Home News ಪುತ್ತೂರು : ಕಬಕ ಚಲೋ, ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿ | ಕಬಕ ವೃತ್ತಕ್ಕೆ ಸಾವರ್ಕರ್...

ಪುತ್ತೂರು : ಕಬಕ ಚಲೋ, ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿ | ಕಬಕ ವೃತ್ತಕ್ಕೆ ಸಾವರ್ಕರ್ ಹೆಸರು ನೀಡಲು ಒತ್ತಾಯ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಕಬಕದಲ್ಲಿ 75ನೇ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆ ಸರಕಾರಿ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಗ್ರಾಮ ಸ್ವರಾಜ್ಯ ರಥಯಾತ್ರೆ ಹೊರಟ್ಟಿದ್ದ ಸಂದರ್ಭದಲ್ಲಿ ವೀರ ಸಾವರ್ಕರ್ ಭಾವ ಚಿತ್ರ ತೆರವು ಮಾಡಲು ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ರಥಕ್ಕೆ ಅಡ್ಡಿ ಪಡಿಸಿ ವಿಚಾರಕ್ಕೆ ಸಂಬಂಧಿಸಿ ಆ.೧೭ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕದ ತನಕ ವೀರ ಸಾವರ್ಕರ್ ಭಾವ ಚಿತ್ರ ಹೊತ್ತ ಜಾಗೃತಿ ರಥಯಾತ್ರೆ ಆರಂಭಗೊಂಡಿತು.ಕಬಕ ವೃತ್ರಕ್ಕೆ ಸಾವರ್ಕರ್ ಹೆಸರು ನೀಡಲು ಒತ್ತಾಯ ಈ ಸಂದರ್ಭದಲ್ಲಿ ಕೇಳಿ ಬಂದಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಥಕ್ಕೆ ಡಾ. ಎಂ ಕೆ ಪ್ರಸಾದ್ ಅವರು ಚಾಲನೆ ನೀಡಿದರು. ರಾಧಾಕೃಷ್ಣ ಅಡ್ಯಂತಾಯ, ಶ್ರೀಕಾಂತ್ ಶೆಟ್ಟಿ ಮಾತನಾಡಿದರು.

ಹಿಂದು ಜಾಗರಣ ವೇದಿಕೆಯ ಟಿ.ಜಿ ರಾಜರಾಮ ಭಟ್ ಮೈತ್ರಿಯ ಗುರುಕುಲದ ಸುಬ್ರಹ್ಮಣ್ಯ, ಅಜಿತ್ ಹೊಸಮನೆ, ಚಿನ್ನಯ್ ಈಶ್ವರಮಂಗಲ, ದಿನೇಶ್ ಪಂಜಿಗ, ಅಶೋಕ್ ತ್ಯಾಗರಾಜನಗರ, ಗಣರಾಜ ಭಟ್ ಕೆದಿಲ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವಹಿಂದುಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಕಾರ್ಯದರ್ಶಿ ಸತೀಶ್ ಭಟ್, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ರಾಜೇಶ್ ಪಚ್ಚಡಿ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ನಗರಮಂಡಲದ ಅಧ್ಯಕ್ಷ ಪಿ ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಂತಿ ನಾಯಕ್, ಬಿಜೆಪಿ ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಹಿಂದುಳಿದ ಮೋರ್ಚಾ ಅಧ್ಯಕ್ಷ ಸುನಿಲ್ ದಡ್ಡು, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಮ್ ದಾಸ್ ಹಾರಾಡಿ, ಬಿಜೆಪಿ ಯುವಮೋರ್ಚಾ ಸದಸ್ಯ ಕಿರಣ್ ಶಂಕರ್ ಮಲ್ಯ, ಮನೀಶ್ ಕುಲಾಲ್, ಮೋಹಿನಿ ದಿವಾಕರ್, ಪುರುಷೋತ್ತಮ ಕೋಲ್ಪೆ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ರತನ್ ರೈ ಕುಂಬ್ರ, ಪ್ರಸಾದ್ ಶೆಟ್ಟಿ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಬಿಜೆಪಿ ಸುಳ್ಯ ಕ್ಷೇತ್ರದ ರಾಕೇಶ್ ರೈ ಕೆಡೆಂಜಿ,ಸುರೇಶ್ ರೈ ಸೂಡಿಮುಳ್ಳು ,ಪುಷ್ಪರಾಜ ಸವಣೂರು ಮತ್ತಿತರರು ಉಪಸ್ಥಿತರಿದ್ದರು.