Home latest ಫೆಬ್ರವರಿ 15 ರಿಂದ 17 ರವರೆಗೆ ಪಾಂಗಳ ಸಿರಿಜಾತ್ರೆ!! ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿಕೆ

ಫೆಬ್ರವರಿ 15 ರಿಂದ 17 ರವರೆಗೆ ಪಾಂಗಳ ಸಿರಿಜಾತ್ರೆ!! ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿಕೆ

Hindu neighbor gifts plot of land

Hindu neighbour gifts land to Muslim journalist

ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ವೈಭವದ ಸಿರಿ ಜಾತ್ರೆಯು ಇದೇ ಬರುವ ತಾ . 15 , 02 , 2022 ಮಂಗಳವಾರದಂದು ಜರಗಲಿರುವುದು.

ತಾ 15-02-2022 ನೇ ಮಂಗಳವಾರದಂದು ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣದಿಂದ ಪ್ರಾರಂಭಗೊಂಡು ಮಧ್ಯಾಹ್ನ 12-30 ಕ್ಕೆ ಮಹಾಪೂಜೆ , 12-45 ಕ್ಕೆ ಬ್ರಾಹ್ಮಣ ಸುಹಾಸಿನಿ ಆರಾಧನೆ , ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ.

ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 09-30 ಕ್ಕೆ ವೈಭವ್ ಬೈಗಿನ ಬಲಿ ನಡೆಯಲಿರುವುದು.

ರಾತ್ರಿ 11 ಕ್ಕೆ ಕುಮಾರ ದರ್ಶನ , ರಾತ್ರಿ 1 ಕ್ಕೆ ರಂಗಪೂಜೆ , ರಾತ್ರಿ 2:30 ಕ್ಕೆ ಬ್ರಹ್ಮಮಂಡಲ ,ರಾತ್ರಿ 3:30 ಕ್ಕೆ ಭೂತಬಲಿ , ರಾತ್ರಿ 4:30 ರಿಂದ ತುಲಾಭಾರ ಸೇವೆಗಳು ನಡೆಯಲಿದೆ.

ತಾ. 16.02.2022 ನೇ ಬುಧವಾರ ಬೆಳಿಗ್ಗೆ 11-00 ಕ್ಕೆ ಮಹಾಪೂಜೆ ,ಸಂಜೆ 7-00 ಕ್ಕೆ ತಪ್ಪಂಗಾಯಿ ಬಲಿ , ರಾತ್ರಿ 8:30 ಕ್ಕೆ ದೂಳು ಮಂಡಲ ,ನಂತರ ಭೂತಬಲಿ , ಕವಾಟಬಂಧನ ,ಶಯನೋತ್ಸವ

ತಾ.17.02.2022 ನೇ ಗುರುವಾರ
ಬೆಳಿಗ್ಗೆ 07-00 ಕ್ಕೆ ಕವಾಟೋದ್ಘಾಟನೆ , ನಂತರ ಮಹಾಪೂಜೆ ,ಸಾಯಂಕಾಲ 05:00 ಕ್ಕೆ ಬಲಿ ಹೊರಟು ಕಟ್ಟೆಪೂಜೆ , ಅವಭೃತ ಸ್ನಾನ ನಡೆದು ಧ್ವಜಾವರೋಹಣಗೊಳ್ಳುವುದರ ಮೂಲಕ ಮೂರು ದಿನಗಳ ಗೌಣೋತ್ಸವು ಸಮಾಪ್ತಿಯಾಗುತ್ತದೆ.

ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೇವಸ್ಥಾನದ ಪತ್ರಿಕಾ ಪ್ರಕಟಣೆಯು ತಿಳಿಸಿದೆ