Home News Pawan Kalyan: ನಟ, ಡಿಸಿಎಂ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಗೆ ಮತಾಂತರ ?! ‘ನಾನು ಮತಾಂತರಗೊಂಡಿದ್ದೇನೆ,...

Pawan Kalyan: ನಟ, ಡಿಸಿಎಂ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಗೆ ಮತಾಂತರ ?! ‘ನಾನು ಮತಾಂತರಗೊಂಡಿದ್ದೇನೆ, ನನ್ನ ಮಕ್ಕಳು ಕ್ರಿಶ್ಚಿಯನ್ ಧರ್ಮದವರು’ ಎಂದ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Pawan Kalyan: ತಿರುಪತಿ ಪ್ರಸಾದದ ವಿವಾದದ ಬೆನ್ನಲ್ಲೇ ಆಂಧ್ರ ಡಿಸಿಎಂ (Andra DCM) ಹಾಗೂ ನಟ ಪವನ್ ಕಲ್ಯಾಣ್ (Pawan Kalyan)​ ತಿರುಪತಿ ಲಡ್ಡು ವಿವಾದದ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಗುಡುಗಿ ಸನಾತನ ಧರ್ಮದ ಬಗ್ಗೆ ಆಡಿದ ಹೆಮ್ಮೆಯ ಮಾತುಗಳು ಇಡೀ ದೇಶಾದ್ಯಂತ ವೈರಲ್ ಆಗಿತ್ತು. ಹಿಂದೂಗಳ ಮೈ ರೋಮ ನಿಲ್ಲುವಂತಿತ್ತು ಅವರು ತೀಕ್ಷ್ಣ ನುಡಿಗಳು. ಆದರೀಗ ಈ ಬೆನ್ನಲ್ಲೇ ಅವರು ತಾನು ಕ್ರಿಶ್ಚಿಯನ್ ಮತಾಂತರಗೊಂಡಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋ ಒಂದು ಇದೀಗ ಫುಲ್ ವೈರಲ್ ಆಗ್ತಿದೆ.

ತಿರುಪತಿ ಲಡ್ಡು ವಿವಾದದ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಗುಡುಗಿದ್ದ ಪವನ್ ಕಲ್ಯಾಣ್ ಆಕ್ರೋಶ ಮಾತುಗಳು ಹಿಂದೂಗಳನ್ನು ಬಡಿದೆಬ್ಬಿಸುವಂತೆ ಇತ್ತು. ಪವನ್​ ಪವರ್​ ಫುಲ್ ಮಾತುಗಳು ಟೀಕೆ ಮಾಡಿದವರಿಗೂ ತಟ್ಟಿತ್ತು. ಬಳಿಕ ಕೆಲವರು ಕ್ಷಮೆ ಕೂಡ ಕೇಳಿದ್ರು. ಹಿಂದೂ ಧರ್ಮ, ದೇವರ ವಿಚಾರಕ್ಕೆ ಬಂದ್ರೆ ಸುಮ್ಮನೆ ಇರಲ್ಲ ಎಂದ ಪವನ್ ಮಾತುಗಳು ಸೋಶಿಯಲ್ ಮೀಡಿಯಾದಲ್ಲೂ (Social Media) ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ನಟ ಪವನ್ ಕಲ್ಯಾಣ್​​ ನಾನು ಮತಾಂತರಗೊಂಡಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋ ಒಂದು ಇದೀಗ ಫುಲ್ ವೈರಲ್ ಆಗ್ತಿದೆ. ಆದರೆ ಇದು ಹಳೆಯು ವಿಡಿಯೋ ಎನ್ನಲಾಗಿದೆ.

ಹೌದು, ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಡಿಸಿಎಂ ನಟ ಪವನ್​ ಕಲ್ಯಾಣ್​​ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಡಿಸಿಎಂ ಪವನ್ ಕಲ್ಯಾಣ್, ನನ್ನ ಮಕ್ಕಳು ಸಂಪ್ರದಾಯಸ್ಥ ಕ್ರೈಸ್ತರು ಎಂದಿದ್ದಾರೆ. ನಾನು ಚರ್ಚ್‌ಗೆ ಹೋಗುತ್ತೇನೆ. ನಾನು ಬ್ಯಾಪ್ಟೈಜ್ ಆಗಿದ್ದೇನೆ. ಯೇಸುವಿನ ಜನ್ಮಸ್ಥಳವಾದ ಬೆಥ್ ಲೆಹೆಮ್ಗೆ ಭೇಟಿ ನೀಡಿದ್ದೇನೆ ಎಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಂದಹಾಗೆ ಪವನ್ ಅವರ 3ನೇ ಪತ್ನಿ ಹೆಸರು ಅನ್ನಾ ಲೆಜ್ನೆವಾ. ಇವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ರಷ್ಯಾದ ಮಾಡೆಲ್‌ ಆದ ಇವರು 2011ರಲ್ಲಿ ತೀನ್ ಮಾರ್ ಚಿತ್ರದ ಶೂಟಿಂಗ್​​ನಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರು ಪ್ರೀತಿಸಿ 2013ರಲ್ಲಿ ವಿವಾಹವಾದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಕ್ರಿಶ್ಚಿಯನ್ ಆಗಿದ್ದಾರೆ.

ಅಲ್ಲದೆ ಪವನ್ ಕಲ್ಯಾಣ್ ಏಸುವಿನ ಬಗ್ಗೆ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದರು. ಸಿನಿಮಾ ಮಾಡುವ ಭಾಗವಾಗಿಯೇ ಅವರು ಇಸ್ರೇಲ್​ಗೆ ತೆರಳಿದ್ದರು. ಎಲ್ಲಾ ತಯಾರಿ ನಡೆಸಿದ್ದ ಚಿತ್ರತಂಡ ಬಳಿಕ ಸಿನಿಮಾ ಕೈಬಿಟ್ಟಿದ್ರು.