Home Interesting Ram Navami: ಈ ವರ್ಷ ರಾಮ ನವಮಿ ಯಾವಾಗ? ಆಚರಣಾ ವಿಧಾನ ಹೇಗೆ?

Ram Navami: ಈ ವರ್ಷ ರಾಮ ನವಮಿ ಯಾವಾಗ? ಆಚರಣಾ ವಿಧಾನ ಹೇಗೆ?

Ram Navami

Hindu neighbor gifts plot of land

Hindu neighbour gifts land to Muslim journalist

Ram Navami: ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಲ್ಲಿ ದಶರಥ ನಂದನ ಶ್ರೀರಾಮನ ಜನ್ಮ ದಿನವಾಗಿ ರಾಮ ನವಮಿಯನ್ನು ಆಚರಿಸಲಾಗುತ್ತದೆ. ರಾಮನ ಜನ್ಮದಿನವನ್ನು ಪ್ರತಿ ವರ್ಷ ರಾಮನವಮಿ (Ram Navami)ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: Puttur: ಉದ್ಯೋಗ ನೀಡುವುದಾಗಿ ಯುವತಿಯಿಂದ 2 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ : ದೂರು ದಾಖಲು

ರಾಮನವಮಿಯಂದು ಶ್ರೀರಾಮನನ್ನು (Sri Ram)ಪೂಜಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಈ ದಿನ ಭಕ್ತರು ಉಪವಾಸವಿದ್ದು, ರಾಮನ ಮಂತ್ರಗಳನ್ನು ಪಠಿಸಿ ರಾಮ ನವಮಿಯನ್ನು ಆಚರಿಸುತ್ತಾರೆ. ರಾಮನ ದೇವಸ್ಥಾನದಲ್ಲಿ ಹೂವಿನ ಅಲಂಕಾರ, ವಿಶೇಷ ಪೂಜೆಗಳು ನೆರವೇರುತ್ತವೆ. ಈ ದಿನ ಕೀರ್ತಿ, ಸಂಪತ್ತು, ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

ಅಯೋಧ್ಯೆಯಲ್ಲಿ ರಾಮಮಂದಿರ(Ayodhya Ram Mandir)ಉದ್ಘಾಟನೆಯಾಗಿರುವ ಶುಭ ಗಳಿಗೆಯ ಈ ಹೊತ್ತಿನಲ್ಲಿ 2024ರಲ್ಲಿ ರಾಮನವಮಿ ಯಾವಾಗ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತದೆ. ಈ ಬಾರಿ ಚೈತ್ರ ಮಾಸ ಶುಕ್ಲ ಪಕ್ಷ ನವಮಿ ತಿಥಿಯು ಏಪ್ರಿಲ್ 16ರ ಮಧ್ಯಾಹ್ನ 1.23ರಿಂದ ಶುರುವಾಗಿದ್ದು, ಇದು ಏಪ್ರಿಲ್ 17 ರಂದು ಮಧ್ಯಾಹ್ನ 3.14ರವರೆಗೆ ಇರಲಿದೆ. ಉದಯ ತಿಥಿಯ ಆಧಾರದ ಅನುಸಾರ ಏಪ್ರಿಲ್ 17ರ ಬುಧವಾರ ರಾಮನವಮಿ ಆಚರಣೆ ನಡೆಯಲಿದೆ.

ಶ್ರೀರಾಮನು ರಾಮನವಮಿಯಂದು ಮಧ್ಯಾಹ್ನ ಜನಿಸಿದ್ದರಿಂದ ಪೂಜೆಯು ಬೆಳಿಗ್ಗೆ 11.08 ರಿಂದ ಮಧ್ಯಾಹ್ನ 1.36ರವರೆಗೆ ಇರಲಿದೆ. ಇನ್ನು ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ಸಾವಿರಾರು ಲಕ್ಷ ದೀಪಗಳನ್ನು ಬೆಳಗಿ ಸಂಭ್ರಮಿಸಲಾಗುತ್ತದೆ. ಈ ದಿನ ಹಳದಿ ಹೂಗಳು ಹಾಗೂ ವಸ್ತ್ರವನ್ನು ಶ್ರೀರಾಮನಿಗೆ ಅರ್ಪಿಸಬೇಕು.ತುಳಸಿ ಎಲೆ ಸೇರಿಸಿ ನೈವೇದ್ಯ ಮಾಡಬೇಕು. ಶ್ರೀಗಂಧ ಇತ್ಯಾದಿ ಪೂಜಾ ಸಾಮಗ್ರಿಯನ್ನು ದೇವರಿಗೆ ಅರ್ಪಿಸಬೇಕು.