Home News Marriage: ಗೆಳೆಯನಿಗಾಗಿ ತನ್ನ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್! ಮರುದಿನವೇ ಉಲ್ಟಾ ಹೊಡೆದ ಕುಚಿಕು!

Marriage: ಗೆಳೆಯನಿಗಾಗಿ ತನ್ನ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್! ಮರುದಿನವೇ ಉಲ್ಟಾ ಹೊಡೆದ ಕುಚಿಕು!

Marriage

Hindu neighbor gifts plot of land

Hindu neighbour gifts land to Muslim journalist

Marriage: ಸ್ನೇಹಕ್ಕಾಗಿ ಕೆಲವ್ರು ಏನು ಬೇಕಾದರೂ ಮಾಡಲು ರೆಡಿಯಾಗುತ್ತಾರೆ. ಆದ್ರೆ ಇಲ್ಲೊಂದು ಅತಿಯಾದ ಸ್ನೇಹ ಕಥೆ ಕೊನೆಗೆ ಪೊಲೀಸ್ ಮೆಟ್ಟಿಲೇರಿದೆ. ಹೌದು, ಇಬ್ಬರು ಕುಚುಕು ಗೆಳೆಯರ ಈ ಪೈಕಿ ಒಬ್ಬನಿಗೆ ಮದುವೆ (Marriage) ಫಿಕ್ಸ್ ಆಗಿದೆ. ಅಷ್ಟೊತ್ತಿದೆ ಗೆಳೆಯ ಶಿವಂ ಮಿಶ್ರ ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾನೆ. ಫಸ್ಟ್ ನೈಟ್ ಸಣ್ಣ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸು ಎಂದಿದ್ದಾನೆ. ಆರಂಭದಲ್ಲಿ ಗೆಳೆಯನ ಬೇಡಿಕೆ ನಿರಾಕರಿಸಿದ್ದ ಈತ ನಂತರ ಒಪ್ಪಿಕೊಂಡಿದ್ದಾನೆ.

ಗೆಳೆಯನಿಗೆ ಮಾತು ಕೊಟ್ಟಂತೆ ಮದುವೆಯ ಮೊದಲ ರಾತ್ರಿ ಪತ್ನಿಗೆ ಗೊತ್ತಿಲ್ಲದಂತೆ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. ಆದರೆ ವಿಡಿಯೋ ಕೈಸೇರುತ್ತಿದ್ದಂತೆ ಗೆಳೆಯನ ವರ್ತನೆ ಬದಲಾಗಿದೆ. ಇದರಿಂದ ಇಡೀ ಕುಟುಂಬ ಸಮಸ್ಯೆಯಲ್ಲಿ ಸಿಲುಕಿದ ಘಟನೆ ಉತ್ತರ ಪ್ರದೇಶ ಶಹಜಾನಪುರದಲ್ಲಿ ನಡೆದಿದೆ.

ಹೌದು, ತನ್ನ ಗೆಳೆಯನ ವಿಡಿಯೋ ನೋಡಿ ಆನಂದಿಸಿದ ಶಿವಂ ಮಿಶ್ರ ಮರು ದಿನ ಉಲ್ಟಾ ಹೊಡೆದಿದ್ದಾನೆ. ಈ ವಿಡಿಯೋ ಇಟ್ಟು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಹೇಳಿ ಹಣ ವಸೂಲಿ ಮಾಡಲು ಆರಂಭಿಸಿದ್ದಾನೆ. ಒಂದಷ್ಟು ಸಾವಿರ ರೂಪಾಯಿ ನೀಡಿದರೂ ಗೆಳೆಯ ಶಿವಂ ಮಿಶ್ರಾ ಸಮಾಧಾನಗೊಂಡಿಲ್ಲ. ಹಣಕ್ಕಾಗಿ ಪದೇ ಪದೇ ಆತ ಬ್ಲಾಕ್‌ಮೇಲ್ ಮಾಡುತ್ತಿದ್ದ. ನಂತರ ಬೇರೆ ದಾರಿ ಕಾಣದೇ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಶಿವಂ ಮಿಶ್ರಾಗೆ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಶಿವಂ ಮಿಶ್ರಾ ನಾಪತ್ತೆಯಾಗಿದ್ದಾನೆ.

ಇದೀಗ ಶಿವಂ ವಿಶ್ರಾ ವಿರುದ್ಧ ಸೆಕ್ಷನ್ 323, 504 ಹಾಗೂ 506ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಫೋನ್ ಕಾಲ್, ವಿಡಿಯೋ ಸೇರಿದಂತೆ ಕೆಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿವಂ ಮಿಶ್ರಾ ಇದೇ ರೀತಿ ಹಲವರ ಬ್ಲಾಕ್ ಮೇಲ್ ಮಾಡುತ್ತಿರುವ ಮಾಹಿತಿಯೂ ಬಹಿರಂಗವಾಗಿದೆ. ಇದೀಗ ಶಿವಂ ಮಿಶ್ರಾ ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ.