Home News ಪಂಜ:ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ!!ಅಗಲಿದ ಹಸಿರು ಯೋಧರ ಭಾವಚಿತ್ರಕ್ಕೆ ಗೌರವ ನಮನ

ಪಂಜ:ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ!!ಅಗಲಿದ ಹಸಿರು ಯೋಧರ ಭಾವಚಿತ್ರಕ್ಕೆ ಗೌರವ ನಮನ

Hindu neighbor gifts plot of land

Hindu neighbour gifts land to Muslim journalist

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಗಾಗಿ ತಮ್ಮ ಪ್ರಾಣ ಅರ್ಪಿಸಿದ ಅರಣ್ಯ ಯೋಧರ ನೆನಪಿನ ದಿನವಾದ ಇಂದು ರಾಜ್ಯದೆಲ್ಲೆಡೆ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅಂತೆಯೇ ಇಂದು ಪಂಜ ವಲಯ ಅರಣ್ಯ ಇಲಾಖೆಯಲ್ಲೂ ಹುತಾತ್ಮರಿಗೆ ನಮನ ಸಲ್ಲಿಸಲಾಯಿತು.

ಪಂಜ ವಲಯ ಅರಣ್ಯಾಧಿಕಾರಿಯವರ ಕಚೇರಿಯಲ್ಲಿ ಇಂದು ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಹಸಿರು ಯೋಧರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ, ಒಂದು ನಿಮಿಷದ ಮೌನಾಚಾರಣೆಯನ್ನು ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಜ ವಲಯ ಹಾಗೂ ಉಪವಲಯದ ಅರಣ್ಯಾಧಿಕಾರಿಗಳು,ಅರಣ್ಯ ರಕ್ಷಕರು,ಅರಣ್ಯ ವೀಕ್ಷಕರ ಸಹಿತ ಕಛೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.