Home Breaking Entertainment News Kannada ಹಸಮಣೆ ಏರಲಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್ | ಮದುವೆ ಸುದ್ದಿ ಲೀಕ್ ಮಾಡೇ ಬಿಟ್ಟ ನಟ...

ಹಸಮಣೆ ಏರಲಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್ | ಮದುವೆ ಸುದ್ದಿ ಲೀಕ್ ಮಾಡೇ ಬಿಟ್ಟ ನಟ ರಾಮ್ ಚರಣ್!!!

Hindu neighbor gifts plot of land

Hindu neighbour gifts land to Muslim journalist

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್, ‘ಬಾಹುಬಲಿ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆದಿದ್ದಾರೆ. ವಯಸ್ಸು 40 ದಾಟಿದ್ರು ನಟ ಪ್ರಭಾಸ್ ಇನ್ನೂ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಅಭಿಮಾನಿಗಳು ಪದೇ ಪದೇ ಇದೇ ಪ್ರಶ್ನೆಯನ್ನು ಕೇಳಿ ಕೇಳಿ ಸುಸ್ತಾಗಿದ್ದಾರೆ. ಇತ್ತೀಚೆಗೆ ನಟಿ ಕೃತಿ ಸನೂನ್ ಜೊತೆ ಡಾರ್ಲಿಂಗ್ ಡೇಟ್ ಮಾಡುತ್ತಿದ್ದಾರೆ ಎನ್ನುವ ಗಾಳಿಸುದ್ದಿಯು ಹರಿದಾಡಿತ್ತು. ಇದೀಗ ಪ್ರಭಾಸ್ ಮದುವೆ ಸುದ್ದಿಯನ್ನು ನಟ ರಾಮ್‌ಚರಣ್ ತೇಜಾ ಲೀಕ್ ಮಾಡಿದ್ದಾರೆ ಎಂದು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ.

ಹೌದು, ಬಾಲಕೃಷ್ಣರವರು ‘ಅನ್‌ಸ್ಟಾಪಬಲ್ – 2’ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಪ್ರಭಾಸ್ ಹಾಗೂ ಗೋಪಿಚಂದ್ ಆತ್ಮೀಯ ಸ್ನೇಹಿತರಾಗಿರುವುದರಿಂದ, ಈ ಬಾರಿ ಅವರಿಬ್ಬರನ್ನು ಶೋಗೆ ಆಹ್ವಾನಿಸಲಾಗಿದೆ. ಈಗಾಗಲೇ ಶೋ ಶೂಟಿಂಗ್ ಮುಗಿದಿದ್ದು, ಪ್ರೋಮೊ ಕೂಡ ರಿಲೀಸ್ ಆಗಿದೆ. ಶೋನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಪ್ರಭಾಸ್ ಬಳಿ ಬಾಲಯ್ಯ ಉತ್ತರ ಪಡೆದುಕೊಂಡಿದ್ದಾರೆ. ಅದರಲ್ಲೂ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ, ಈ ಪ್ರಶ್ನೆಗೆ ಫೋನ್ ಕಾಲ್‌ನಲ್ಲಿದ್ದ ರಾಮ್‌ಚರಣ್ ಸುಳಿವು ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಕೆಲವೊಮ್ಮೆ ಶೋನಲ್ಲಿ ಅತಿಥಿಗಳ ಆತ್ಮೀಯರಿಗೆ ಫೋನ್ ಮಾಡಿ ಬಾಲಯ್ಯ ಮಾತನಾಡುತ್ತಾರೆ. ಅದೇ ರೀತಿ ಪ್ರಭಾಸ್ ಎಪಿಸೋಡ್‌ನಲ್ಲಿ ನಟ ರಾಮ್‌ಚರಣ್‌ಗೆ ಕಾಲ್ ಮಾಡಿದ್ದೂ, ಈ ವೇಳೆ ಪ್ರಭಾಸ್ ಸೀಕ್ರೆಟ್ ಹೇಳುವಂತೆ ಚರಣ್ ಬಳಿ ಬಾಲಯ್ಯ ಕೇಳಿದ್ದಾರೆ. ಇನ್ನೆರಡೇ ತಿಂಗಳಲ್ಲಿ ಪ್ರಭಾಸ್ ಮದುವೆ ಎಂದು ರಾಮ್‌ಚರಣ್ ಹೇಳಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಪ್ರೋಮೊದಲ್ಲಿ “ಏನ್ ಹೇಳ್ತಿದ್ದಿಯಾ ಡಾರ್ಲಿಂಗ್?” ಎಂದು ಪ್ರಭಾಸ್ ಕೇಳಿರುವುದನ್ನು ನೋಡಬಹುದು ಎನ್ನುತ್ತಿದ್ದಾರೆ. ಇದು ಎಷ್ಟು ನಿಜ? ಎಂದು ಶೀಘ್ರದಲ್ಲೇ ಗೊತ್ತಾಗಲಿದೆ.

ಬಾಲಯ್ಯ ತಮ್ಮದೇ ಸ್ಟೈಲ್‌ನಲ್ಲಿ ಅತಿಥಿಗಳಿಗೆ ಚಮಕ್ ಕೊಟ್ಟು, ಮಾತನಾಡಿಸಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹೊರ ಹಾಕಿಸುತ್ತಾರೆ. ಫಸ್ಟ್ ಸೀಸನ್ ಹಿಟ್ ನಂತರ ಸೆಕೆಂಡ್ ಸೀಸನ್ ಶುರುವಾಗಿದೆ. ಈಗಾಗಲೇ 4 ಎಪಿಸೋಡ್ ಕಂಪ್ಲಿಟ್ ಆಗಿದ್ದು, 5ನೇ ಎಪಿಸೋಡ್‌ನಲ್ಲಿ ಪ್ರಭಾಸ್ ಸ್ಪೆಷಲ್ ಅಟ್ರಾಕ್ಷನ್ ಆಗಿದ್ದಾರೆ. ಶೀಘ್ರದಲ್ಲೇ ಈ ವಾರದ ಎಪಿಸೋಡ್ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

‘ಬಾಹುಬಲಿ’ ಸರಣಿ ಸಿನಿಮಾಗಳಿಂದ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದರು. ಆ ನಂತರ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾರ್ಲಿಂಗ್, ಅಭಿಮಾನಿಗಳಿಗೆ ಯಾವಾಗ ಮದುವೆ ಸುದ್ದಿ ಕೊಡುತ್ತಾರೋ ಕಾದು ನೋಡಬೇಕಿದೆ.