Home latest ಪಡಿತರ ಚೀಟಿದಾರರಿಗೆ ದೀಪಾವಳಿ ಉಡುಗೊರೆ | ಡಬಲ್ ಧಮಾಕ

ಪಡಿತರ ಚೀಟಿದಾರರಿಗೆ ದೀಪಾವಳಿ ಉಡುಗೊರೆ | ಡಬಲ್ ಧಮಾಕ

Hindu neighbor gifts plot of land

Hindu neighbour gifts land to Muslim journalist

ಪಡಿತರ ಚೀಟಿದಾರರೇ ಸಂತಸದ ಸುದ್ದಿ ನಿಮಗಾಗಿ ಇಲ್ಲಿದೆ. ನೀವು ಸಹ ಪಡಿತರ ಕಾರ್ಡ್ ಹೊಂದಿರುವವರಾಗಿದ್ದರೆ ನಿಮಗೆ ದೀಪಾವಳಿಯಂದು ಸಿಗಲಿದೆ ಬಂಪರ್ ಉಡುಗೊರೆ.

ಎಲ್ಲರಿಗೂ ತಿಳಿದಿರುವ ಹಾಗೇ, ಕೇಂದ್ರ ಸರಕಾರ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ಮಾಡಿ ಆದೇಶ ಹೊರಡಿಸಿದೆ. ಇದಾದ ಬಳಿಕ ರಾಜ್ಯ ಸರ್ಕಾರಗಳು ಕೂಡ ಕಾರ್ಡ್‌ದಾರರಿಗೆ ಅನೇಕ ಕೊಡುಗೆ ಘೋಷಣೆ ಮಾಡುತ್ತಿವೆ.

ಹಾಗಾಗಿ ಈಗ ಸರಕಾರ ಸಕ್ಕರೆ ಬೆಲೆ ಇಳಿಕೆಗೆ ಮಹತ್ವದ ನಿರ್ಧಾರ ಮಾಡಿದೆ. ಅಷ್ಟೇ ಅಲ್ಲ 100 ರೂಪಾಯಿಗೆ ದಿನಸಿ ಕಿಟ್ ಕೂಡ ನೀಡಲಾಗುತ್ತದೆ. ಸರಕಾರವು ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಕ್ಕರೆ ಬೆಲೆಯನ್ನು ಕಡಿಮೆ ಮಾಡಲು ಘೋಷಿಸಿದೆ. ಇದಾದ ನಂತರ ಸಕ್ಕರೆಗೆ ಕೆಜಿಗೆ ಕೇವಲ 20 ರೂ. ಸರ್ಕಾರದ ಈ ಘೋಷಣೆಯ ಲಾಭ ಅಂತ್ಯೋದಯ ಕಾರ್ಡ್ ದಾರರಿಗೆ ಸಿಗಲಿದೆ. ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಸೌಲಭ್ಯದಿಂದ ಜನರು ಸಂತಸಗೊಂಡಿದ್ದಾರೆ.

ಕೇಂದ್ರ ಸರ್ಕಾರದ ಘೋಷಣೆಗಳ ಜೊತೆ ಜೊತೆಗೆ ರಾಜ್ಯ ಸರ್ಕಾರ ಕೂಡಾ ದೀಪಾವಳಿ ಗಿಫ್ಟ್ ನೀಡುತ್ತಿದೆ. ಹಾಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಪಡಿತರ ಚೀಟಿದಾರರಿಗೆ ವಿಶೇಷ ಘೋಷಣೆ ಮಾಡಿದೆ. ಇದರ ಅಡಿಯಲ್ಲಿ ಸರ್ಕಾರದಿಂದ ಕೇವಲ 100 ರೂ.ಗೆ ದಿನಸಿ ನೀಡುತ್ತಿದೆ. ಇದರಲ್ಲಿ ಒಂದು ಕೆ.ಜಿ ರವೆ, ಖಾದ್ಯ ಎಣ್ಣೆ, ತೊಗರಿ, ಉದ್ದಿನಬೇಳೆ ಮತ್ತು ಶೇಂಗಾ ಸಿಗುತ್ತದೆ.

ಉಚಿತ ಪಡಿತರವನ್ನು ಕೇಂದ್ರ ಸರ್ಕಾರ ಡಿಸೆಂಬರ್ ವರೆಗೆ ವಿಸ್ತರಿಸಿರುವುದರಿಂದ ದೇಶಾದ್ಯಂತ ಕಾರ್ಡುದಾರರಲ್ಲಿ ಸಂತಸ ಇಮ್ಮಡಿಯಾಗಿರುವುದರ ಜೊತೆಗೆ, ಮಹಾರಾಷ್ಟ್ರ ಸರ್ಕಾರದ ಈ ಘೋಷಣೆ ರಾಜ್ಯದ ಪಡಿತರ ಚೀಟಿದಾರರ ದೀಪಾವಳಿ ಸಂಭ್ರಮ ಹೆಚ್ಚಿಸಿದೆ.