Home News ಜೋರಾಗಿ ಬೀಸಿದ ಬಿರುಗಾಳಿಗೆ ಕುಸಿದ ಶಾಮಿಯಾನ | ಡಾ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ, ಶಾಸಕ ಅಪಾಯದಿಂದ...

ಜೋರಾಗಿ ಬೀಸಿದ ಬಿರುಗಾಳಿಗೆ ಕುಸಿದ ಶಾಮಿಯಾನ | ಡಾ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ, ಶಾಸಕ ಅಪಾಯದಿಂದ ಪಾರು!

Hindu neighbor gifts plot of land

Hindu neighbour gifts land to Muslim journalist

ಶನಿವಾರ ನೂರಾರು ಜನರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಮಿಯಾನ ಕುಸಿದು ಬಿದ್ದ ಘಟನೆಯೊಂದು ತುಮಕೂರು ಜಿಲ್ಲೆಯ 30 ನೇ ವಾರ್ಡ್ ಮ ಗಾರೆನರಸಯ್ಯ ಕಟ್ಟೆಯಲ್ಲಿ ನಡೆದಿದೆ.

ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿ‌ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ , ಶಾಸಕ ಜೆ ಬಿ ಜ್ಯೋತಿ ಗಣೆಶ್, ಮೇಯರ್ ಬಿ.ಜಿ.ಕೃಷ್ಣಪ್ಪ ಸೇರಿದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾರೆನರಸಯ್ಯ ಕಟ್ಟೆ ( ಕೆರೆ)ಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅಭಿವೃದ್ಧಿ ಪಡಿಸಲಾಗಿತ್ತು. ಈ ಕೆರೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಹಿನ್ನೆಲೆ ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಎಲ್ಲಾ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಮುಂಭಾಗ ನೂರಾರು ಜನ ಆಸೀನರಾಗಿದ್ದರು. ಈ ವೇಳೆ ರಭಸವಾಗಿ ಬೀಸಿದ ಬಿರುಗಾಳಿಗೆ ಶಾಮಿಯಾನ ಕುಸಿದಿದೆ. ಭಯದಿಂದ ಜನ ದಿಕ್ಕುಪಾಲಾಗಿ ಓಡಿದ್ದಾರೆ.