

ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳ ಗುಜರಿ ನೀತಿಯನ್ನು ಜಾರಿಗೊಳಿಸಿದೆ. ಈಗಾಗಲೇ ದೇಶದ ಹಲವು ರಾಜ್ಯಗಳು ಈ ನಿಯಮವನ್ನು ಜಾರಿಗೊಳಿಸಿವೆ. ಇದೀಗ ಕರ್ನಾಟಕದಲ್ಲೂ ಗುಜರಿ ನೀತಿಯನ್ನು ಜಾರಿಗೊಳಸಲು ಸಿದ್ಧತೆ ನಡೆಸಲಾಗಿದೆ.
ಮಾಲಿನ್ಯ ಮತ್ತು ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಹಳೆಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕುವ ಗುರಿಯನ್ನು ಹೊಂದಿರುವ ಹೊಸ ವಾಹನ ಗುಜರಿ ನೀತಿಯನ್ನು ಕಳೆದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಸ್ಕ್ರ್ಯಾ ಪೇಜ್ ನೀತಿಯ ಅಡಿಯಲ್ಲಿ, ವಾಹನ ಮಾಲೀಕರು 15 ವರ್ಷಗಳ ನಂತರ ನೋಂದಣಿ ಮುಗಿದ ನಂತರ ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾ ಪ್ ಮಾಡಲು ಸಾಧ್ಯವಾಗುತ್ತದೆ. ಆದಾಗ್ಯೂ, ದೆಹಲಿಯಲ್ಲಿ, ಡೀಸೆಲ್ ಗೆ 10 ವರ್ಷಗಳ ನಂತರ ಮತ್ತು ಪೆಟ್ರೋಲ್ ವಾಹನಗಳಿಗೆ 15 ವರ್ಷಗಳ ನಂತರ ನೋಂದಣಿ ಕೊನೆಗೊಳ್ಳುತ್ತದೆ.
ಕರ್ನಾಟಕದಲ್ಲೂ ಗುಜರಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಸಾರಿಗೆ ಇಲಾಖೆಯಿಂದ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೊದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.













