

Ration Card: ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ರಾಜ್ಯ ಸರ್ಕಾರವು ದೊಡ್ಡ ಶಾಕ ನೀಡಿದ್ದು ಇದೀಗ 10 ಲಕ್ಷ ಬಿಪಿಎಲ್ ಕಾರ್ಡ್ ದಾರರನ್ನು ಎಪಿಎಲ್ ಕಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತಾಗಿ ಆಹಾರ ಸಚಿವ ಮುನಿಯಪ್ಪ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಹೌದು, ರಾಜ್ಯದಲ್ಲಿ ಅನೇಕರು ಅನರ್ಹರು ಬಿಪಿಎಲ್ ಕಾರ್ಡ್. ಹೀಗಾಗಿ ಅವರನ್ನು ಹುಡುಕಿ ಬರೋಬ್ಬರಿ 10 ಲಕ್ಷ ಅನರ್ಹರನ್ನು ಎಪಿಎಲ್ ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಹೇಳಿಕೆ ನೀಡಿದರು.
ಅಲ್ಲದೆ ಎಪಿಎಲ್ ಕಾರ್ಡಿಗೆ ಮೊದಲು 15 ಕೆಜಿ ಅಕ್ಕಿ ಕೊಡುತ್ತಿದ್ದೆವು. ಅವರು ತೆಗೆದುಕೊಳ್ಳುತ್ತಾ ಇರಲಿಲ್ಲ ಹೀಗಾಗಿ ಅದನ್ನ ನಿಲ್ಲಿಸಿದೆವು ಡಿಮ್ಯಾಂಡ್ ಬಂದರೆ ಮತ್ತೆ ಅಕ್ಕಿ ಕೊಡುತ್ತೇವೆ ಒಂದು ವರ್ಷದಿಂದ ಅಕ್ಕಿ ತೆಗೆದುಕೊಳ್ಳುವವರನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆ ನೀಡಿದರು.













