Home News ನಿಮಗಿಷ್ಟವಾದ ರಸ್ಕ್ ತಯಾರಿಸುವ ಅದೊಂದು ಬೇಕರಿ ಯ ಒಳನೋಟ!!ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಬಗೆ ಬಗೆ...

ನಿಮಗಿಷ್ಟವಾದ ರಸ್ಕ್ ತಯಾರಿಸುವ ಅದೊಂದು ಬೇಕರಿ ಯ ಒಳನೋಟ!!ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಬಗೆ ಬಗೆ ತಿಂಡಿಯ ಪ್ಯಾಕಿಂಗ್

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ರೀತಿಯ ವಿಡಿಯೋಗಳು ಶೇರ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಹೃದಯಸ್ಪರ್ಶಿ ವಿಡಿಯೋಗಳಾಗಿದ್ದರೆ, ಕೆಲವು ವಿಷಯಗಳು ತುಂಬಾನೇ ಶಾಕ್ ನೀಡುತ್ತವೆ. ಈ ರೀತಿಯಲ್ಲಿ ಶಾಕ್ ನೀಡುವ ವೀಡಿಯೋವೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಕೆಲಸಗಾರರ ಗುಂಪೊಂದು ತಮ್ಮ ಪಾದಗಳಿಂದ ರಸ್ಕ್‌ಗಳನ್ನು ತುಳಿಯುವುದರ ಜೊತೆಗೆ ಕೆಲವು ರಸ್ಕ್‌ಗಳನ್ನು ನೆಕ್ಕಿ ಪ್ಯಾಕಿಂಗ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಕಾರ್ಖಾನೆಯಲ್ಲಿ ಕೆಲಸಗಾರರು ಒಟ್ಟಿಗೆ ಕುಳಿತುಕೊಂಡು ರಸ್ಕ್ ಪ್ಯಾಕ್ ಮಾಡುತ್ತಿರುತ್ತಾರೆ. ಈ ವೇಳೆ ವ್ಯಕ್ತಿಗಳಿಬ್ಬರು ಕುಳಿತುಕೊಂಡು ಉದ್ದೇಶಪೂರ್ವಕವಾಗಿ ತಮ್ಮ ಪಾದವನ್ನು ರಸ್ಕ್ ಮೇಲೆ ಇಡುವುದನ್ನು ಕಾಣಬಹುದಾಗಿದೆ. ಅಲ್ಲದೇ ನೆಲದ ಮೇಲೆ ಟ್ರೇನಲ್ಲಿ ಇರಿಸಲಾದ ರಸ್ಕ್‌ಗಳನ್ನು ಉಗುಳಿ, ನೆಕ್ಕಿ ಕವರ್‍ನಲ್ಲಿ ಪ್ಯಾಕಿಂಗ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಈ ವೀಡಿಯೋವನ್ನು ಶಿವಕುಮಾರ್ ಪಾರ್ಥಸಾರಥಿ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಸಾವಿರಾರು ಬೇಕರಿಗಳನ್ನು ಅಲ್ಲಿನ ಕೆಲಸಗಾರರು ಹಾಳು ಮಾಡುತ್ತಿದ್ದಾರೆ. ಈ ವೀಡಿಯೋ ರಾಜ್ಯದ ಪೊಲೀಸರಿಗೆ ತಲುಪುವವರೆಗೂ ಶೇರ್ ಮಾಡಿ. ಪೊಲೀಸರಿಗೆ ಇವರನ್ನು ಪತ್ತೆ ಹಚ್ಚುವುದು ಕಷ್ಟವಲ್ಲ. ಅಧಿಕಾರಿಗಳಿಗೆ ತಲುಪುವವರೆಗೂ ಕೇವಲ ಶೇರ್ ಮಾಡಿ. ಸ್ನೇಹಿತರೇ ಇದನ್ನು ನೀವು ಎಷ್ಟು ಬೇಗ ಶೇರ್ ಹಾಗೂ ಫಾರ್ವರ್ಡ್ ಮಾಡುತ್ತಿರೋ ಅಷ್ಟು ಬೇಗ ಕಿಡಿಗೇಡಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.