Home Karnataka State Politics Updates Shiv Sena : ಉದ್ದವ್ ಠಾಕ್ರೆ ಬಣದಿಂದ ಏಕನಾಥ್ ಶಿಂದೆ ಬಣಕ್ಕೆ ಜಾರಿದ ‘ಶಿವಸೇನೆ...

Shiv Sena : ಉದ್ದವ್ ಠಾಕ್ರೆ ಬಣದಿಂದ ಏಕನಾಥ್ ಶಿಂದೆ ಬಣಕ್ಕೆ ಜಾರಿದ ‘ಶಿವಸೇನೆ ಹೆಸರು,ಚಿಹ್ನೆ’

Hindu neighbor gifts plot of land

Hindu neighbour gifts land to Muslim journalist

ಮುಂಬೈ : ಎರಡು ಬಣಗಳಾಗಿ ಒಡೆದು ಹೋಗಿದ್ದ ಮಹಾರಾಷ್ಟ್ರದ ‘ಶಿವಸೇನೆ’ ಪಕ್ಷದ ಹೆಸರು ಮತ್ತು ಚಿಹ್ನೆ ಏಕನಾಥ್‌ ಶಿಂಧೆ ಬಣದ ಪಾಲಾಗಿದೆ. ಈ ಮೂಲಕ ಉದ್ದವ್ ಠಾಕ್ರೆ ಬಣಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ.

ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.

ತಮ್ಮ ಬಣವವೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ’ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.