Home latest ಪೆರ್ಲಂಪಾಡಿ: ಒಕ್ಕೂಟದ ಪದಗ್ರಹಣ, ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಪೆರ್ಲಂಪಾಡಿ: ಒಕ್ಕೂಟದ ಪದಗ್ರಹಣ, ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕೊಳ್ತಿಗೆ ಪೆರ್ಲಂಪಾಡಿ ಮೊಗಪ್ಪೆಇದರ ಆಶ್ರಯದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಳ್ತಿಗೆ ಪೆರ್ಲಂಪಾಡಿ ಇವುಗಳ ಸಹಕಾರದೊಂದಿಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ ಸಮಾರಂಭ ಜೂ.26ರಂದು ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಷಣ್ಮುಖದೇವ ಪ್ರೌಢ ಶಾಲಾ ಮುಖ್ಯಗುರು ಕೃಷ್ಣವೇಣಿ ದೀಪ ಬೆಳಗಿಸಿ ಹಿಂಗಾರ ಅರಳಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು, ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ ರೈ, ಪ್ರಾ.ನಿರ್ದೇಶಕರು ವಿಮಾ ವಿಭಾಗದ ಜಯರಾಮ ನೆಲ್ಲಿತ್ತಾಯ, ಷಣ್ಮುಖದೇವ ದೇವಸ್ಥಾನದ ಅಧ್ಯಕ್ಷ ನೇಮಿರಾಜ ಪಾಂಬಾರು, ಷಣ್ಮುಖದೇವ ಪ್ರೌಢ ಶಾಲಾ ಸಂಚಾಲಕ ಗಣೇಶ್ ಭಟ್ ಮಾಪಲಮಜಲು, ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾ. ಯೋಜನಾಧಿಕಾರಿ ಆನಂದ ಕೆ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿ ಜವಬ್ದಾರಿಯನ್ನು ಹಸ್ತಾಂತರ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ನೂತನವಾಗಿ ರಚನೆಗೊಂಡ ಎರಡು ಸಂಘಗಳಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳನ್ನು, ಸಿಎಸ್‌ಸಿ ಸಿಬ್ಬಂದಿ ವರ್ಗದವರನ್ನು ಹಾಗೂ ವೇದಿಕೆ ರಚನೆ ಮಾಡಿದ ಚಂದ್ರಶೇಖರ ಮಾಲೆತ್ತೋಡಿರವರನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು.ರಕ್ಷಿತಾ ವಾರ್ಷಿಕ ವರದಿ ವಾಚಿಸಿದರು. ಗೀತಪ್ರಿಯ ಪ್ರಾರ್ಥಿಸಿದರು. ಶೃತಿ ಕೆ ಸ್ವಾಗತಿಸಿದರು. ಉದಯಕುಮಾರ್ ಜಿ.ಕೆ ವಂದಿಸಿದರು.