Home News ಪಡಿತರ ಚೀಟಿಯ ಇ-ಕೆವೈಸಿ ಮಾಡಲು ಸೆ.30ರವರೆಗೆ ಅವಧಿ ವಿಸ್ತರಣೆ

ಪಡಿತರ ಚೀಟಿಯ ಇ-ಕೆವೈಸಿ ಮಾಡಲು ಸೆ.30ರವರೆಗೆ ಅವಧಿ ವಿಸ್ತರಣೆ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿಯ ಇ-ಕೆವೈಸಿ ಆಗದೆ ಇರುವ ಸದಸ್ಯರು ಸೆ. 30ರೊಳಗೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೋಂದಾಯಿಸಿಕೊಳ್ಳಲು ಅವಕಾಶ ಮಾಡಲಾಗಿದೆ.

ಪರಿಶಿಷ್ಟ ಜಾತಿ, ಪಂಗಡದ ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರ ಮತ್ತು ಅನಿಲ ಸಂಪರ್ಕ ಹೊಂದಿರುವ ಮಾಹಿತಿ, ಮೊಬೈಲ್‌ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ಕಡ್ಡಾಯವಾಗಿ ಒದಗಿಸ‌ಬೇಕು.

2020ರ ಫೆಬ್ರವರಿ ಅನಂತರ ವಿತರಿಸಿರುವ ಹೊಸ ಹಾಗೂ ತಿದ್ದುಪಡಿ ಮಾಡಲಾದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ, ಆದ್ಯತಾ (ಬಿಪಿಎಲ್‌) ಹಾಗೂ ಆದ್ಯತೇತರ ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಬೇಕಾಗಿದೆ. ಇ-ಕೆವೈಸಿಯನ್ನು ಉಚಿತವಾಗಿ ಮಾಡಲಾಗುತ್ತಿದೆ.

ಯಾರಾದರೂ ಹಣ ಕೇಳಿದಲ್ಲಿ ಅಥವಾ ಏನಾದರೂ ದೂರುಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಹಶೀಲ್ದಾರರು ಮತ್ತು ಮಂಗಳೂರಿನ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

ಸೆ.15ರ ಮಾಹಿತಿಯಂತೆ ಪುತ್ತೂರು ತಾಲೂಕಿನಲ್ಲಿ 45,256 ಪಡಿತರ ಚೀಟಿ ಇದ್ದು, 1,80,531 ಸದಸ್ಯರಿದ್ದಾರೆ. ಇದರಲ್ಲಿ 34,809 ಪಡಿತರ ಚೀಟಿಯ 1,56,192 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 10,447 ಪಡಿತರ ಚೀಟಿಯ 24,339 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈ ತನಕ ಶೇ. 86.52 ಪ್ರಗತಿ ಕಂಡಿದೆ.

ಇ-ಕೆವೈಸಿ ಮಾಡದವರಿಗೆ ಅಕ್ಟೋಬರ್‌ನಿಂದ ಪಡಿತರ ಸಿಗದು ಎಂದು ಇಲಾಖೆ ಈಗಾಗಲೇ ತಿಳಿಸಿದೆ.

ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಲ್ಲಿ ಬಹಳಷ್ಟು ಕುಟುಂಬಗಳ ಸದಸ್ಯರು ದೇಶದ ವಿವಿಧ ಭಾಗಗಳಲ್ಲಿ ಅಥವಾ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಹಲವಾರು ಮಂದಿ ಊರಿಗೆ ಬರಲಾಗದೆ ಅಥವಾ ಬಂದರೆ ವಾಪಸ್‌ ಹೋಗಲು ಸಾಧ್ಯವಾಗದ ಆತಂಕ ದಿಂದಾಗಿ ಊರಿಗೆ ಹಿಂದಿರುಗಿಲ್ಲ. ಹಾಗಾಗಿ ಇ- ಕೆವೈಸಿ ಮಾಡಿಸಲು ಹಲವರಿಗೆ ಸಾಧ್ಯವಾಗಿಲ್ಲ. ಶೇ. 20ರಷ್ಟು ಇ- ಕೆವೈಸಿ ಬಾಕಿಯಾಗಲು ಮುಖ್ಯ ಕಾರಣ ಎನ್ನಲಾಗಿದೆ.

ಇ- ಕೆವೈಸಿ ಒಂದು ಬಾರಿ ಮಾಡಿದರೆ ಬ್ಯಾಂಕ್‌ ಖಾತೆಯ ರೀತಿಯಲ್ಲಿ ಅದರ ಅವಧಿ ಜೀವನ ಪರ್ಯಂತ ಇರುತ್ತದೆ. ಬ್ಯಾಂಕಿನಲ್ಲಿ ಖಾತೆ ತೆರೆದ ಶಾಖೆಯಲ್ಲಿಯೇ ಕೆವೈಸಿ ಮಾಡಲಾಗುತ್ತಿದ್ದು, ಅದೇ ರೀತಿ ಪಡಿತರ ಚೀಟಿಗೆ ಅದರ ಮೂಲ ನ್ಯಾಯ ಬೆಲೆ ಅಂಗಡಿಯಲ್ಲಿ ಇ- ಕೆವೈಸಿ ಮಾಡಬೇಕಾಗುತ್ತದೆ ಎಂದು ದ.ಕ.ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕಿ ರಮ್ಯಾ ಸಿ.ಆರ್‌. ತಿಳಿಸಿದ್ದಾರೆ.