Home News OnePlus Buds Pro 2 : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ 39 ಗಂಟೆಗಳ ಬ್ಯಾಟರಿ...

OnePlus Buds Pro 2 : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ 39 ಗಂಟೆಗಳ ಬ್ಯಾಟರಿ ಬ್ಯಾಕಪ್​ ಹೊಂದಿರುವ ಇಯರ್​​ಬಡ್ಸ್ | ಅದ್ಭುತ ಫೀಚರ್‌ ಜೊತೆಗೆ ಇದರ ವೈಶಿಷ್ಟ್ಯದ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಸದ್ಯ ಒನ್ ಪ್ಲಸ್ ಕಂಪೆನಿಯು ಹೊಸ ಉತ್ತಮ ಫೀಚರ್ಸ್ ಹೊಂದಿರುವ OnePlus Buds Pro 2 ಎಂಬ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ಉತ್ತಮ ಫೀಚರ್ಸ್ ನೊಂದಿಗೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಹೊಸ ಇಯರ್ ಬಡ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

OnePlus Buds Pro 2 ಇಯರ್‌ಬಡ್ಸ್ ಫೀಚರ್ಸ್​​ : ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ಇಯರ್‌ಬಡ್ಸ್‌ ಡಾಲ್ಬಿ ಅಟ್ಮಾಸ್ ಆಡಿಯೋ ಬೆಂಬಲ ಹೊಂದಿದ್ದು, ಡೈನಾಡಿಯೊ ಟ್ಯೂನಿಂಗ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಈ ಇಯರ್ ಬಡ್ಸ್ 11 ಎಂಎಂ ಡೈನಾಮಿಕ್ ಡ್ರೈವರ್ ಮತ್ತು 6 ಎಂಎಂ ಪ್ಲ್ಯಾನರ್ ಡಯಾಫ್ರಾಮ್‌ನ ಜೊತೆಗೆ ಅನಾವರಣಗೊಂಡಿದೆ. ಇನ್ನೂ, ಇದರ ಬ್ಯಾಟರಿ ಬಗ್ಗೆ ಹೇಳಬೇಕಾದರೆ, ಒನ್‌ಪ್ಲಸ್ ಬಡ್ಸ್ ಪ್ರೋ 2 ಇಯರ್​​ಬಡ್ಸ್​ ಅನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ ಸಾಕು 39 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದು. ಇದರಲ್ಲಿ ಚಾರ್ಜಿಂಗ್​ ಕೇಸ್​ ಅನ್ನು ನೀಡಲಾಗಿದ್ದು, ಇದು ವಾಯರ್​​ಲೆಸ್​ ಚಾರ್ಜಿಂಗ್​ ಸಾಮರ್ಥ್ಯವನ್ನು ಪಡೆದಿದೆ.

ಇಯರ್ ಬಡ್ಸ್ ನ ವಿಶೇಷತೆ : ವಾಲ್ಯೂಮ್, ಟ್ರ್ಯಾಕ್ ಚೇಂಜರ್​ ಜೊತೆಗೆ ಕರೆ ಸ್ವೀಕರಿಸುವ ಮತ್ತು ಕಟ್​ ಮಾಡುವಂತಹ ಅವಕಾಶವಿದೆ. ಅಲ್ಲದೆ,​ ಬ್ಲೂಟೂತ್ ವರ್ಷನ್​ 5.3 ನ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದ್ದು, ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಇದಿಷ್ಟೇ ಅಲ್ಲದೆ, ಈ ಇಯರ್ ಬಡ್ಸ್ ವಾಟರ್​​ಪ್ರೂಫ್​ ಆಗಿದ್ದು, IPX4 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ. ಇಯರ್‌ಬಡ್‌ಗಳು ಡ್ಯುಯಲ್ ಕನೆಕ್ಷನ್‌ ಫೀಚರ್ಸ್​​ ಅನ್ನು ಹೊಂದಿದೆ. ಹಾಗಾಗಿ ವಿವಿಧ ಡಿವೈಸ್​ಗಳೊಂದಿಗೆ ವೇಗದಲ್ಲಿ ಕನೆಕ್ಟ್​​ ಆಗುತ್ತದೆ.

ಅಲ್ಲದೆ ಈ ಇಯರ್ ಬಡ್ ನಿಮ್ಮ ಆರೋಗ್ಯದ ಕಾಳಜಿ ಕೂಡ ಮಾಡುತ್ತದೆ. ಹೇಗೆ ಅಂತೀರಾ? ಈ ಇಯರ್ ಬಡ್ ಸರ್ವಿಕಲ್ ಸ್ಪಿನ್ ಆರೋಗ್ಯ ಸಂಬಂಧಿ ಮೇಲ್ವಿಚಾರಣೆ ಮಾಡುತ್ತದೆ. ಈ ಸೌಲಭ್ಯ ಬೇಕಾದಲ್ಲಿ ಕಲರ್‌ ಓಎಸ್‌ 11.0 ಚಾಲಿತ ಸ್ಮಾರ್ಟ್‌ಫೋನ್‌ ಅನ್ನು ಬಳಸಿಕೊಂಡು ಈ ಇಯರ್​ಬಡ್ಸ್​ ಅನ್ನು ಬಳಸಬೇಕು. ಇದರಿಂದ ನಿಮ್ಮ ಆರೋಗ್ಯದ ಮಾಹಿತಿಯನ್ನು ತಿಳಿಯಬಹುದು.

ಬೆಲೆ ಎಷ್ಟಿದೆ? : ಭಾರತದಲ್ಲಿ ಈ ಇಯರ್​​​ಬಡ್ಸ್​ ನ ಬೆಲೆ 10,821 ರೂಪಾಯಿಗಳು ಇದ್ದು, ಗ್ರಾಹಕರಿಗೆ ಅಬ್ಸಿಡಿಯನ್ ಬ್ಲಾಕ್ ಮತ್ತು ಆರ್ಬರ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನೂ, ಈ ಡಿವೈಸ್‌ ಚೀನಾದಲ್ಲಿ ಜನವರಿ 9 ರಿಂದ ಮಾರಾಟವಾಗಲಿದ್ದು. ಭಾರತದಲ್ಲಿ ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್ ನೊಂದಿಗೆ ಈ ಇಯರ್ ಬಡ್ಸ್ ಫೆಬ್ರವರಿ 7 ರಂದು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.