Home latest ಜೂ. 12 ರಂದು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ‘ -ವೀರಶೈವ ಲಿಂಗಾಯತ...

ಜೂ. 12 ರಂದು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ‘ -ವೀರಶೈವ ಲಿಂಗಾಯತ ಸಂಘಟನೆ

Hindu neighbor gifts plot of land

Hindu neighbour gifts land to Muslim journalist

ಬೆಳಗಾವಿ (ಮೇ. 30):  ಬಸವಕಲ್ಯಾಣದ(Basavakalyana) ಪೀರಪಾಷಾ (Peer Pasha Dargah) ಬಂಗ್ಲಾ ದರ್ಗಾದ ಆವರಣದಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿದ್ದು, ಇದೇ ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾದ ಬಸವಾದಿ ಶರಣರ ಕಾಲದ ಅನುಭವ ಮಂಟಪದ ಮೂಲ ಕಟ್ಟಡವಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಜೂ.12ರಂದು ವೀರಶೈವ ಲಿಂಗಾಯತ ಸಂಘಟನೆಗಳು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎಂಬ ರಾರ‍ಯಲಿಗೆ ಕರೆ ನೀಡಿವೆ.
‘ಪೀರ್ ಪಾಷಾ ದರ್ಗಾ ಶೈವ ಪರಂಪರೆಯ ಮಾದರಿಯಲ್ಲಿದೆ. ಪೀರ್ ಪಾಷಾ ಬಂಗಲದಲ್ಲಿ ಅನುಭವ ಮಂಟಪ ನಿರ್ಮಾಣವಾಗಬೇಕು ಎನ್ನುವ ಕೂಗಿಗೆ ನಾನು ಬೆಂಬಲ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸುತ್ತೇವೆ. …..ಈ ಬಗ್ಗೆ ಸಿಎಂಗೂ ವಿನಂತಿಮಾಡುತ್ತೇನೆ’ ಎಂದು ಬಸವ ಕಲ್ಯಾಣ ಶಾಸಕ ಶರಣು ಸಲಗರ (Sharanu Salagara) ಹೇಳಿದ್ದಾರೆ.