Home News ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ

ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ

Hindu neighbor gifts plot of land

Hindu neighbour gifts land to Muslim journalist

ಒಂದೇ ಮನೆಯ ಮೂವರು ಸದಸ್ಯರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ ನ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ.

ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮೂರು ತಿಂಗಳ ಮಗುವಿದ್ದು, ಹಾವಿನ ಕಡಿತಕ್ಕೆ ಆ ಮಗು ಇದೀಗ ಸಾವನ್ನಪ್ಪಿದ್ದು, ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕ್ರಾಂತಿ ಮತ್ತು ಮಮತಾ ದಂಪತಿಯ ಹೆಣ್ಣು ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ದಂಪತಿ ಮನೆಗೆ ಮರಳಿದ್ದರು. ಮಧ್ಯರಾತ್ರಿ ಮಗುವಿನ ಚಡಪಡಿಕೆಗೆ ಎದ್ದ ಪೋಷಕರು, ಮಗುವಿನ ಬಾಯಿಂದ ನೊರೆ ಬರುತ್ತಿರುವುದು ಕಂಡು ಆತಂಕಕ್ಕೊಳಗಾಗಿದ್ದಾರೆ.

ಮರುಘಳಿಗೆಯೇ ಮಗುವಿನ ಮೇಲೆ ಹೊದಿಸಿದ್ದ ಹೊದಿಕೆಯಲ್ಲಿ ಹಾವು ಕಂಡುಬಂದಿದೆ. ಅದನ್ನು ಅವರು ‌ಕಂಡಕೂಡಲೇ ಕ್ಷಣಮಾತ್ರದಲ್ಲಿ ಅದೇ ಹಾವು ಕ್ರಾಂತಿ ಮತ್ತು ಮಮತಾಗೂ ಕಚ್ಚಿದೆ. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಮಗು ಸಾವನ್ನಪ್ಪಿದೆ. ಕ್ರಾಂತಿ ಮತ್ತು ಮಮತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.