Home Breaking Entertainment News Kannada ಕಾಂತಾರ 2 ಸಿನಿಮಾದ ಯೋಚನೆಯೇ ಇಲ್ಲ ಎಂದ ರಿಷಬ್ ಶೆಟ್ಟಿ, ಹಾಗಾದ್ರೆ ಕಾಂತಾರ 2 ಬರೋದೇ...

ಕಾಂತಾರ 2 ಸಿನಿಮಾದ ಯೋಚನೆಯೇ ಇಲ್ಲ ಎಂದ ರಿಷಬ್ ಶೆಟ್ಟಿ, ಹಾಗಾದ್ರೆ ಕಾಂತಾರ 2 ಬರೋದೇ ಇಲ್ವಾ ?!

Hindu neighbor gifts plot of land

Hindu neighbour gifts land to Muslim journalist

ನಟ-ನಿರ್ದೇಶಕ-ಬರಹಗಾರ ರಿಷಬ್ ಶೆಟ್ಟಿ ಅವರೀಗ ಜಗತ್ತಿನ ಸಿನಿ ಮಂದಿಯ ನಿದ್ದೆಗೆಡಿಸಿದ, ವಿಶ್ವಕ್ಕೇ ಇಷ್ಟವಾದ ಚಿತ್ರದ ಮುಂದುವರಿದ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಸುದ್ದಿ ಬಂದಿದೆ. ಕಾಂತಾರ 2 ಸದ್ಯಕ್ಕಿಲ್ಲ ಎನ್ನುವ ವಿಷಯವನ್ನು ಸ್ವತಹ ರಿಷಬ್ ಶೆಟ್ಟಿ ಅವರೇ ಬಹಿರಂಗಪಡಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿರುವ ರಿಷಬ್ ಶೆಟ್ಟಿ, ಸದ್ಯಕ್ಕೆ ಕಾಂತಾರ 2 ಸಿನಿಮಾದ ಬಗ್ಗೆ ಏನೂ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಕಾಂತರ 2 ಚಿತ್ರದ ಬಗ್ಗೆ ದೈವವನ್ನು ಕೇಳುವುದಕ್ಕಿಂತ ಮುಂಚೆ ಆಗಲೇ ಸ್ಕ್ರಿಪ್ಟ್ ಕೆಲಸದಲ್ಲೂ ಅವರು ತೊಡಗಿದ್ದಾರೆ ಎಂದು ಹೇಳಲಾಗಿತ್ತು. ಟೀಮ್ ಕಟ್ಟಿಕೊಂಡು ಕಾಂತಾರ 2 ಕಥೆಯನ್ನು ಹೆಣೆಯುತ್ತಿದ್ದಾರೆ. ಕಾಂತಾರ ದ ಬಹುತೇಕರು ಕಾಂತಾರ 2 ನಲ್ಲಿ ಇರ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಕಾಂತಾರ 2 ಸಿನಿಮಾ ಬಗ್ಗೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳುವ ಮೂಲಕ ಸಿನಿ ರಸಿಕರಿಗೆ ನಿರಾಸೆ ಆಗಿದೆ.

ಹಾಗಾದ್ರೆ ಅಂತಾರಾ ಸಕ್ಸಸ್ ಅಲಂಕಾರ 2 ಚಿತ್ರದ ಬಗ್ಗೆ ಯೋಚನೆ ಮಾಡಿಲ್ಲ ಅಂದರೆ ಕಾಂತಾರದ ಎರಡನೆಯ ಅವತಾರಣಿಕೆ ಬರುವುದೇ ಇಲ್ವಾ ? ಎಂಬ ಅನುಮಾನ ಕೂಡ ಬರುವುದು ಸಹಜ. ಸದ್ಯದ ರಿಷಬ್ ಶೆಟ್ಟಿ ಅವರ ಹೇಳಿಕೆಯ ಪ್ರಕಾರ ಕಾಂತಾರಾ 2 ಬಗ್ಗೆ ಯೋಚನೆ ಇಲ್ಲ. ಯೋಚನೆ ಇಲ್ಲ ಅಂದ ಕೂಡಲೇ ಸಿನಿಮಾವೇ ಬರಲ್ಲ ಅಂದುಕೊಳ್ಳೋದು ತಪ್ಪಾಗುತ್ತೆ, ಚಿನ್ನದ ಮೊಟ್ಟೆ ಇಟ್ಟ ಕೋಳಿಯಿಂದ ಮತ್ತೊಂದು ಬಾರಿ ಮೊಟ್ಟೆಯನ್ನು ನಿರೀಕ್ಷಿಸದೆ ಇರುವುದು ಸಾಧ್ಯವೇ ಇಲ್ಲ. ಸಿನಿ ಪ್ರೇಕ್ಷಕರ ಮನರಂಜನೆಯ ದೃಷ್ಟಿಯಿಂದ ಮತ್ತು ವ್ಯವಹಾರದ ದೃಷ್ಟಿಯಿಂದ ಕಾಂತಾರಾ ಟು ಬಂದೇ ಬರುತ್ತೆ. ಆದರೆ ಸದ್ಯಕ್ಕೆ ಯೋಚನೆ ಇಲ್ಲ ಅಂದಿದ್ದಾರೆ ಶೆಟ್ರು.

ಆದರೆ ಕಾಂತಾರ ಚಿತ್ರದ ಪ್ರಮುಖ ಪಾತ್ರ ಒಂದು ಹೇಳಿದ್ದೇ ಬೇರೆ. ‘ದೈವ ನರ್ತಕ’ ಉಮೇಶ್ ಗಂಧಕಾಡು ಅವರ ಪ್ರಕಾರ, ರಿಷಬ್ ಅವರು ‘ಕಾಂತಾರ’ ಸೀಕ್ವೆಲ್ ಮಾಡಲು ದೇವರ ಅನುಮತಿ ಕೋರಿದ್ದರು. ಜೊತೆಗೆ ‘ಸ್ಥಳೀಯ ದೇವರು ತನ್ನ ಒಪ್ಪಿಗೆಯನ್ನು ನೀಡಿದ್ದಾನೆ’. ಮಂಗಳೂರಿನಲ್ಲಿ ಪಂಜುರ್ಲಿ ಸೇವೆಯನ್ನು ನಡೆಸುವಂತೆ ರಿಷಬ್ ಶೆಟ್ಟಿ ಕೇಳಿಕೊಂಡಿದ್ದರು. ಬಂದಲೆಯಲ್ಲಿರುವ ಮಡಿವಾಳಬೆಟ್ಟು ದೇವಸ್ಥಾನದಲ್ಲಿ ಈ ಸೇವೆ ಸಲ್ಲಿಸಿದ್ದೇನೆ’ ಎಂದು ‘ದೈವ ನರ್ತಕ’ ಹೇಳಿದ್ದಾರೆಂದು ವರದಿಯಾಗಿದೆ. ಅಲ್ಲದೇ, ಸರಿಯಾದ ಕ್ರಮದಲ್ಲಿ ಮತ್ತು ನಂಬಿಕೆ ಹಾಗೂ ಶ್ರದ್ಧೆಯಿಂದ ಸಿನಿಮಾ ಮಾಡುವಂತೆ ಸೂಚಿಸಿತ್ತು. ದೈವವೇ ಸಿನಿಮಾ ಮಾಡುವಂತೆ ಗ್ರೀನ್ ಸಿಗ್ನಲ್ ಕೊಟ್ಟನಂತರ ರಿಷಬ್ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಿಷಬ್ ಹೇಳಿದ್ದೇ ಬೇರೆ. ಸದ್ಯಕ್ಕೆ ಪಾರ್ಟ್ 2 ಸಿನಿಮಾದ ಯೋಚ್ನೆನೇ ಇಲ್ಲ ಅಂತಿದ್ದಾರೆ ರಿಷಬ್ ಶೆಟ್ಟಿ.

ಕಾಂತಾರ 2 ಸದ್ಯಕ್ಕೆ ಮಾಡುತ್ತಿಲ್ಲ ಎಂದು ರಿಷಬ್ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಂತೆಯೇ ಬೆಲ್ ಬಾಟಮ್ 2 ಮಾಡ್ತಾರೆ ಅನ್ನುವ ಸಿನಿಮಾದ ಸುದ್ದಿಗೆ ಮಹತ್ವ ಬಂದಿದೆ. ಆದ್ರೆ ಕಾಂತಾರದಂತಹ ಹೈ ಪ್ರೊಫೈಲ್ ಸಬ್ಜೆಕ್ಟ್ ಕೈಯಲ್ಲಿ ಇರುವಾಗ ಸಣ್ಣ ಪುಟ್ಟ ಪ್ರಾಜೆಕ್ಟ್ ಅನ್ನು ಕೈ ಹಾಕಲಾರರು ಎನ್ನುವುದು ಅನುಭವಸ್ಥರ ಮಾತುಗಳು. ಒಂದು ವೇಳೆ ಬಿಲ್ ಬಾಟಮ್ 2 ಕ್ಲಿಕ್ ಆಗಿಲ್ಲ ಅಂದಿಟ್ಟುಕೊಳ್ಳಿ, ಅವಾಗ, ‘ ನಿರ್ದೇಶಕ ರಿಶಬ್ ಶೆಟ್ಟಿಯ ಸಿನಿಮಾ ಸೋತಿತು ‘ ಅನ್ನುವುದು ಜನರ ಮನಸ್ಸಿನಲ್ಲಿ ರಿಜಿಸ್ಟರ್ ಆಗುತ್ತೆ. ಅದು ಮುಂದೆ ಬರುವ ಕಾರ್ತಾರ 2 ಚಿತ್ರಕ್ಕೂ ತೊಂದರೆ ಕೊಡಬಹುದು. ಹಾಗಾಗಿ ಸಕ್ಸಸ್ ಸಬ್ಜೆಕ್ಟ್ ಇಟ್ಟುಕೊಂಡು ಬೇರೆ ಪ್ರಾಜೆಕ್ಟ್ ಗೆ ಕೈ ಹಾಕಿ ಶೆಟ್ಟರು ರಿಸ್ಕ್ ತೆಗೆದು ಕೊಳ್ಳಲಾರರು ಎನ್ನುವುದು ವ್ಯವಹಾರಸ್ಥರ ಮಾತು.