Home News L.R.Shivaramegowda: ರೇವಣ್ಣ ಈ ಹಿಂದೆ ಕೂಡಾ ತಗಳಾಕ್ಕೊಂಡಿದ್ರು, ಪ್ರಜ್ವಲ್ ರೇವಣ್ಣ ಮುಂದೆ ಸೈಕೋಪಾತ್ ಉಮೇಶ್ ರೆಡ್ಡಿ...

L.R.Shivaramegowda: ರೇವಣ್ಣ ಈ ಹಿಂದೆ ಕೂಡಾ ತಗಳಾಕ್ಕೊಂಡಿದ್ರು, ಪ್ರಜ್ವಲ್ ರೇವಣ್ಣ ಮುಂದೆ ಸೈಕೋಪಾತ್ ಉಮೇಶ್ ರೆಡ್ಡಿ ಶೂನ್ಯ – ನಾಗೇಗೌಡ ಉರಿ ಉರಿ !

L.R.Shivaramegowda

Hindu neighbor gifts plot of land

Hindu neighbour gifts land to Muslim journalist

L.R.Shivaramegowda: “ಅಯ್ಯೋ, ಈ ಎಚ್ .ಡಿ ರೇವಣ್ಣನವರದ್ದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಇಂಗ್ಲೆಂಡ್ನಲ್ಲಿ ಒಂದ್ಸಲ ಅವ್ರು ತಗಲಾಕ್ಕೊಂಡಿದ್ರು ಎಂದು ಜೆಡಿಎಸ್ ಮಾಜಿ ಸಂಸದರೂ, ಒಂದು ಕಾಲದ ಗೌಡರ ಕುಟುಂಬದ ಪರಮಾಪ್ತರೂ ಆಗಿರುವ ಎಲ್.ಆರ್ ಶಿವರಾಮೇಗೌಡ ಹೊಸ ಸುದ್ದಿ ಕೊಟ್ಟಿದ್ದಾರೆ.

ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, “ಹೆಚ್. ಡಿ ರೇವಣ್ಣನವರು ಒಳ್ಳೆಯ ನಡವಳಿಕೆಯ ವ್ಯಕ್ತಿಯಲ್ಲ. ಒಮ್ಮೆ ರೇವಣ್ಣ ಇಂಗ್ಲೆಂಡ್ ಗೆ ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು. ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡಲ್ಲೂ ನಡೆದಿತ್ತು” ಎಂದು ಶಿವರಾಮೇಗೌಡ ಹೇಳಿದ್ದಾರೆ.

” ಏನಪ್ಪಾ ಇವ್ರು. ಬ್ಲ್ಯೂ ಫಿಲ್ಮ್‌ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋಗಳು ಇದಾವೋ ಇಲ್ಲವೋ ಗೊತ್ತಿಲ್ಲ” ಎಂದು ಪ್ರಜ್ವಲ್‌ ರೇವಣ್ಣ ವಿರುದ್ಧ ಶಿವರಾಮೇಗೌಡ ಗುಡುಗಿದ್ದಾರೆ. ಪಾಪ, ದೊಡ್ಡ ಗೌಡ ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ನೀಚ ಕೃತ್ಯವನ್ನು ನೋಡುವ ದೌರ್ಭಾಗ್ಯ ಬಂದಿದೆ. ನನ್ನನ್ನೂ ಸೇರಿದಂತೆ ಹಲವರನ್ನು ಮುಗಿಸಿದ್ದು ಇದೇ ಕಂಪನಿ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆವತ್ತು ವಕೀಲ ಗಂಗಾಧರ್ ಕೊಲೆ ಕೇಸ್‌ನಲ್ಲಿ ನನ್ನನ್ನು ಸೇರಿಸಲು ದೇವೇಗೌಡ್ರು 8 ಕಿಲೋ ಮೀಟರ್‌ ಪಾದಯಾತ್ರೆ ಮಾಡಿದ್ದರು. ಇದೀಗ ಗೌಡ ಕಂಪನಿಯಿಂದ ನೊಂದವರ ಶಾಪವೇ ಇಂದು ಅವರಿಗೆ ತಟ್ಟಿದೆ” ಎಂದರು.

ಇದನ್ನೂ ಓದಿ: Mysore: ಕಿಡ್ನ್ಯಾಪ್‌ ಆಗಿದ್ದ ಸಂತ್ರಸ್ತ ಮಹಿಳೆಯ ರಕ್ಷಣೆ; ರೇವಣ್ಣ ಆಪ್ತ ಸಹಾಯಕನ ಮನೆಯಲ್ಲಿ ಪತ್ತೆ

“ಈಗ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಸನಕ್ಕೆ ಭೇಟಿ ನೀಡಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು. ಅನ್ಯಾಯ ಆಗಿರುವುದು ನಿಮ್ಮ ಕುಟುಂಬದಿಂದ ಕುಮಾರಸ್ವಾಮಿ. ಈಗ ಹಾಗಾಗಿ ನೀವು ಧಮ್ಕಿ ಹಾಕೋದನ್ನು ಬಿಟ್ಟುಬಿಡಿ. ಹಾಸನ ಡಿಸಿ ಸಾಹೇಬರ ಬಗ್ಗೆ ಕುಮಾರಸ್ವಾಮಿ‌ ಮಾತನಾಡಿದ್ದು ಸರಿಯಲ್ಲ. ಅವರು ಸರಿಯಾಗಿಯೇ ಮಾತನಾಡಿದ್ದಾರೆ ಎಂದಿದ್ದಾರೆ.

ಯಾರೂ ಮಾಡದಂತಹ ಘೋರ ಅಪರಾಧ ಮಾಡಿದ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣರನ್ನೂ ತಕ್ಷಣ ಬಂಧಿಸಬೇಕು. ಒಂದು ವೇಳೆ ತಂದೆ-ಮಗ ಇಬ್ಬರದೂ ಯಾವುದೇ ತಪ್ಪಿಲ್ಲದಿದ್ದರೆ ಅದನ್ನೂ ತನಿಖೆ ಬಹಿರಂಗಪಡಿಸಲಿ. ಪ್ರಜ್ವಲ್ ರೇವಣ್ಣ ಇಷ್ಟೊಂದೆಲ್ಲ ಆಟ ಆಡುವಾಗ ಅವರ ಅಪ್ಪ, ಅಮ್ಮ ಕತ್ತೆ ಕಾಯುತ್ತಿದ್ರಾ? ಇಂತಹ ವಿಕೃತ ಮನಸ್ಥಿತಿಯವರನ್ನು ನಾನು ಎಲ್ಲಿಯೂ ಈ ತನಕ ನೋಡೇ ಇಲ್ಲ. ಪ್ರಜ್ವಲ್ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Mangaluru Missing Case: ಸಿಟಿ ಸೆಂಟರ್‌ ಮಾಲ್‌ಗೆ ತಾಯಿ ಜೊತೆ ಬಂದ ಮಹಿಳೆ ನಾಪತ್ತೆ; ಪತ್ತೆಗೆ ಮನವಿ