Home latest ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ‘ಎಂವಿ ಪ್ರಿನ್ಸಸ್ ಮಿರಲ್’ ಹಡಗು; ಕೋಸ್ಟ್ ಗಾರ್ಡ್ ಪಡೆಯಿಂದ...

ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ‘ಎಂವಿ ಪ್ರಿನ್ಸಸ್ ಮಿರಲ್’ ಹಡಗು; ಕೋಸ್ಟ್ ಗಾರ್ಡ್ ಪಡೆಯಿಂದ 15 ಮಂದಿಯ ರಕ್ಷಣೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಹಡಗೊಂದು ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಇಂಡಿಯನ್ ಕೋಸ್ಟ್ ಗಾರ್ಡ್ ಪಡೆ 15 ಮಂದಿ ಸಿಬ್ಬಂದಿಯನ್ನು ರಕ್ಷಣೆ ಮಾಡಿರುವ ಘಟನೆ ವರದಿಯಾಗಿದೆ.

ಮಂಗಳೂರಿನಿಂದ 5.6 ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಸಿರಿಯಾ ಮೂಲದ ಹಡಗೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದು, ಹಡಗಿನ ಒಳ ಭಾಗಕ್ಕೆ ನೀರು ನುಗ್ಗಿದೆ ಎನ್ನಲಾಗಿದೆ.

ಇದು ಸಿರಿಯಾ ದೇಶಕ್ಕೆ ಸೇರಿದ ಎಂವಿ ಪ್ರಿನ್ಸಸ್ ಮಿರಲ್ ಹಡಗು ಇದಾಗಿದ್ದು, ಅಪಾಯದಲ್ಲಿರುವ ರೇಡಿಯೋ ಸಂದೇಶ ಕೋಸ್ಟ್ ಗಾರ್ಡ್ ಪಡೆಗೆ ತಲುಪಿದೆ. ತಕ್ಷಣ ಕಾರ್ಯಾಚರಣೆ ಮಾಡಿ ಹಡಗಿನಲ್ಲಿದ್ದ 15 ಮಂದಿಯನ್ನ ರಕ್ಷಣೆ ಮಾಡಿದ್ದಾರೆ. ಚೀನಾದಿಂದ ಸಿರಿಯಾಕ್ಕೆ 8,000 ಟನ್ ಖನಿಜ ಹೊತ್ತು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದ್ದು, ಆಳ ಸಮುದ್ರದಲ್ಲಿ ಈ ಘಟನೆ ನಡೆದಿದೆ.