Home News ಪಿಎಂ ಕಿಸಾನ್ ಯೋಜನೆಯಲ್ಲಿ ಅತಿ ಕಡಿಮೆ ದರದಲ್ಲಿ ದೊರೆಯಲಿದೆ ಲೋನ್ | ಅರ್ಜಿ ಸಲ್ಲಿಸಲು ಈ...

ಪಿಎಂ ಕಿಸಾನ್ ಯೋಜನೆಯಲ್ಲಿ ಅತಿ ಕಡಿಮೆ ದರದಲ್ಲಿ ದೊರೆಯಲಿದೆ ಲೋನ್ | ಅರ್ಜಿ ಸಲ್ಲಿಸಲು ಈ ನಿಯಮಗಳನ್ನು ಪಾಲಿಸಿ

Hindu neighbor gifts plot of land

Hindu neighbour gifts land to Muslim journalist

ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪಿಎಂ ಕಿಸಾನ್ ಕೂಡ ಒಂದು. ಕೇಂದ್ರ ಸರ್ಕಾರ ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆಯಡಿ 9 ನೇ ಕಂತನ್ನು ಬಿಡುಗಡೆ ಮಾಡಿದೆ. ದೇಶದ ಕೋಟ್ಯಾಂತರ ರೈತರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿ, ರೈತರು ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ಅಲ್ಲದೆ, ಕೈಗೆಟುಕುವ ದರದಲ್ಲಿ ಸಾಲ ಸೌಲಭ್ಯ ಕೂಡಾ ಸಿಗಲಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಸ್ವಾವಲಂಬಿ ಭಾರತ ಯೋಜನೆಯಡಿ ಲಿಂಕ್ ಮಾಡಲಾಗಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ, ಸರ್ಕಾರವು ರೈತರಿಗೆ ಕೈಗೆಟಕುವ ದರದಲ್ಲಿ ಸಾಲವನ್ನು ನೀಡುತ್ತಿದೆ.

ಈ ಸಾಲದ ಮೇಲಿನ ಬಡ್ಡಿ ದರ ತೀರ ಕಡಿಮೆ :

ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಈ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಯಾವುದೆ ಗ್ಯಾರಂಟಿ ಇಲ್ಲದೆ, ರೈತರು, 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. 3-5 ಲಕ್ಷ ರೂ.ಗಳ ಅಲ್ಪಾವಧಿ ಸಾಲಗಳನ್ನು ಕೇವಲ 4 ಶೇಕಡಾ ಬಡ್ಡಿದರದಲ್ಲಿ ನೀಡಲಾಗುತ್ತದೆ.

ಸರ್ಕಾರವು ಈ ಸಾಲದ ಮೇಲೆ 2 ಪ್ರತಿಶತದಷ್ಟು ಸಬ್ಸಿಡಿಯನ್ನು ನೀಡುತ್ತದೆ. ಇನ್ನು ಸಮಯಕ್ಕೆ ಸರಿಯಾಗಿ, ಮರುಪಾವತಿ ಮಾಡಿದರೆ, 3 ಶೇಕಡಾ ರಿಯಾಯಿತಿ ನೀಡಲಾಗುತ್ತದೆ. ಈ ರೀತಿಯಾಗಿ, ಈ ಸಾಲದ ಮೇಲೆ ಕೇವಲ 4 ಶೇ. ಬಡ್ಡಿ ವಿಧಿಸಲಾಗುತ್ತದೆ. ಆದರೆ ಸಾಲ ಮರುಪಾವತಿಯಲ್ಲಿ ವಿಳಂಬವಾದರೆ, ಸಾಲದ ಬಡ್ಡಿ ದರವು 7 ಪ್ರತಿಶತದಷ್ಟು ಇರುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸುವುದು ಹೇಗೆ ?

*ಕಿಸಾನ್ ಕ್ರೆಡಿಟ್ ಕಾರ್ಡ್ ತಯಾರಿಸಲು, ಮೊದಲು ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಬೇಕು

*ಈಗ ಅವರಿಂದ ನಿಮ್ಮ ಭೂಮಿಯ ಖಾತೆಯನ್ನು ಪಡೆಯಿರಿ

*ಇದರ ನಂತರ, ಯಾವುದೇ ಬ್ಯಾಂಕಿಗೆ ಹೋಗಿ ಮ್ಯಾನೇಜರ್ ಅನ್ನು ಭೇಟಿ ಮಾಡಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಲು ಅರ್ಜಿ ಸಲ್ಲಿಸಿ

*ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಯಾವುದೇ ಗ್ರಾಮೀಣ ಬ್ಯಾಂಕಿನಿಂದ ತಯಾರಿಸಿದರೆ, ಅದರಲ್ಲಿ ಸರ್ಕಾರವು ಪ್ರೋತ್ಸಾಹಧನ ಇತ್ಯಾದಿಗಳನ್ನು ನೀಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ

*ಇದಾದ ನಂತರ ಬ್ಯಾಂಕ್ ಮ್ಯಾನೇಜರ್ ನಿಮ್ಮನ್ನು ವಕೀಲರ ಬಳಿಗೆ ಕಳುಹಿಸುತ್ತಾರೆ. ಅಲ್ಲಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ

*ಇದರ ನಂತರ ನೀವು ಬ್ಯಾಂಕಿಗೆ ಹೋಗಿ ಒಂದು ಫಾರಂ ಭರ್ತಿ ಮಾಡಬೇಕು

*ಇದರೊಂದಿಗೆ ಕೆಲವು ಪೇಪರ್ ವರ್ಕ್ ಇರುತ್ತದೆ. ಇದನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ರಚಿಸಲಾಗುತ್ತದೆ

*ಇಲ್ಲಿ ನಿಮಗೆ ಎಷ್ಟು ಸಾಲ ಸಿಗುತ್ತದೆ ಎನ್ನುವುದು ನೀವು ಎಷ್ಟು ಭೂಮಿ ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ

ಈ ನಿಯಮಗಳನ್ನು ಪಾಲಿಸಿ ನೀವು ನಿಮ್ಮ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡನ್ನು ಪಡೆಯಬಹುದಾಗಿದೆ. ಇಲ್ಲಿ ತಿಳಿಸಿದ ಮಾಹಿತಿಯ ಮೂಲಕ ಈ ಯೋಜನೆಯ ಪ್ರಯೋಜನವನ್ನು ಆದಷ್ಟು ಬೇಗ ಪಡೆದುಕೊಳ್ಳಿ.