Home News Viral Video : ‘ಇಂದು ಚಂದ್ರ ಗ್ರಹಣ, ಹೆರಿಗೆ ಬೇಡ ಪ್ಲೀಸ್ ‘ ಎಂದ ಗರ್ಭಿಣಿ...

Viral Video : ‘ಇಂದು ಚಂದ್ರ ಗ್ರಹಣ, ಹೆರಿಗೆ ಬೇಡ ಪ್ಲೀಸ್ ‘ ಎಂದ ಗರ್ಭಿಣಿ ಮಹಿಳೆ – ಡಾಕ್ಟರ್ ಕೊಟ್ಟ ಉತ್ತರ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

VIral Video : ಇಂದು ಆಕಾಶದಲ್ಲಿ ಒಂದು ವಿಸ್ಮಯ ಘಟಣೆ ಸಂಭವಿಸಲಿದೆ. ಚಂದ್ರನು ಸಂಪೂರ್ಣವಾಗಿ ಕಿತ್ತಲೆ ಬಣ್ಣದಲ್ಲಿ ಬರಿಗಣ್ಣಿಗೆ ಗೋಚರಿಸಲಿದ್ದು ಚಂದ್ರ ಗ್ರಹಣವು ಉಂಟಾಗಲಿದೆ. ಈ ಗ್ರಹಣವನ್ನು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಲ್ಲಿಯೂ ಕೂಡ ಪರಿಗಣಿಸಲಾಗುತ್ತದೆ. ಗ್ರಹಣದ ವೇಳೆ ಊಟ ಮಾಡಬಾರದು, ಪೂಜೆ ಮಾಡಬಾರದು, ದೇವರಿಗೆ ನಮಸ್ಕರಿಸಬಾರದು, ದೇವರ ದರ್ಶನ ಮಾಡಬಾರದು ಹೀಗೆ ಕೆಲವು ಸಂಪ್ರದಾಯಗಳನ್ನು ನಾವು ಆಚರಿಸುತ್ತೇವೆ. ಅಂತೆಯೇ ಇಲ್ಲೊಬ್ಬಳು ಗರ್ಭಿಣಿ ಮಹಿಳೆ ಚಂದ್ರ ಗ್ರಹಣ ಕಾರಣ ನನಗೆ ಹೆರಿಗೆ ಮಾಡಬೇಡಿ ಎಂದು ಡಾಕ್ಟರ್ ಬಳಿ ಬೇಡಿಕೊಂಡಿದ್ದಾಳೆ. ಇದಕ್ಕೆ ಡಾಕ್ಟರ್ ಅಚ್ಚರಿಯ ಉತ್ತರವನ್ನು ನೀಡಿದ್ದಾರೆ.

https://www.instagram.com/reel/DODuOYWknKG/?igsh=NHM5ZnE5bjFzY3Fy

ಹೌದು, ಡಾ. ಶೈಫಾಲಿ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಆಸ್ಪತ್ರೆಗೆ ಬಂದ ವಾಣಿ ಎಂಬ ಗರ್ಭಿಣಿ ಮಹಿಳೆ ಚಂದ್ರ ಗ್ರಹಣದ ದಿನ ನನಗೆ ಹೆರಿಗೆ ಬೇಡ ಎಂದು ಹೇಳಿದ್ದರಂತೆ. ಆಗ ಡಾಕ್ಟರ್, ವಾಣಿ ನಿಮ್ಮ ಹೆರಿಗೆ ದಿನಾಂಕ ಸೆಪ್ಟೆಂಬರ್ 7. ಅದನ್ನು ಮುಂದೂಡಲು ಸಾಧ್ಯವಿಲ್ಲ. ನಾವು ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸುತ್ತೇವೆ” ಎಂದು ಹೇಳಿದರು. ಇದಕ್ಕೆ ಮಹಿಳೆ ತಕ್ಷಣವೇ “ಇಲ್ಲ ಮೇಡಂ, ಸೆಪ್ಟೆಂಬರ್ 7 ರಂದು ಚಂದ್ರಗ್ರಹಣವಿದೆ. ಆ ದಿನ ಮನೆಯಿಂದ ಹೊರಗೆ ಕಾಲಿಡುವುದನ್ನು ಸಹ ನಿಷೇಧಿಸಲಾಗಿದೆ” ಎಂದು ಉತ್ತರಿಸಿದಳಂತೆ

ಅದಕ್ಕೆ ಡಾಕ್ಟರ್ ಅವರು, ಚಂದ್ರಗ್ರಹಣವಾಗಲಿ ಅಥವಾ ಸೂರ್ಯಗ್ರಹಣವಾಗಲಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಾರದು. ಸೆಪ್ಟೆಂಬರ್ 7 ರಂದು ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿದೆ ಎಂದು ನನಗೂ ತಿಳಿದಿದೆ. ಆದರೆ ಹಾಗಂತ ನಿನ್ನ ಹೆರಿಗೆಯನ್ನು ಮುಂದೂಡಲಾಗದು. ಏಕೆಂದರೆ ಹೆರಿಗೆ ಒಂದು ನೈಸರ್ಗಿಕ ಪ್ರಕ್ರಿಯೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಗ್ರಹಣಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ಹೇಳಿದರಂತೆ.

ಇದನ್ನೂ ಓದಿ:Davangere : ‘ ರೇಣುಕಾ ಸ್ವಾಮಿ ಫ್ಯಾಮಿಲಿಗೆ BMW ಕಾರ್, MLA ಟಿಕೆಟ್, ಸರ್ಕಾರಿ ನೌಕರಿ ಕೊಡಿ – ರೇಣುಕಾಸ್ವಾಮಿ ಅಭಿಮಾನಿಯಿಂದ ಸರ್ಕಾರಕ್ಕೆ ಮನವಿ

ಅಲ್ಲದೆ ಮುಂದುವರೆದು ಮಾತನಾಡಿದ ಅವರು ‘ ಅನೇಕ ಮನೆಗಳಲ್ಲಿ ಗ್ರಹಣ ಎಂದು ನೀವು ಗರ್ಭಿಣಿ ಮಹಿಳೆಗೆ ತಿನ್ನಲು ಅಥವಾ ಮಲಗಲು ಬಿಡುವುದಿಲ್ಲ. ಯಾವುದೇ ತೀಕ್ಷ್ಣವಾದ ಅಥವಾ ಅಪಾಯಕಾರಿ ವಸ್ತುಗಳನ್ನು ಬಳಸಲು ಬಿಡುವುದಿಲ್ಲ. ಗರ್ಭಿಣಿಯರು ಚಂದ್ರಗ್ರಹಣದ ಸಮಯದಲ್ಲಿ ಮೇಲೆ ತಿಳಿಸಿದ ಯಾವುದೇ ಕೆಲಸಗಳನ್ನು ಮಾಡಿದರೆ ಮಗುವಿನ ಏನೋ ಅಪಾಯ ಆಗಲಿದೆ ಎಂಬ ತಪ್ಪು ಕಲ್ಪನೆಯೂ ಜನರಲ್ಲಿದೆ. ಆದರೆ ಈ ಅವಧಿಯಲ್ಲಿ ಗರ್ಭಿಣಿಯರು ಏನು ಬೇಕಾದರೂ ತಿನ್ನಬಹುದು ಮತ್ತು ಯಾವಾಗ ಬೇಕಾದರೂ ಮಲಗಬಹುದು ಎಂದು ಎಲ್ಲಾ ಗರ್ಭಿಣಿಯರಿಗೆ ಹೇಳಲು ಬಯಸುತ್ತೇನೆ. ಗ್ರಹಣದ ವೇಳೆ ನೀವು ಹೀಗೆ ತಿಂದರೆ ಮಗುವಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಅವರು ಹೇಳುತ್ತಾರೆ.