Home Karnataka State Politics Updates ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ| ಪ್ರಧಾನಿ ಮೋದಿಯಿಂದ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ| ಪ್ರಧಾನಿ ಮೋದಿಯಿಂದ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ

Hindu neighbor gifts plot of land

Hindu neighbour gifts land to Muslim journalist

ಶಿವಮೊಗ್ಗದಲ್ಲಿ ನಿನ್ನೆ ನಡೆದ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣದ ಸುದ್ದಿ ಪ್ರಧಾನಿ ನರೇಂದ್ರ ಮೋದಿಯವರಿಗೂ ತಲುಪಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಈಶ್ವರಪ್ಪ ಅವರು ಇಂದು ಹರ್ಷ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಭಾಗವಹಿಸಿ, ನಂತರ ಹರ್ಷನ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಸುದ್ದಿ ಪ್ರಧಾನಿಯವರೆಗೆ ತಲುಪಿದೆ. ಮೊಟ್ಟ ಮೊದಲನೆಯದಾಗಿ ಎಲ್ಲರೂ ಶಾಂತಿ ಕಾಪಾಡಿ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮೋದಿಯವರು ಹೇಳಿದ್ದಾರೆಂದು ಸೂಚಿಸಿದ್ದಾರೆ.

ಹಾಗಾಗಿ ಪ್ರಧಾನಿ ಮೋದಿಯವರ ಮಾತಿಗೆ ಬೆಲೆ ಕೊಡಬೇಕೆಂದು ಈಶ್ವರಪ್ಪ ಮನವಿ ಮಾಡಿದ್ದಾರೆ. ಯಾರೂ ಭಾವೋದ್ವೇಗಕ್ಕೊಳಗಾಗದೇ ಶಾಂತಿ ಕಾಪಾಡಬೇಕೆಂದು ಈಶ್ವರಪ್ಪ ಹೇಳಿದರು.