Home News Fish lovers: ಮೀನು ಪ್ರಿಯರೇ ಎಚ್ಚರ..! ಪಫರ್ ಮೀನು ತಿಂದು ವೃದ್ಧ ಮಹಿಳೆ ಸಾವು, ಕೋಮಾಗೆ...

Fish lovers: ಮೀನು ಪ್ರಿಯರೇ ಎಚ್ಚರ..! ಪಫರ್ ಮೀನು ತಿಂದು ವೃದ್ಧ ಮಹಿಳೆ ಸಾವು, ಕೋಮಾಗೆ ಜಾರಿದ ಪತಿ..!

Puffer fish

Hindu neighbor gifts plot of land

Hindu neighbour gifts land to Muslim journalist

Puffer fish :  ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದಾಗಿದೆ. ಮೀನು ಮಾಂಸಹಾರಿಗಳಿಗೆ (Fish lovers beware)  ತುಂಬಾ ಪ್ರಿಯ ಆಹಾರ. ಅದರಲ್ಲೂ ಕರಾವಳಿ ತೀರದವರಿಗೆ ಮೀನು ಪಂಚಪ್ರಾಣ. ಮೀನು ತುಂಬಾ ಆರೋಗ್ಯಕರ ಆಹಾರ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ.

ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಅದರಲ್ಲೂ ಮೀನಿ ವೆರೈಟಿ ಖಾದ್ಯಗಳಗಾದ ಫಿಶ್‌ ಫ್ರೈ, ಫಿಶ್‌ ಮಸಾಲ, ಫಿಶ್‌ ಗ್ರೇವಿ ಹೀಗೆ ಹತ್ತಾರು ಆಹಾರಗಳನ್ನು ಹೇಳುತ್ತಾ ಹೋದ್ರೆ ಬಾಯಲಿ ನೀರೂರಿಸುವುದಂತೂ ಗ್ಯಾರಂಟಿ..

ಇದೀಗ ಮೀನು ಸೇವನೆ ಮಾಡುವ ಮುನ್ನ ಕೆಲವೊಂದು ಎಚ್ಚರ ವಹಿಸುವುದು ಅತ್ಯಗತ್ಯ ಕೆಲ ಮೀನುಗಳ ಸೇವನೆಯ ಬಗ್ಗೆ ಮಾಹಿತಿಯನ್ನು ತಿಳಿದಿರುವುದು ಮುಖ್ಯ ಯಾಕೆಂದ್ರೆ ಇಲ್ಲೊಂದೆಡೆ ಮೀನು ಸೇವನೆ ಮಾಡಿ ಮಾರಣಾಂತಿಕವಾಗಬಹುದು. ಇಲ್ಲೊಂದೆಡೆ ‘ಮಾರಣಾಂತಿಕ’ ಪಫರ್ (puffer fish) ಮೀನು ತಿಂದು ವೃದ್ಧ ಮಹಿಳೆ ಸಾವನ್ನಪ್ಪಿದ್ದು, ಪತಿ ಕೋಮಾ ಸ್ಥಿತಿ ಒಳಗಾಗಿದ್ದಾರೆ. ಇದರ ಹಿಂದಿನ ಕಾರಣವೇನು ಅನ್ನೋದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ..

ಮಲೇಷ್ಯಾದಲ್ಲಿ ಮೀನು ತಿಂದು 83 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಕೋಮಾಗೆ ಜಾರಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ವರದಿಯ ಪ್ರಕಾರ, ವೃದ್ಧ ದಂಪತಿಯ ಮಗಳು ಸ್ಥಳೀಯ ಅಂಗಡಿಯಿಂದ ಮೀನು ಖರೀದಿಸಿದ್ದಾರೆ ಎನ್ನಲಾಗಿದ್ದು, ಅದೇ ಅಂಗಡಿಯಿಂದ ಬಹಳ ಸಮಯದಿಂದ ಖರೀದಿಸುತ್ತಿರುವುದರಿಂದ ಈ ಬಾರಿ ಮೀನು ಕೊಳ್ಳುವ ವೇಳೆ ಗುಣಮಟ್ಟವನ್ನು ಪರಿಶೀಲಿಸಲಿಲ್ಲ ಎನ್ನಲಾಗಿದೆ.

ವರದಿಯ ಪ್ರಕಾರ, ಮಧ್ಯಾಹ್ನದ ಊಟಕ್ಕೆ ಮೀನನ್ನು ಸೇವಿಸಿದ ನಂತರ, ಲಿಮ್ ಸಿವ್ ಗುವಾನ್ ಎಂದು ಗುರುತಿಸಲಾದ ಮಹಿಳೆ ನಡುಗಲು ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಲು ಪ್ರಾರಂಭಿಸಿದಳು. ಆಕೆಯ ಪತಿ ಕೂಡ ಸುಮಾರು ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದರು ಎನ್ನಲಾಗಿದೆ. ಈ ನಡುವೆ ಅವರ ಮಗ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಕೋಮಾದಲ್ಲಿರುವ ಆಕೆಯ ಪತಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.