ್ ಕೇವಲ ನಿದ್ದೆ ಮಾಡಿ ಮಲಗಿದಲ್ಲಿಂದಲೇ ಲಕ್ಷ ಲಕ್ಷ ಗಳಿಸುತ್ತಾನಂತೆ!

ಇದೇನು ಕೆಲಸ ಮಾಡದೆ ನಿದ್ದೆ ಮಾಡಿದರೆ ಅಷ್ಟೊಂದು ಹಣ ಎಲ್ಲಿಂದ ಬರುತ್ತೆ ಎಂಬ ನಿಮ್ಮ ಗೊಂದಲದ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.ಹೌದು. ಈ ವ್ಯಕ್ತಿ, ನಿದ್ದೆ ಕೇವಲ ಅಗತ್ಯವಾದ ಶಾರೀರಿಕ ಕ್ರಿಯೆಯಲ್ಲ ಅದೊಂದು ಹಣ ಗಳಿಕೆಯ ಮಾರ್ಗವೂ ಆಗುತ್ತದೆ ಎಂದು ತೋರಿಸಿಕೊಟ್ಟಿದ್ದಾನೆ ಈತ.ನಿದ್ದೆಯಿಂದ ಹಣ ಸಂಪಾದಿಸುವ ತನ್ನ ಕೆಲಸದ ಬಗ್ಗೆ ಆ ವ್ಯಕ್ತಿಯೇ ಹೇಳಿಕೊಂಡಿದ್ದಾರೆ.

ವಾಸ್ತವವಾಗಿ, ನಿದ್ರೆಯಿಂದ ಹಣವನ್ನು ಗಳಿಸುವ ಈ ವ್ಯಕ್ತಿಯು ಯೂಟ್ಯೂಬರ್ ಆಗಿದ್ದಾನೆ. ಅವನ ಯೂಟ್ಯೂಬ್ ಚಾನೆಲ್‌ನ ಹೆಸರು “ಸೂಪರ್ ಮೇನ್‌ಸ್ಟ್ರೀಮ್”.ಆತ ಒಂಟಿಯಾಗಿ ಮಲಗಿರುವಾಗ ಅವನ ವೀಡಿಯೊವನ್ನು ಲೈವ್ ಆಗಿ ಕ್ಯಾಮೆರಾ ರೆಕಾರ್ಡ್ ಮಾಡುತ್ತದೆ. ಮತ್ತು ನಂತರ ಅದನ್ನು ಯೂಟ್ಯೂಬ್‌ನಲ್ಲಿ ಆತ ಪೋಸ್ಟ್ ಮಾಡುತ್ತಾನೆ. ಜನರು ಅವರ ವೀಡಿಯೊಗಳನ್ನು ವೀಕ್ಷಿಸುತ್ತಾರೆ ಮತ್ತು ಪ್ರತಿಯಾಗಿ ಹಣವನ್ನು ಪಾವತಿಸುತ್ತಾರೆ. ಇದು ಹೇಗೆ ಸಾಧ್ಯ ಅಂತೀರಾ..? ಇಲ್ಲಿದೆ ವಿವರಣೆ.

ನಿದ್ರೆಯಿಂದ ಹಣವನ್ನು ಗಳಿಸುವ ವೀಡಿಯೊದಲ್ಲಿ, ಯೂಟ್ಯೂಬರ್ ನಿದ್ದೆ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಅವನ ಅಭಿಮಾನಿಗಳು ಅಲೆಕ್ಸಾ ಸ್ಪೀಕರ್ ಮೂಲಕ ಸಂದೇಶ, ವೀಡಿಯೊಗಳು ಮತ್ತು ಹಾಡುಗಳನ್ನು ಪ್ಲೇ ಮಾಡುವ ಮೂಲಕ ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಾರೆ. 21 ವರ್ಷ ವಯಸ್ಸಿನ ಯೂಟ್ಯೂಬರ್ ವೈಸ್ ನ್ಯೂಸ್‌ಗೆ ವಾರಕ್ಕೊಮ್ಮೆ ಆರು ಗಂಟೆಗಳ ಯೂಟ್ಯೂಬ್ ಲೈವ್ ಮಾಡುವುದರಿಂದ ಒಂದು ವಾರದಲ್ಲಿ 2 ಲಕ್ಷ ರೂ. ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಅವರ ಸ್ಲೀಪ್ ಸ್ಟ್ರೀಮ್‌ಗಳು ಯೂಟ್ಯೂಬ್‌ನಲ್ಲಿ ಬಹಳ ಜನಪ್ರಿಯವಾಗುತ್ತಿವೆ. ಅವರ ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿವೆ. ಅವನು ಸಾವಿರಾರು ಪ್ರೇಕ್ಷಕರ ಮುಂದೆ ತನ್ನನ್ನು ತಾನು ನಿದ್ದೆ ಹೋಗಲು ಪ್ರಯತ್ನಿಸುತ್ತಾನೆ. ಮತ್ತು ಚೆನ್ನಾಗಿ ನಿದ್ದೆ ಮಾಡುತ್ತಾನೆ. ಜನರು ಫೋನ್-ಮೆಸೇಜ್ ಇತ್ಯಾದಿಗಳ ಮೂಲಕ ಅವನನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಪ್ರಯೋಜನವಾಗುವುದಿಲ್ಲ.ಹೀಗೆ ಈತ ನಿದ್ದೆಯಲ್ಲೇ ಲಕ್ಷಾಧಿಪತಿ ಆಗಿದ್ದಾನೆ.ನಿಮಗೂ ಆಸಕ್ತಿ ಇದ್ದರೆ ಪ್ರಯತ್ನಪಡಬಹುದೊ ಏನು!..