Home News ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ: ಪರಿಸರ ತಜ್ಞ, ‘ಗ್ರೀನ್ ಹೀರೋ’ ಡಾ.ಆ‌ರ್.ಕೆ.ನಾಯರ್’ಗೆ ಪ್ರಶಸ್ತಿ

ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ: ಪರಿಸರ ತಜ್ಞ, ‘ಗ್ರೀನ್ ಹೀರೋ’ ಡಾ.ಆ‌ರ್.ಕೆ.ನಾಯರ್’ಗೆ ಪ್ರಶಸ್ತಿ

Hindu neighbor gifts plot of land

Hindu neighbour gifts land to Muslim journalist

Sullia: ಸುಳ್ಯದ ಪಯಸ್ವಿನಿ ನದಿ ತಟದ ಶ್ರೀ ಗುರು ರಾಘವೇಂದ್ರ ಮಠದ ವತಿಯಿಂದ ನೀಡುವ ಪ್ರಥಮ ವರ್ಷದ ‘ಶ್ರೀ ಗುರು ರಾಘವೇಂದ್ರಾನುಗ್ರಹ ಪ್ರಶಸ್ತಿ’ ಯನ್ನು ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆ‌ರ್.ಕೆ.ನಾಯರ್ ರವರಿಗೆ ನೀಡಲಾಗುವುದು.

ಶ್ರೀ ಗುರು ರಾಘವೇಂದ್ರ ಮಠದ 7 ನೇ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎ.22 ರಂದು ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬೃಂದಾವನ ಸೇವಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಜಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಳ್ಯ ತಾಲೂಕಿನವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಈ ವರ್ಷದಿಂದ ಪ್ರಶಸ್ತಿ ನೀಡಲು ಆರಂಭಿಸಿದ್ದು ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಶ್ರೀ ಗುರುರಾಘವೇಂದ್ರಾನುಗ್ರಹ ಪ್ರಶಸ್ತಿ ನೀಡಲಾಗುವುದು ಎಂದು ಶ್ರೀಕೃಷ್ಣ ಸೋಮಯಾಜಿ ತಿಳಿಸಿದ್ದಾರೆ.