Home News Ahmdabad London Plane Crash: ವಿಮಾನ ಅಪಘಾತದ ಬಗ್ಗೆ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ‘ಇದು...

Ahmdabad London Plane Crash: ವಿಮಾನ ಅಪಘಾತದ ಬಗ್ಗೆ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ‘ಇದು ಪದಗಳಿಗೆ ಮೀರಿದ ಹೃದಯ ವಿದ್ರಾವಕ ಘಟನೆ’

PM Modi

Hindu neighbor gifts plot of land

Hindu neighbour gifts land to Muslim journalist

Ahmdabad London Plane Crash: ಗುರುವಾರ (ಜೂನ್ 12, 2025) ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ತಿಳಿದು ಆಘಾತ ಮತ್ತು ದುಃಖವಾಗಿದೆ ಎಂದು ಅವರು ಹೇಳಿದರು.

“ಅಹಮದಾಬಾದ್‌ನಲ್ಲಿ ಸಂಭವಿಸಿದ ದುರಂತವು ನಮಗೆ ಆಘಾತ ಮತ್ತು ದುಃಖವನ್ನುಂಟು ಮಾಡಿದೆ. ಪದಗಳಲ್ಲಿ ಹೇಳಲಾಗದಷ್ಟು ಹೃದಯವಿದ್ರಾವಕವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಸಂತ್ರಸ್ತರಿಗೆ ಸಹಾಯ ಮಾಡಲು ಶ್ರಮಿಸುತ್ತಿರುವ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ.” ಎಂದು ಹೇಳಿದರು.

ಅಹಮದಾಬಾದ್‌ನಿಂದ ಮಧ್ಯಾಹ್ನ 1:38 ಕ್ಕೆ ಹೊರಟ ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಇವರಲ್ಲಿ 169 ಭಾರತೀಯ ನಾಗರಿಕರು, 53 ಬ್ರಿಟಿಷ್ ನಾಗರಿಕರು, ಒಬ್ಬರು ಕೆನಡಾದ ನಾಗರಿಕರು ಮತ್ತು ಏಳು ಮಂದಿ ಪೋರ್ಚುಗೀಸ್ ನಾಗರಿಕರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.