Home News Shivamogga : ಅಡಿಕೆ ಮಂಡಿ ವರ್ತಕನ ಪತ್ನಿ ನೇಣಿಗೆ ಶರಣು!

Shivamogga : ಅಡಿಕೆ ಮಂಡಿ ವರ್ತಕನ ಪತ್ನಿ ನೇಣಿಗೆ ಶರಣು!

Shivamogga

Hindu neighbor gifts plot of land

Hindu neighbour gifts land to Muslim journalist

Shivamogga : ಶಿವಮೊಗ್ಗ(Shivamogga) : ನಗರದ ಅಡಿಕೆ ಮಂಡಿ ವರ್ತಕ ಪ್ರಶಾಂತ್‌ ಎನ್ನುವವರ ಪತ್ನಿ ಮನೆಯಲ್ಲಿ ನೇಣಿಗೆ ಶರಣಾದ ಘಟನೆಯೊಂದು ನಡೆದಿದೆ. ಪತಿ ಮಾಡಿದ ಸಾಲ ಹಾಗೂ ಜಮೀನು ಮಾರಾಟದಿಂದ ನೊಂದ ಇವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದೊಂದು ಕೌಟುಂಬಿಕ ಸಮಸ್ಯೆ ಎನ್ನಲಾಗಿದೆ.

ಶಿವಮೊಗ್ಗ ನರದ ಶ್ವೇತಾ (40) ನೇಣಿಗೆ ಶರಣಾದ ಮಹಿಳೆ. ಅಡಿಕೆ ಮಂಡಿ ವರ್ತಕ ಪ್ರಶಾಂತ್ ಎಂಬುವವರ ಪತ್ನಿ. ಪತಿಯ ಸಾಲ ಹಾಗೂ ಜಮೀನು ಮಾರಾಟದ ವಿಷಯವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಏನು ಕಲಹವಿತ್ತೋ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದಾರೆ. ನೆಮ್ಮದಿ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವು ಅರಸಿಕೊಂಡು ಹೋಗಬೇಕು. ಆಸ್ತಿಪಾಸ್ತಿ ಇದ್ದರೆ ಮಾತ್ರ ಬದುಕಲು ಸಾಕಾಗಲ್ಲ. ಕುಟುಂಬದ ಸದಸ್ಯರ ಮಧ್ಯೆ ಪ್ರೀತಿ, ಸ್ನೇಹ ಎಲ್ಲಾ ಇರಬೇಕು. ಇಲ್ಲದಿದ್ದರೆ ಬದುಕಿನ ಬಂಡಿ ಮುಂದೆ ಸಾಗಲ್ಲ. ಸುಂದರವಾದ ಪತ್ನಿ, ದುಡಿಮೆಗೆ ಅಡಿಕೆ ಮಂಡಿ ಇತ್ತು. ಆರ್ಥಿಕ ಆದಾಯ ಕೂಡಾ ಉತ್ತಮವಾಗಿಯೇ ಇತ್ತು. ಆದರೆ ಮನೆ ಮಂದಿ ಮಧ್ಯೆ ಏನು ಸಮಸ್ಯೆ ಇತ್ತು ಎನ್ನುವುದು ಸಮಾಜಕ್ಕೆ ತಿಳಿಯಲ್ಲ. ನೋಡಲು ಚೆನ್ನಾಗಿದೆ ಎಂದ ಕುಟುಂಬದಲ್ಲಿ ಈಗ ಅದೇನು ನೋವಿತ್ತೋ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.