Home News ನೀವು ಕೂಡ ಚಾರ್ಜರ್ ಸಮಸ್ಯೆಯಿಂದ ಬಳಲುತಿದ್ದೀರಾ?!! ಒಂದು ಫೋನ್ ಗೆ ಆದ ಚಾರ್ಜರ್ ಇನ್ನೊಂದಕ್ಕೆ ಆಗುತ್ತಿಲ್ಲವೆಂದು...

ನೀವು ಕೂಡ ಚಾರ್ಜರ್ ಸಮಸ್ಯೆಯಿಂದ ಬಳಲುತಿದ್ದೀರಾ?!! ಒಂದು ಫೋನ್ ಗೆ ಆದ ಚಾರ್ಜರ್ ಇನ್ನೊಂದಕ್ಕೆ ಆಗುತ್ತಿಲ್ಲವೆಂದು ತಲೆಕೆಡಿಸಿಕೊಂಡಿದ್ದೀರಾ? | ಸದ್ಯದಲ್ಲೇ ಎಲ್ಲಾ ಫೋನ್ ಗಳಿಗೆ ಹೊಂದುವಂತಹ ಒಂದೇ ಪೋರ್ಟ್ ನ ಚಾರ್ಜರ್ ಬರಲಿದೆಯಂತೆ !!

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದಲ್ಲಿ ಯಾರ ಜೊತೆ ಮೊಬೈಲ್ ಫೋನ್ ಇರುವುದಿಲ್ಲ ಹೇಳಿ. ಈಗ ಎಲ್ಲಾ ಕೆಲಸಕ್ಕೂ ಮೊಬೈಲ್ ಫೋನ್ ಅಗತ್ಯ ಎಲ್ಲರಿಗೂ ಇದ್ದೇ ಇದೆ. ಮೊಬೈಲ್ ಫೋನ್ ಇಲ್ಲದೆ ಯಾವ ಕೆಲಸ ಕೂಡ ನಡೆಯುವುದಿಲ್ಲ ಎಂಬ ಸ್ಥಿತಿಯೂ ನಿರ್ಮಾಣವಾಗಿದೆ. ಆದರೆ ಚಾರ್ಜರ್ ಗಳ ಸಮಸ್ಯೆ ಕೆಲವು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.

ಐಫೋನ್ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳ ಚಾರ್ಜರ್​ಗಳು ವಿಭಿನ್ನವಾಗಿದೆ. ಇದರ ನಡುವೆ ವೈರ್​ಲೆಸ್​ ಚಾರ್ಜರ್​ಗಳು ಕೂಡ ಮಾರುಕಟ್ಟೆಗೆ ಆಗಮಿಸುತ್ತಿದೆ. ಮತ್ತೊಂದೆಡೆ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಟೈಪ್​- ಸಿ ಚಾರ್ಜರ್​ ಕೂಡ ನೀಡಲಾಗುತ್ತಿದೆ. ಹೀಗಿರುವಾಗ ಇದನ್ನು ಗಮನಿಸಿದ ಯುರೋಪಿಯನ್​ ಕಮಿಷನ್​ ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ ಹಾಗೂ ಇಯರ್​ ಫೋನ್​​ಗಳಿಗೆ ಒಂದೇ ವಿಧದ ಚಾರ್ಜರ್​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

ಮೊದಲೇ ಹೇಳಿದಂತೆ ಮಾರುಕಟ್ಟೆಯಲ್ಲಿ ನಾನಾ ವಿಧಧ ಚಾರ್ಜರ್​ಗಳಿವೆ. ಆ್ಯಂಡ್ರಾಯ್ಡ್​ ಮತ್ತು ಐಫೋನ್​ಗಳ ಚಾರ್ಜರ್​ ಭಿನ್ನವಾಗಿದೆ. ಐಪಾಡ್​ ಮತ್ತು ಇಯರ್​ ಫೋನ್​ಗಳಿಗೂ ಪ್ರತ್ಯೇಕ ಚಾರ್ಜರ್​ಗಳಿವೆ. ಅಷ್ಟು ಮಾತ್ರವಲ್ಲದೆ, ಆ್ಯಂಡ್ರಾಯ್ಡ್​ ಬಳಕೆದಾರರು ಟೈಪ್​- ಸಿ ಚಾರ್ಜರ್​, ಮೈಕ್ರೊ ಯುಎಸ್​ಬಿ ಬಳಸುತ್ತಿದ್ದಾರೆ.

ಈ ಚಾರ್ಜರ್​​ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್​ಗಳನ್ನು ಹಿಡಿದುಕೊಂಡು ಹೋಗಬೇಕಿದೆ. ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಯುರೋಪಿಯನ್​ ಕಮಿಷನ್​ ಎಲ್ಲಾ ಫೋನ್​, ಐಪ್ಯಾಡ್​, ಇಯರ್​ಫೋನ್​ಗೂ ಒಂದೇ ಚಾರ್ಜರ್​ ನೀಡುವ ಆದೇಶ ಹೊರಡಿಸಿದೆ.

ಯುರೋಪಿಯನ್ ಕಮಿಷನ್ ಹೇಳಿರುವಂತೆ, ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್ಫೋನ್ ಗಳಿಗೆ ಸಾಮಾನ್ಯ ಜಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್ಬಿ-ಸಿ ಕನೆಕ್ಟರ್ ಎಲ್ಲಾ ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು, ಹೆಡ್ಫೋನ್ಗಳು, ಫೋರ್ಟಬಲ್ ಸ್ಪೀಕರ್ಗಳು ಮತ್ತು ಹ್ಯಾಂಡ್ಹೆಲ್ಡ್ ವಿಡಿಯೋಗೇಮ್ ಕನ್ಸೋಲ್ಗಳಿಗೆ ಪ್ರಮಾಣಿತ ಪೋರ್ಟ್ ನೀಡಬೇಕು ಎಂದಿದೆ.

ಈ ವಿಚಾರ ತಿಳಿದು ಆ್ಯಪ್ ಸಂಸ್ಥೆ ಯುರೋಪಿಯನ್ ಕಮಿಷನ್ ಹೊರಡಿಸಿರುವ ಆದೇಶವನ್ನು ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಿಕ್ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಮತ್ತು ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದಿದೆ.

ಚೀನಾ, ಜಪಾನ್​,ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್​ ಮತ್ತು ಐಫೊನ್​ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್​ ಪೋರ್ಟ್​ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್​ಫೋನ್​ ಮತ್ತು ಚಾರ್ಜರ್​ ಫೋರ್ಟ್​ಗಳು ಭಿನ್ನವಾಗಿದೆ.