Home latest Shimogga: ರಾಮಮಂದಿರ ಉದ್ಘಾಟನೆ, ಸಿಹಿ ವಿತರಣೆ ವೇಳೆ ಅಲ್ಲಾಹೋ ಅಕ್ಬರ್‌ ಘೋಷಣೆ ಕೂಗಿದ ಮಹಿಳೆ!!!

Shimogga: ರಾಮಮಂದಿರ ಉದ್ಘಾಟನೆ, ಸಿಹಿ ವಿತರಣೆ ವೇಳೆ ಅಲ್ಲಾಹೋ ಅಕ್ಬರ್‌ ಘೋಷಣೆ ಕೂಗಿದ ಮಹಿಳೆ!!!

Shimogga

Hindu neighbor gifts plot of land

Hindu neighbour gifts land to Muslim journalist

Shivamogga: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ(Ayodhya Ram Mandir Inaguration) ನಿಟ್ಟಿನಲ್ಲಿ ಶಿವಮೊಗ್ಗದ (Shivamogga) ಹಿಂದು ಕಾರ್ಯಕರ್ತರು(Hindu Activists) ಸಿಹಿ ವಿತರಣೆ ಮಾಡಿದ್ದು, ಈ ಸಂದರ್ಭ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆಗ ಅದೇ ದಾರಿಯಲ್ಲಿ ಬಂದ ಮುಸ್ಲಿಂ ‌ಮಹಿಳೆಯೊಬ್ಬರು ‘ಅಲ್ಲಾಹೋ‌ ಅಕ್ಬರ್’ ಘೋಷಣೆ (Muslim Women Shouted Allaho Akbar)ಕೂಗಿದ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Ram Mandir ಪ್ರಾಣ ಪ್ರತಿಷ್ಠೆಗೆ ನಿತ್ಯಾನಂದ; ಅಚ್ಚರಿಯ ಹೇಳಿಕೆ!!

‘ಅಲ್ಲಾಹೋ‌ ಅಕ್ಬರ್’ ಘೋಷಣೆ ಕೂಗಿದ ಮುಸ್ಲಿಂ ‌ಮಹಿಳೆ ನೀವು ಮೋದಿ‌ ಪರ ಕೆಲಸ ಮಾಡುತ್ತಿದ್ದೀರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದು, ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ.ಮುಸ್ಲಿಂ ಮಹಿಳೆಯ ಘೋಷಣೆಗೆ ಸ್ಥಳದಲ್ಲಿದ್ದ ಹಿಂದು ಕಾರ್ಯಕರ್ತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಬಿಜೆಪಿ ಮುಖಂಡ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಮುಸ್ಲಿಂ ಮಹಿಳೆಯನ್ನು ಬಂಧಿಸುವಂತೆ ಪೊಲೀಸರನ್ನು ಆಗ್ರಹಿಸಿದ ಘಟನೆ ಕೂಡ ನಡೆದಿದೆ ಎನ್ನಲಾಗಿದೆ.