Home News ಸಾಲ ನೀಡುವುದಾಗಿ ಸಂದೇಶ ಮಾಡಿದ ಬ್ಯಾಂಕ್ ಗೆ ಖಡಕ್ ಉತ್ತರ ನೀಡಿದ ಯುವಕ | ಯುವಕನ...

ಸಾಲ ನೀಡುವುದಾಗಿ ಸಂದೇಶ ಮಾಡಿದ ಬ್ಯಾಂಕ್ ಗೆ ಖಡಕ್ ಉತ್ತರ ನೀಡಿದ ಯುವಕ | ಯುವಕನ ಉತ್ತರಕ್ಕೆ ನೆಟ್ಟಿಗರಿಂದ ಪ್ರಶಂಸೆ!

Hindu neighbor gifts plot of land

Hindu neighbour gifts land to Muslim journalist

ಸಾಲ ನೀಡುವುದಾಗಿ ಸಂದೇಶ ಕಳುಹಿಸಿದ ಖಾಸಗಿ ಬ್ಯಾಂಕೊಂದಕ್ಕೆ ಯುವಕನೊಬ್ಬ ಖಡಕ್ ಉತ್ತರ ನೀಡಿದ್ದು, ಆತ ರಿಪ್ಲೈ ಮಾಡಿದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಯುವಕನ ಉತ್ತರಕ್ಕೆ ನೆಟ್ಟಿಗರಿಂದ ಪ್ರಶಂಸೆ ಹರಿದು ಬರುತ್ತಿದೆ.

ಖಾಸಗಿ ಬ್ಯಾಂಕೊಂದು ದಿನತ್ ಶೆಟ್ಟಿ ಎಂಬುವವರಿಗೆ ಮದುವೆಗೆ ಸಾಲ ನೀಡುತ್ತೇವೆ ಎಂದು ಸಂದೇಶ ಕಳಿಸಿತ್ತು. ಆ ಸಂದೇಶದಲ್ಲಿ, ನೀವು ಇಷ್ಟಪಡುವ ರೀತಿಯಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಲು ನಿಮಗೆ ಬೇಕಾಗಿರುವಂತದ್ದು ಕೊಟಕ್‌ನ 25 ಲಕ್ಷ ವೈಯಕ್ತಿಕ ಸಾಲ ಬರೆಯಲಾಗಿತ್ತು.

ಇನ್ನೂ ಬ್ಯಾಂಕ್ ನ ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ ದಿನತ್ ಶೆಟ್ಟಿ, ನನ್ನ ಆರ್ಥಿಕ ಸ್ಥಿತಿಯ ಬಗ್ಗೆ ಚಿಂತಿಸಿದ್ದಕ್ಕೆ ಧನ್ಯವಾದಗಳು ಕೊಟಕ್, ಹಾಗೇ ನೀವು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಈ ಸಾಲವನ್ನು ತೀರಿಸಲು ಸಶಕ್ತವಾದಂತಹ ಅರ್ಧಾಂಗಿಯನ್ನು ನನಗೆ ಹುಡುಕಿಕೊಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಸ್ಕ್ರೀನ್‌ ಶಾಟ್ ಅನ್ನು ದಿನತ್ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಗೇ ಈ ಪೋಸ್ಟ್ ನ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಅದೇನೆಂದರೆ, ಇಷ್ಟೊಂದು ಕೆಟ್ಟ ದಿನ ಯಾರ ಬದುಕಿನಲ್ಲಿಯೂ ಬಾರದಿರಲಿ ಸಹೋದರ, ಅದ್ದೂರಿಯಾಗಿ ಮದ್ವೆಯಾಗುವ ಜೋಶ್‌ನಲ್ಲಿ 10 ವರ್ಷಗಳ ಕಾಲ ಇಎಂಐ ಕಟ್ಟುವ ದುಸ್ಥಿತಿ ಯಾರಿಗೂ ಬರದಿರಲಿ ಎಂದು ಬರೆದು ಅದರ ಜೊತೆಗೆ ಹಾಸ್ಯದ ಎಮೋಜಿಯನ್ನು ಹಾಕಿದ್ದಾರೆ. ಈ ಪೋಸ್ಟ್ ನೋಡಿದ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.