Home News Pavithra Gowda: ಜೈಲಿನಲ್ಲಿ ಜಂಭದ ಕೋಳಿ ಪವಿತ್ರಾ ಗೌಡಳ ಹೊಸ ವರಸೆ! ಜೈಲು ಸೇರಿದ 72...

Pavithra Gowda: ಜೈಲಿನಲ್ಲಿ ಜಂಭದ ಕೋಳಿ ಪವಿತ್ರಾ ಗೌಡಳ ಹೊಸ ವರಸೆ! ಜೈಲು ಸೇರಿದ 72 ದಿನಗಳ ಬಳಿಕ ಹೊಸ ಪ್ಲಾನ್

Hindu neighbor gifts plot of land

Hindu neighbour gifts land to Muslim journalist

Pavithra Gowda: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಇಷ್ಟು ದಿವಸ ಜಂಭದ ಕೋಳಿಯಂತೆ ಸುಮ್ಮನಿದ್ದು ಈಗ ಏಕಯೇಕಿ ಜಾಮೀನು ಪಡೆಯಲು ಅರ್ಜಿ ಹಾಕಿದ್ದಾರೆ. ಹೌದು, ಜೈಲಿನಲ್ಲಿ ಬರೋಬ್ಬರಿ 72 ದಿನಗಳನ್ನು ಕಳೆದಿರುವ ಪವಿತ್ರಾ ಗೌಡ (Pavithra Gowda) ಈಗ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದು, ಆಗಸ್ಟ್​ 22ರಂದು ಇದರ ವಿಚಾರಣೆ ನಡೆಯಲಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ದರ್ಶನ್ ಮತ್ತು ಆತನ ಗ್ಯಾಂಗ್ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಈ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ನಟ ದರ್ಶನ್​ ಎ2 ಆಗಿದ್ದಾರೆ.

ಈ ಕೇಸ್ ಜಾಮೀನು ನೀಡುವಂತೆ ಮನವಿ ಮಾಡಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ಗೆ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ನೋಟಿಸ್ ನೀಡಿದೆ. ಸದ್ಯ ಸಿಸಿಹೆಚ್ 57 ಕೋರ್ಟ್ ಆಗಸ್ಟ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ವಿಶೇಷ ಅಂದ್ರೆ ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಚಾರ್ಜ್​ಶೀಟ್​ ಸಲ್ಲಿಸುವ ವೇಳೆಗೆ ಸರಿಯಾಗಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸಿಸಿಎಚ್ 57ರ ನ್ಯಾಯಾಲಯದಲ್ಲಿ ವಕೀಲೆ ರೆನಿ ಸೆಬಾಸ್ಟಿನ್ ಅವರಿಂದ ಪವಿತ್ರಾ ಗೌಡ ಪರ ಜಾಮೀನಿಗೆ ಅರ್ಜಿ ಸಲ್ಲಿಕೆ ಆಗಿದೆ. ಸದ್ಯ ಈ ಹೊಸ ಪ್ಲಾನ್ ಹಿಂದಿನ ರಹಸ್ಯ ಇನ್ನಷ್ಟೇ ತಿಳಿದು ಬರಬೇಕಿದೆ.