Home latest ಮನೆಯಲ್ಲಿ ಯಾರೂ ಇಲ್ಲದಾಗ ಅಣ್ಣ-ತಂಗಿ ಸೇರಿಕೊಂಡು ಮಾಡುತ್ತಿದ್ದ ಕೆಲಸವೇನು ಗೊತ್ತಾ! ಈ ಪಾಪಿಗಳು ಮಾಡುತ್ತಿದ್ದ ಆ...

ಮನೆಯಲ್ಲಿ ಯಾರೂ ಇಲ್ಲದಾಗ ಅಣ್ಣ-ತಂಗಿ ಸೇರಿಕೊಂಡು ಮಾಡುತ್ತಿದ್ದ ಕೆಲಸವೇನು ಗೊತ್ತಾ! ಈ ಪಾಪಿಗಳು ಮಾಡುತ್ತಿದ್ದ ಆ ನೀಚ ಕೆಲಸಕ್ಕೆ ಸ್ವಂತ ತಾಯಿ ಬಲಿ

Hindu neighbor gifts plot of land

Hindu neighbour gifts land to Muslim journalist

ಆಧುನಿಕ ಸಮಾಜಕ್ಕೆ ಒಗ್ಗಿಕೊಂಡಿರು ಜೀವನದಲ್ಲಿ ನಮ್ಮ ಸಂಬಂಧಗಳಿಗೂ ಬೆಲೆ ಇಲ್ಲವಾಗಿದೆ. ತಮ್ಮ ಆಸೆಗಳನ್ನು ತೀರಿಸಿಕೊಳ್ಳಲು ನಾವು ಯಾರ ಮೊರೆ ಹೋಗುತ್ತಿದೇವೆ, ಅವರು ನಮಗೆ ಸಂಬಂಧದಲ್ಲಿ ಏನಾಗಬೇಕು ಎಂಬ ಯಾವುದನ್ನೂ ಕೂಡ ಯೋಚಿಸದೆ ಎಲ್ಲದಕ್ಕೂ ಮುಂದುವರೆಯುತ್ತೇವೆ. ಇಂತಹದೇ ಒಂದು ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅಣ್ಣ-ತಂಗಿಯ ಸಲುವಾಗಿ ಒಬ್ಬ ತಾಯಿ ಕೂಡ ಪ್ರಾಣ ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಆ ಅಣ್ಣ ತಂಗಿ ಮಾಡಿದ ನೀಚ ಕೆಲಸವಾದರೂ ಏನು ಗೊತ್ತಾ?

ಕೆಲ ದಿನಗಳ‌ ಹಿಂದೆಯಷ್ಟೆ ತುಮಕೂರಿನ ಕೊರಟಗೆರೆ ಪ್ರದೇಶದಲ್ಲಿ ಒಬ್ಬ ಮಹಿಳೆ ಮನೆಯ ಸಂಪಿಗೆ ಬಿದ್ದು ಅಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡಿದಾಗ ಶಾಕಿಂಗ್ ವಿಷಯ ಹೊರ ಬಿದ್ದಿದ್ದು ಸಾವನ್ನಪ್ಪಿದ ಮಹಿಳೆಯ ತಂಗಿಯ ಮಗ ಹಾಗೂ ಆಕೆಯ ಸ್ವಂತ ಮಗಳೇ ಈ ಸಾವಿಗೆ ಕಾರಣ ಎಂಬುದು ಪೋಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಅಲ್ಲದೆ ಈ ಅಣ್ಣ ತಂಗಿ ನಡುವೆ ಇದ್ದ ಸಂಬಂಧಕ್ಕೆ ಮಹಿಳೆಯು ಅಡ್ಡಿಯಾಗಿರುವುದಕ್ಕೆ ಆ ಬಡ ತಾಯಿಯ ಪ್ರಾಣ ತೆಗೆಯಲಾಗಿದೆ ಎಂಬ ಸತ್ಯ ಕೂಡ ಹೊರಬಿದ್ದಿದೆ. ಅದಾಗ್ಯೂ ಈ ಅಣ್ಣ ತಂಗಿ ನಡುವೆ ಇದ್ದ ಸಂಬಂಧವಾದರೂ ಏನು? ಯಾರೂ ಇಲ್ಲದ ವೇಳೆ ಇವರಿಬ್ಬರೂ ರೂಮಿನಲ್ಲಿ ಸೇರಿಕೊಂಡು ಮಾಡುತ್ತಿದ್ದ ಕಚಡಾ ಕೆಲಸವಾದರೂ ಏನೆಂಬುದನ್ನು ನೀವೇ ನೋಡಿ.

ಶೈಲಜ ಹಾಗೂ ಪುನೀತ್ ಇಬ್ಬರೂ ಅಕ್ಕ ತಂಗಿಯ ಮಕ್ಕಳು. ಶೈಲಜಾ ಸಾವನಪ್ಪಿದ ಮಹಿಳೆಯ ಮಗಳಾದರೆ, ಪುನೀತ್ ಆಕೆಯ ತಂಗಿ ಮಗ. ಅಂದರೆ ಸಂಬಂಧದಲ್ಲಿ ಅಣ್ಣ ತಂಗಿ. ಆದರೆ ಈ ಇಬ್ಬರೂ ಕೂಡ ಈ ಪವಿತ್ರವಾದ ಸಂಬಂಧವನ್ನು ಮರೆತು ಬೇರೆ ರೀತಿಯ ಅಕ್ರಮ ಸಂಬಂಧ ಬೆಳೆಸಿದ್ದರು. ಆಗಾಗ್ಗೆ ಮನೆಗೆ ಬರುತ್ತಿದ್ದ ಅವರು ಕೋಣೆ ಸೇರುತ್ತಿದ್ದರು. ಎಷ್ಟು ಹೊತ್ತಾದರೂ ರೂಮಿನಿಂದ ಹೊರಗೆ ಬರುತ್ತಿರಲಿಲ್ಲ. ಮೊದ ಮೊದಲು ಅಣ್ಣ ತಂಗಿ ಏನೋ ಸಲುಗೆಯಿಂದ ಇದ್ದಾರೆ ಎಂದೇ ಆ ತಾಯಿ ಅಂದು ಕೊಂಡಿದ್ದಳು. ಆದರೆ ಒಂದು ಬಾರಿ ಆ ತಾಯಿ ಬಾಗಿಲು ತೆರೆದು ನೋಡಿದಾಗ ಅಲ್ಲಿದ್ದ ಪರಿಸ್ಥಿತಿಯೇ ಬೇರೆಯಾಗಿತ್ತು. ಹೌದು ಇಬ್ಬರೂ ಮೈ ಮೇಲೆ ಬಟ್ಟೆ ಬರಿ ಇಲ್ಲದೆ ಇರಬಾರದ ಸ್ಥಿತಿಯಲ್ಲಿ ಇದ್ದರು.

ಇದನ್ನು ಕಂಡ ತಾಯಿ ಅತ್ತು ಕರೆದು ಮಾಡಿ, ತುಂಬಾ ನೊಂದುಕೊಂಡು, ಯಾರಿಗೂ ಹೇಳದೆ ಇನ್ನುಮುಂದೆ ಇಬ್ಬರೂ ದೂರ ಇರುವಂತೆ ಇಬ್ಬರಿಗೂ ತಾಕೀತು ಮಾಡಿ ಎಚ್ಚರಿಸಿದ್ದರು. ಆದರೆ ಈ ಅಣ್ಣ ತಂಗಿ ಮಾತ್ರ ತಮ್ಮ ಚಾಳಿ ಮುಂದುವರಿಸಿಯೇ ಇದ್ದರು.

ಮತ್ತೆ ಮತ್ತೆ ಇಂತಹ ಘಟನೆಗಳನ್ನು, ಅವರಿಬ್ಬರು ರೂಮು ಸೇರಿಕೊಳ್ಳುವುದನ್ನು ಗಮನಿಸಿದ ತಾಯಿಯು ಇದಕ್ಕೆ ಅಡ್ಡವಾಗಿ ನಿಂತಳು. ಎಷ್ಪೇ ಆದರೂ ಹೆತ್ತಕರುಳು. ಆದರೆ ಕಾಮ ತೃಷೆಯಲ್ಲಿ ತೇಲಾಡಿ ಅಭ್ಯಾಸವಾಗಿದ್ದ ಈ ಅಣ್ಣ ತಂಗಿಗೆ ತಮ್ಮ ಚಾಳಿ ಬಿಡಲು ಆಗಲಿಲ್ಲ. ಮುಂದೆ ಯಾವಾಗಲೂ ಈಕೆ ನಮಗೆ ಅಡ್ಡಿಯಾಗುತ್ತಾಳೆಂದು ಅರಿತು ಸಿಟ್ಟು ಗೊಂಡ ಪುನೀತ್ ಹಾಗೂ ಶೈಲಜಾ ಇಬ್ಬರೂ ಸೇರಿ ಆಕೆಯನ್ನು ಮನೆಯ ಸಂಪಿಗೆ ದೂಡಿ ಕೊಂದುಬಿಟ್ಟರು.

ನಂತರ ಯಾರಿಗೂ ಅನುಮಾನ ಬರದಂತಿದ್ದು, ಆಕೆಯೇ ಕಾಲು ಜಾರಿ ಬಿದ್ದು ಸಾವನಪ್ಪಿದಳು ಎಂದು ನಾಟಕ‌ವಾಡಿ ಎಲ್ಲರನ್ನೂ ನಂಬಿಸಿದ್ದಳು. ಆದರೆ ಇದರ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಇವರ ಕರ್ಮಕಾಂಡ ಹೊರ ಬಿದ್ದಿದ್ದು ಇಬ್ಬರೂ ಪೋಲೀಸರ ಅತಿಥಿಯಾಗಿದ್ದಾರೆ.

ಪವಿತ್ರವಾದ ಸಂಬಂಧವನ್ನೂ ಮರೆತು ಮಾಡಬಾರದ ಕೆಲಸ ಮಾಡಿಕೊಂಡು ಸ್ವಂತ ತಾಯಿಯನ್ನೇ ಕೊವೆಮಾಡಿದ ಆ ಹೆಣ್ಣು ಮಗಳ ಮನಸ್ಸಾದರೂ ಎಷ್ಟು ವಿಕೃತವಾದದ್ದು! ಕ್ಷಣಿಕ ಸುಖಗಳಿಗಾಗಿ ಇಂದು ಸಮಾಜ, ಯುವ ಜನತೆ ಇಂತಹ ಮಾರ್ಗಗಳನ್ನು ಅನುಸರಿಸುತ್ತಿರವುದು ನಿಜಕ್ಕೂ ವಿಷಾದನೀಯ.