Home News Fastrack ನಿಂದ ಬಿಡುಗಡೆಯಾಗಿದೆ ಅದ್ಭುತ ಸ್ಮಾರ್ಟ್‌ ವಾಚ್‌ | ಇದರ ಬೆಲೆ ಎಷ್ಟು ಗೊತ್ತೇ?

Fastrack ನಿಂದ ಬಿಡುಗಡೆಯಾಗಿದೆ ಅದ್ಭುತ ಸ್ಮಾರ್ಟ್‌ ವಾಚ್‌ | ಇದರ ಬೆಲೆ ಎಷ್ಟು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಸದ್ಯ ಸ್ಮಾರ್ಟ್ ವಾಚ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಂಪನಿಗಳು ಗ್ರಾಹಕರ ಗಮನಸೆಳೆಯಲು ವೈಶಿಷ್ಟ್ಯಗಳಿಂದ ಕೂಡಿದ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸುತ್ತಿದೆ. ಹಾಗೆಯೇ ಇದೀಗ ಭಾರತದ ಅಗ್ರಗಣ್ಯ ವಾಚ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಫಾಸ್ಟ್ರಾಕ್ ಕಂಪನಿ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್ ವಾಚ್ ಅನ್ನು ಲಾಂಚ್‌ ಮಾಡಿದೆ. ಸಂಸ್ಥೆ ಪರಿಚಯಿಸಿರುವ ಸ್ಮಾರ್ಟ್ ವಾಚ್ ನ ಹೆಸರು ರಿಫ್ಲೆಕ್ಸ್ ಬೀಟ್+ (Reflex Beat+) ಎಂದಾಗಿದೆ. ಇದು ಈ ಮೊದಲು ಲಾಂಚ್ ಆಗಿರುವ ಎಲ್ಲಾ ಫಿಟ್‌ನೆಸ್ ವಾಚ್‌ಗಳಿಗಿಂತ ಭಿನ್ನವಾಗಿದೆ. ಇನ್ನೂ, ಈ ಸ್ಮಾರ್ಟ್ ವಾಚ್ ನ ಬೆಲೆ ಎಷ್ಟು? ಫೀಚರ್ಸ್ ಹೇಗಿದೆ? ಎಂಬಿತ್ಯಾದಿ ಮಾಹಿತಿ ತಿಳಿಯೋಣ.

ಫೀಚರ್ಸ್: ರಿಫ್ಲೆಕ್ಸ್ ಬೀಟ್+ ಸ್ಮಾರ್ಟ್‌ವಾಚ್ 1.69 ಇಂಚಿನ ಅಲ್ಟ್ರಾ Vu ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿದೆ. ಹಾಗೂ 60hz ರಿಫ್ರೆಸ್‌ ರೇಟ್‌ ನ ಜೊತೆಗೆ 500 nits ಬ್ರೈಟ್‌ನೆಸ್ ಸಾಮರ್ಥ್ಯ ಕೂಡ ಪಡೆದಿದೆ. ಅಲ್ಲದೆ, ಈ ಸ್ಮಾರ್ಟ್ ವಾಚ್ ಯುಟಿಲಿಟಿ ಫೀಚರ್‌ಗಳ ಜೊತೆಗೆ 60 ಮಲ್ಟಿ ಸ್ಪೋರ್ಟ್ಸ್ ಮೋಡ್‌ನೊಂದಿಗೆ ಪ್ಯಾಕ್‌ ಆಗಿದ್ದು, ಹೃದಯ ಬಡಿತ ಮಾನಿಟರ್, ವುಮೆನ್ ಹೆಲ್ತ್ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು SpO2 ಮಾನಿಟರ್‌ನಂತಹ ಆರೋಗ್ಯದ ಫೀಚರ್ಸ್ ಕೂಡ ಇದರಲ್ಲಿದೆ.

ಈ ವಾಚ್‌ ಸಿಲಿಕಾನ್ ಪಟ್ಟಿಯೊಂದಿಗೆ ಪ್ಯಾಕ್‌ ಆಗಿದೆ. ಹಾಗಾಗಿ ಇದು ಮಣಿಕಟ್ಟಿನ ಮೇಲೆ ಹಿತಕರವಾದ ಅನುಭವವನ್ನು ನೀಡುತ್ತದೆ. ಕೈಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ. ಅಲ್ಲದೆ, ಈ ವಾಚ್ IP68 ರೇಟಿಂಗ್ ಆಯ್ಕೆ ಪಡೆದುಕೊಂಡಿದ್ದು, ಧೂಳು ಮತ್ತು ನೀರು-ನಿರೋಧಕವಾಗಿದೆ. ಇದರಿಂದ ಕ್ರೀಡೆ ಅಥವಾ ಇನ್ನಿತರೆ ಸಮಯದಲ್ಲಿ ಈ ವಾಚ್ ಅನ್ನು ಯಾವುದೇ ಸಮಸ್ಯೆ ಇಲ್ಲದೆ ಧರಿಸಬಹುದು. ಹಾಗೇ ಈ ವಾಚ್ ನಲ್ಲಿ 100+ ಕ್ಲೌಡ್ ವಾಚ್‌ಫೇಸ್‌ಗಳ ಆಯ್ಕೆ ನೀಡಲಾಗಿದ್ದು, ಬಳಕೆದಾರರು ತಮ್ಮ ವೈಯಕ್ತಿಕ ಶೈಲಿಗೆ ಹೊಂದಿಕೆಯಾಗುವ ಹಾಗೆ ವಾಚ್‌ ಫೇಸ್‌ಗಳನ್ನು ಕಸ್ಟಮೈಸ್ ಮಾಡಬಹುದು.

ಕ್ಯಾಮೆರಾ ಬಗ್ಗೆ ಹೇಳಬೇಕಾದರೆ, ರಿಫ್ಲೆಕ್ಸ್ ಬೀಟ್+ ಸ್ಮಾರ್ಟ್ವಾಚ್ ಕ್ಯಾಮೆರಾ ಕಂಟ್ರೋಲ್‌ ಮತ್ತು ಸಂಗೀತ ಕಂಟ್ರೋಲ್‌ ಒಳಗೊಂಡಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ. ನೋಟಿಫಿಕೇಶನ್, ಹವಾಮಾನ ಎಚ್ಚರಿಕೆಗಳು ಕೂಡ ಇದರಲ್ಲಿ ಲಭ್ಯವಿದೆ. ಅಲ್ಲದೆ, ಇದರಲ್ಲಿ ಕರೆಗಳನ್ನು ತಿರಸ್ಕರಿಸಲು ಸಹ ಅವಕಾಶವಿದೆ.

ಬೆಲೆ ಎಷ್ಟು?

ಈ ಸ್ಮಾರ್ಟ್ ವಾಚ್ ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲಭ್ಯವಾಗಲಿದೆ. ನೀವು ರಿಫ್ಲೆಕ್ಸ್ ಬೀಟ್+ ಅನ್ನು 1,495 ರೂ.ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಈ ಸ್ಮಾರ್ಟ್ವಾಚ್ ಹಲವು ಬಣ್ಣಗಳಲ್ಲಿದ್ದು, ಬೀಜ್ ಲ್ಯಾಟೆ, ವೈನ್ ರೆಡ್, ಬ್ಲಾಕ್, ಆಲಿವ್ ಗ್ರೀನ್ ಮತ್ತು ಡೀಪ್ ಟೀಲ್ ಸೇರಿದಂತೆ ಐದು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.