Home News ಅತ್ತಿತ್ತಾ ನೋಡದೆ, ತಮ್ಮದೇ ಲೋಕದಲ್ಲಿ ಧಾರವಾಹಿ ವೀಕ್ಷಿಸುತ್ತಿದ್ದ ಮಹಿಳೆಯರು!! ಅಷ್ಟರಲ್ಲಾಗಲೇ ಅಲ್ಲಿಗೇ ಎಂಟ್ರಿಯಾದ ಇಬ್ಬರು ಮುಸುಕುಧಾರಿಗಳು!

ಅತ್ತಿತ್ತಾ ನೋಡದೆ, ತಮ್ಮದೇ ಲೋಕದಲ್ಲಿ ಧಾರವಾಹಿ ವೀಕ್ಷಿಸುತ್ತಿದ್ದ ಮಹಿಳೆಯರು!! ಅಷ್ಟರಲ್ಲಾಗಲೇ ಅಲ್ಲಿಗೇ ಎಂಟ್ರಿಯಾದ ಇಬ್ಬರು ಮುಸುಕುಧಾರಿಗಳು!

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರು ಧಾರಾವಾಹಿ ನೋಡುತ್ತಾ ಕೂತರೆ ಜಗತ್ತೇ ತಲೆಕೆಳಗಾದರೂ ಗೊತ್ತಾಗುವುದಿಲ್ಲ ಎಂಬುದು ಹಲವು ಪುರುಷರ ಆರೋಪ. ಆದರೆ ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆ ಪುರುಷರ ವಾದ ಸತ್ಯ ಎಂಬಂತೆ ಬಿಂಬಿಸುತ್ತಿದೆ.

ಹೌದು, ಧಾರಾವಾಹಿ ನೋಡುತ್ತಾ ಕುಳಿತಿದ್ದ ಮಹಿಳೆಯರಿಬ್ಬರು ಜಗತ್ತಿನ ಅರಿವೇ ಇಲ್ಲದಂತೆ ಧಾರಾವಾಹಿಯ ಕಥೆಯೊಳಗೆ ಮುಳುಗಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ನಾಲ್ವರು ಕಳ್ಳರು ಮನೆಯೊಳಗೆ ನುಗ್ಗಿ 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯೊಳಗೆ ಕಳ್ಳರು ಬಂದು ದರೋಡೆ ಮಾಡಿದರೂ ಆ ಇಬ್ಬರು ಮಹಿಳೆಯರಿಗೆ ಗೊತ್ತೇ ಇಲ್ಲ.

ತಮಿಳುನಾಡಿನ ಕಾಂಚಿಪುರಂನಲ್ಲಿ ಕಳೆದ ರಾತ್ರಿ ಈ ವಿಚಿತ್ರವಾದ ಘಟನೆ ನಡೆದಿದೆ. ಆಡಿಟರ್ ಆಗಿರುವ ಮನೆ ಮಾಲೀಕ ಮೇಘನಾಥನ್ ಮನೆಯಲ್ಲಿರಲಿಲ್ಲ. ಆಗ ಮೇಘನಾಥನ್ ಅವರ ಹೆಂಡತಿ ತನ್ನ ಸಂಬಂಧಿಕರೊಂದಿಗೆ ಸೀರಿಯಲ್ ನೋಡುತ್ತಿದ್ದರು. ಈ ವೇಳೆ ಅವರು ಮನೆ ಬಾಗಿಲನ್ನು ಹಾಕುವುದನ್ನು ಮರೆತಿದ್ದರು. ಜೋರಾಗಿ ವಾಲ್ಯೂಮ್ ಇಟ್ಟುಕೊಂಡು ಆ ಮಹಿಳೆಯರಿಬ್ಬರೂ ಧಾರಾವಾಹಿ ನೋಡುತ್ತಿದ್ದರು.

ಆಗ ಮನೆಯೊಳಗೆ ನುಗ್ಗಿದ ಮುಸುಕುಧಾರಿ ದರೋಡೆಕೋರರಿಬ್ಬರು ತೆರೆದ ಬಾಗಿಲಿನಿಂದ ಸೈಲೆಂಟಾಗಿ ಒಳಗೆ ಹೋಗಿ ನೋಡಿದ್ದಾರೆ. ಆಗ ಹಾಲ್‌ನಲ್ಲಿ ಟಿವಿ ನೋಡುತ್ತಾ ಇಬ್ಬರು ಮಹಿಳೆಯರು ಮೈಮರೆತಿರುವುದನ್ನು ನೋಡಿದರು. ಹಾಗೇ, ರೂಮಿನೊಳಗೆ ಹೋಗಿ ಅಲ್ಲಿದ್ದ ಹಣವನ್ನೆಲ್ಲ ದೋಚಿಕೊಂಡರು. ಆದರೆ, ವಾರ್ಡ್‌ರೋಬ್‌ನ ಕೀ ಎಲ್ಲಿದೆ ಎಂದು ಗೊತ್ತಾಗಲಿಲ್ಲ. ಹೀಗಾಗಿ, ಹಾಲ್‌ಗೆ ಬಂದು ಟಿವಿ ನೋಡುತ್ತಿದ್ದ ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ, ಕೀ ಕೇಳಿದರು.

ಆಗಲೇ ತಮ್ಮ ಮನೆಯೊಳಗೆ ದರೋಡೆಕೋರರು ಬಂದಿದ್ದಾರೆ ಎಂಬ ವಿಷಯ ಅರಿವಾಗಿದೆ. ಕಳ್ಳರು ಅವರಿಬ್ಬರನ್ನೂ ಕಟ್ಟಿ ಹಾಕಿ ವಾರ್ಡ್‌ರೋಬ್ ನಲ್ಲಿದ್ದ ಒಡವೆ, ಹಣವನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ. ಚಾಕು ತೋರಿಸಿ, ಹೆದರಿಸಿ ಮನೆಯೊಳಗಿನ 19 ಲಕ್ಷ ರೂ. ಮೌಲ್ಯದ ಒಡವೆ, ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಾಲ್ವರು ಬೈಕ್ ಗಳಲ್ಲಿ ಬಂದು, ಅವರಲ್ಲಿ ಇಬ್ಬರು ಗೇಟ್ ಬಳಿ ಕಾವಲು ಕಾಯುತ್ತಿದ್ದರು ಮತ್ತು ಇಬ್ಬರು ಮನೆಯೊಳಗೆ ನುಗ್ಗಿ ದರೋಡೆ ಮಾಡಿರುವುದು ಕಂಡು ಬಂದಿದೆ.