Home latest Solar Eclipse : ಈ ಬಾರಿ ದೀಪಾವಳಿ ಹಬ್ಬದ ವೇಳೆ ಸೂರ್ಯಗ್ರಹಣ | ಹೆಚ್ಚಿನ ಮಾಹಿತಿ...

Solar Eclipse : ಈ ಬಾರಿ ದೀಪಾವಳಿ ಹಬ್ಬದ ವೇಳೆ ಸೂರ್ಯಗ್ರಹಣ | ಹೆಚ್ಚಿನ ಮಾಹಿತಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಅ.25ರಂದು ಸೂರ್ಯಗ್ರಹಣ ಸಂಭವಿಸಲಿದೆ. ವಿಜ್ಞಾನಿಗಳ ಪ್ರಕಾರ, ಭಾರತ ಅಲ್ಲದೇ ಯೂರೋಪ್‌, ಪಶ್ಚಿಮ ಹಾಗೂ ಕೆಂದ್ರ ಏಷ್ಯಾದ ರಾಷ್ಟ್ರಗಳು, ಈಶಾನ್ಯ ಆಫ್ರಿಕಾ ದೇಶಗಳಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ ಎಂದು ತಿಳಿಸಿದ್ದಾರೆ.

ಖಗೋಳ ವಿಜ್ಞಾನಿಗಳು “ದೇಶದ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಗ್ರಹಣ ಸ್ಪಷ್ಟವಾಗಿ ಮತ್ತು ಸುದೀರ್ಘ ಸಮಯದವರೆಗೆ ಕಾಣಲಿದ್ದು, ಪೂರ್ವ ಭಾಗದಲ್ಲಿ ಸೂರ್ಯಾಸ್ತದ ವೇಳೆ ಗೋಚರವಾಗುವುದಿಲ್ಲ” ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಸೂರ್ಯಗ್ರಹಣ ಸಂಜೆ 5.12ಕ್ಕೆ ಆರಂಭವಾಗಲಿದ್ದು, 5.49ಕ್ಕೆ ಗರಿಷ್ಠ ಮಟ್ಟ ತಲುಪಲಿದ್ದು ಅನಂತರ ಸಂಜೆ 5.56ಕ್ಕೆ ಅಂತ್ಯವಾಗಲಿದೆ. ಅ. 25ರಂದು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸಾಲಿನಲ್ಲಿ ಇರಲಿವೆ. ಇದರಿಂದ ಕೆಲವು ಸಮಯದವರೆಗೆ ಸೂರ್ಯನನ್ನು ಚಂದ್ರ ಆವರಿಸಿದಂತೆ ಕಾಣಿಸುತ್ತದೆ. ಇದು ಭಾಗಶಃ ಸೂರ್ಯ ಗ್ರಹಣಕ್ಕೆ ಎಡೆಮಾಡಿಕೊಡಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಲಿದೆ.

ಅ.25 ರಂದು ಸೂರ್ಯಗ್ರಹಣದ ಕಾರಣದಿಂದಾಗಿ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಾಲಯ ಸುಮಾರು 12 ಗಂಟೆಗಳ ಕಾಲ ಮುಚ್ಚಿರಲಿದೆ. ನವೆಂಬರ್ 8ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಅಂದೂ ಸಹ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನವೆಂಬರ್ 8ರಂದು ಚಂದ್ರಗ್ರಹಣ ಸಂಭವಿಸುವುದರಿಂದ, ಅಂದು ಕೂಡ ಬೆಳಿಗ್ಗೆ 8.40ರಿಂದ ಸಂಜೆ 7.20ರವರೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿರುತ್ತದೆ. ದೇವಸ್ಥಾನದ ದೇವರ ವಿಗ್ರಹಗಳಿಗೆ ಪ್ರತಿ ದಿನ ನಡೆಸುವ ‘ಕಲ್ಯಾಣೋತ್ಸವ’ ಸೇರಿದಂತೆ ಯಾವುದೇ ವಿಧಾನಗಳನ್ನು ಈ ಎರಡು ದಿನ ನಡೆಸುವುದಿಲ್ಲ.