Home Breaking Entertainment News Kannada ರಾಖಿ ಸಾವಂತ್‌ ಜೊತೆಗಿನ ಮದುವೆ ನಿರಾಕರಿಸಿದ ಆದಿಲ್‌ ಖಾನ್‌! ಕದ್ದು ಮುಚ್ಚಿ ಆದ ಮದವೆ ಈಗ...

ರಾಖಿ ಸಾವಂತ್‌ ಜೊತೆಗಿನ ಮದುವೆ ನಿರಾಕರಿಸಿದ ಆದಿಲ್‌ ಖಾನ್‌! ಕದ್ದು ಮುಚ್ಚಿ ಆದ ಮದವೆ ಈಗ ಬಹಿರಂಗವಾಗೆ ಕೊನೆಗೊಳ್ಳುತ್ತಾ?

Hindu neighbor gifts plot of land

Hindu neighbour gifts land to Muslim journalist

ಸೆಲೆಬ್ರಿಟಿಗಳು ಒಬ್ಬರನ್ನೊಬ್ಬರು ಮದುವೆಯಾಗುವುದು, ಆ ಮದುವೆ ಕೆಲವು ಸಮಯಗಳ ಬಳಿಕ ಮುರಿದು ಬೀಳುವುದು, ಇಬ್ಬರೂ ದೂರವಾಗೋದು, ನಂತರ ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋದು ಈಗಂತೂ ಸರ್ವೇ ಸಾಮನ್ಯವಾಗಿಬಿಟ್ಟಿದೆ. ಇದೀಗ ಇಲ್ಲೊಂದು ಸೆಲೆಬ್ರಿಟಿಗಳ ಕಥೆಯೂ ಹೀಗೆ ಆಗಿದ್ಧು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ಧಿಯಾಗುತ್ತಿದ್ದಾರೆ

ಬಿಗ್ ಬಾಸ್ ಸೆಲೆಬ್ರಿಟಿ ರಾಖಿ ಸಾವಂತ್ ತಮ್ಮ ಬಹುಕಾಲದ ಪ್ರೇಮಿ ಆದಿಲ್ ಖಾನ್ ದುರಾನಿ ಅವರನ್ನು ಯಾರಿಗೂ ತಿಳಿಯದಂತೆ ಮದುವೆ ಮಾಡಿಕೊಂಡಿದ್ದಾರಂತೆ, ಆದರೀಗ ಆರು ತಿಂಗಳಿಗೆ ರಾಖಿ ಸಾವಂತ್ ಮತ್ತು ಆದಿಲ್ ದುರಾನಿ ಮದುವೆ ಮುರಿದು ಬಿದ್ದಿದ್ದು, ಕದ್ದು ಮುಚ್ಚಿ ಆದ ಮದುವೆಗೆ ಬಹಿರಂಗವಾಗಿ ತೆರೆಬೀಳುವ ಪ್ರಸಂಗ ನಡೆಯುತ್ತಿದೆ.

ರಾಖಿ ಸಾವಂತ್ ತಮ್ಮ ಬಹುಕಾಲದ ಪ್ರೇಮಿ ಆದಿಲ್ ದುರಾನಿ ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ಸೂಚಿಸುವ ಅವರ ನ್ಯಾಯಾಲಯದ ವಿವಾಹದ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಷ್ಟು ದಿನ ಗುಟ್ಟಾಗಿದ್ದ ಇಬ್ಬರ ಮದುವೆ ವಿಷಯ ಇದ್ದಕ್ಕಿದ್ದಂತೆ ಹೀಗೆ ಮುನ್ನಲೆಗೆ ಬರಲು ಕಾರಣವೇನು ಗೊತ್ತ? ಆದಿಲ್ ತಾನು ರಾಖಿ ಸಾವಂತ್ ಅವ್ರನ್ನ ಮದುವೆಯೇ ಆಗಿಲ್ಲ ಎಂದು ತಮ್ಮ ವಿವಾಹ ಸುದ್ದಿಯನ್ನು ಅಲ್ಲಗಳೆದಿರುವುದು ಇದಕ್ಕೆ ಕಾರಣವಾಗಿ ಎಲ್ಲರಿಗೂ ಶಾಕ್‌ ನೀಡಿದೆ. ಮತ್ತೊಂದಡೆ ರಾಖಿ ಸಾವಂತ್, ಅದಿಲ್‌ ತನಗೆ ಮೋಸ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. ಏನಿದು ರಾಖಿಯದ್ದು ಯಾವಾಗಲೂ ಬರೀ ಇದೇ ಕಥೆ ಆಗೋಯ್ತಲ್ಲ ಎಂದು ನೆಟ್ಟಿಗರೆಲ್ಲರೂ ಪ್ರಶ್ನೆಮಾಡುತ್ತಿದ್ದಾರೆ.

ಹೌದು, ರಾಖಿ ಸಾವಂತ್ ಕದ್ದುಮುಚ್ಚಿ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೈಸೂರು ಹುಡುಗ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಇದೀಗ ಹರಡಿದೆ. ಇದಕ್ಕೆ ಪೂರಕ ಎಂಬಂತೆ ರಾಖಿ, ಇದೀಗ ಕೆಲವು ತಿಂಗಳ ಹಿಂದೆ ಆದಿಲ್ ಅವರನ್ನು ವಿವಾಹವಾಗಿದ್ದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದು, ಮದುವೆಯ ಪ್ರಮಾಣಪತ್ರವನ್ನೂ ಪೋಸ್ಟ್ ಮಾಡಿ ಮದುವೆಯ ವಿಷಯವನ್ನು ಬಹಿರಂಗಪಡಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ ಆದಿಲ್ ಮತ್ತು ರಾಖಿ ಸಾವಂತ್ ಇಬ್ಬರು ಮದುವೆಯನ್ನು ರೆಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ. ರಿಜಿಸ್ಟರ್ ಪತ್ರದಲ್ಲಿ ಇಬ್ಬರು ಫೋಟೋ ಕೂಡ ಇರುವುದು ಕಂಡುಬಂದಿದೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ಹಂಚಿಕೊಂಡಿರುವ ರಾಖಿ ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ನಾವು ನಿಕಾಹ್ ಸಮಾರಂಭವನ್ನೂ ಮಾಡಿಕೊಂಡಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರೆಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿ ಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ ಅವನು ನನಗೆ ಮೋಸ ಮಾಡುತ್ತಿದ್ದಾನೆ’ ಎಂದು ಹೇಳಿಕೊಂಡಿದ್ದಾರೆ.

ರಾಖಿಯವರು ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ‘ಇತ್ತೀಚೆಗೆ ನಾನು ಬಿಗ್ ಮನೆಯೊಳಗೆ ಲಾಕ್ ಆಗಿರುವಾಗ ಹೊರಗಡೆ ಬಹಳಷ್ಟು ಸಂಭವಿಸಿದೆ. ಸಮಯ ಸಿಕ್ಕಾಗ ಇದರ ಬಗ್ಗೆ ನಾನು ಮಾತನಾಡುತ್ತೇನೆ. ಈ ಸಮಯದಲ್ಲಿ ನನ್ನ ಮದುವೆಯನ್ನು ಉಳಿಸುವುದು ನನಗೆ ಬೇಕಾಗಿದೆ. ಸದ್ಯ ನಾನು ಏನು, ನಿಜ ಸಂಗತಿ ಏನಿದೆ ಎಂದು ಜಗತ್ತಿಗೆ ತಿಳಿಯಬೇಕು’ ಎಂದರು.

ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರೆಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.