Home News ಸರ್ವೆ ಹಿಂ.ಜಾ.ವೇ.ಯಿಂದ ಅಶಕ್ತ ಕುಟುಂಬಗಳಿಗೆ‌ ಕಿಟ್ ವಿತರಣೆ,ಕಾರ್ಯಕರ್ತರಿಗೆ ಭಗವದ್ಗೀತೆ ಪ್ರತಿ ವಿತರಣೆ

ಸರ್ವೆ ಹಿಂ.ಜಾ.ವೇ.ಯಿಂದ ಅಶಕ್ತ ಕುಟುಂಬಗಳಿಗೆ‌ ಕಿಟ್ ವಿತರಣೆ,ಕಾರ್ಯಕರ್ತರಿಗೆ ಭಗವದ್ಗೀತೆ ಪ್ರತಿ ವಿತರಣೆ

Hindu neighbor gifts plot of land

Hindu neighbour gifts land to Muslim journalist

ಸವಣೂರು : ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಇದರ ನೂತನ ಪದಾಧಿಕಾರಿಗಳ ನೇಮಕ , ಅಶಕ್ತ ಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಕಾರ್ಯಕರ್ತರಿಗೆ ಭಗವದ್ಗೀತೆ ವಿತರಣಾ ಕಾರ್ಯಕ್ರಮ ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸೆ.5ರಂದು ನಡೆಯಿತು.

ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆಯ ನೂತನ ಅಧ್ಯಕ್ಷರಾಗಿ ಜಯಂತ್ ಭಕ್ತಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ್ ಸರ್ವೆ,ಉಪಾಧ್ಯಕ್ಷರಾಗಿ ಯತೀಶ್ ತೌಡಿಂಜ , ಜೊತೆ ಕಾರ್ಯದರ್ಶಿ ಯಾಗಿ ಹರ್ಷಿತ್ ಸರ್ವೆ ಮತ್ತು ಮನೋಜ್ ಕಟ್ಟದಡ್ಕ, ಮಾತೃ ಸಂಯೋಜಕ್ ರಮೇಶ್ ಕಿನ್ಯ, ಸಂಪರ್ಕ ಪ್ರಮುಖ್ ಕಿರ್ತೇಶ್ ಸರ್ವೆ,ಪ್ರಚಾರ ಪ್ರಮುಖ್ ದೇವಪ್ಪ ಕಾಡಬಾಗಿಲು ಯುವವಾಹಿನಿ ಪ್ರಸಾದ್ ಸರ್ವೆ ಜವಾಬ್ದಾರಿ ವಹಿಸಿಕೊಂಡರು.

ಎಸ್.ಜಿ. ಎಂ. ಪ್ರೌಢ ಶಾಲೆಯ ನಿವೃತ ಶಿಕ್ಷಕಿ ಶ್ರೀಮತಿ ಪಿ. ಹೆಗ್ಡೆ ಹಿಂದು ಜಾಗರಣ ವೇದಿಕೆಯ 50 ಮನೆಗಳಿಗೆ ಭಗವದ್ಗೀತೆ ನೀಡಿದರು.

ಸರ್ವೆ ಗ್ರಾಮದ ನಾಲ್ಕು ಅಶಕ್ತ ಕುಟುಂಬಗಳಿಗೆ ನಿತ್ಯ ಉಪಯೋಗದ ಜೀನಸು ಸಾಮಾನುಗಳನ್ನು ಮತ್ತು ತಲಾ 25ಕೆಜಿ ಅಕ್ಕಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಮಹತ್ವವನ್ನು ಸುಬ್ರಹ್ಮಣ್ಯ ದೇವಸ್ಥಾನ ಸರ್ವೆಯ ಪ್ರದಾನ ಅರ್ಚಕರು ಶ್ರೀರಾಮ ಕಲ್ಲೂರಾಯ ತಿಳಿಸಿದರು.ಜಾಗರಣ ವೇದಿಕೆ ಪುತ್ತೂರಿನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ, ವಲಯ ಕಾರ್ಯದರ್ಶಿ ಅವಿನಾಶ್ , ಶಿವಪ್ರಸಾದ್ ಕೈದಾಂಡಿ,ಯೋಗೀಶ್ ಸರ್ವೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಎನ್.ಎಸ್.ಡಿ., ಕರುಣಾಕರ ಗೌಡ ಎಲಿಯ ಬಿಜೆಪಿ ಸರ್ವೆ ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ ಸೊರಕ್ಕೆ, ಬಿಜೆಪಿ ಸರ್ವೆ ಬೂತ್ ಅಧ್ಯಕ್ಷ ಗೌತಮ್ ರೈ ಸರ್ವೆ, ಬಿಜೆಪಿ ಪುತ್ತೂರು ತಾಲೂಕು ಎಸ್.ಸಿ ಮೋರ್ಚಾದ ಕಾರ್ಯದರ್ಶಿ ಜನಾರ್ದನ ಸರ್ವೆ, ಜಾಗರಣ ವೇದಿಕೆಯ ಕಾರ್ಯಕರ್ತರಾದ ಪದ್ಮನಾಭ ಸರ್ವೆ,ನವೀನ್ ಸರ್ವೆ,ಜಿತೇಶ್ ಸರ್ವೆ,ಪ್ರಸಾದ್, ದೇವಪ್ಪ ಪೂಜಾರಿ,ಯೋಗೀಶ್ ಸರ್ವೆ,ಶ್ರೀನಿವಾಸ್,ವೆಂಕಪ್ಪ ಸರ್ವೆ,ತಿರ್ತೆಶ್, ಉಪಸ್ಥಿತರಿದ್ದರು.ಸ್ವಸ್ತಿಕ್ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿದರು.