Home News Flipkart Electric Scooter Offer: ಫ್ಲಿಪ್ ಕಾರ್ಟ್ ನ ಈ ಆಫರ್ ಮಿಸ್ ಮಾಡಬೇಡಿ, ಜಸ್ಟ್...

Flipkart Electric Scooter Offer: ಫ್ಲಿಪ್ ಕಾರ್ಟ್ ನ ಈ ಆಫರ್ ಮಿಸ್ ಮಾಡಬೇಡಿ, ಜಸ್ಟ್ 1 ರೂಪಾಯಿ ನೀಡಿ ಎಲೆಕ್ಟ್ರಿಕ್​ ಸ್ಕೂಟರ್ ನಿಮ್ಮದಾಗಿಸಿ!!!

Hindu neighbor gifts plot of land

Hindu neighbour gifts land to Muslim journalist

ಜನಪ್ರಿಯ ಇ-ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಇದೀಗ ಬಂಪರ್ ಆಫರ್ ನೀಡುತ್ತಿದೆ. ಈ ಆಫರ್ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತಾ!!. ಯಾಕಂದ್ರೆ ಅಂತಹ ಆಫರ್ ಇಲ್ಲಿದೆ.
ಫ್ಲಿಪ್‌ಕಾರ್ಟ್ ಆಫರ್ ಮೇಲೆ ಕೇವಲ ಒಂದು ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು. ಅಬ್ಬಾ!! ಒಂದು ರೂಪಾಯಿಗೆ ಸ್ಕೂಟರ್ ನ ಕೀ ಸಹ ಸಿಗಲ್ಲ ಅಂತದ್ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸಿಗುತ್ತಾ ? ಹೌದು, ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ ಇಂತಹ ಆಫರ್ ನೀಡಲಾಗಿದೆ.

ಇದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. ಈ ಆಫರ್ ನಲ್ಲಿ ಕೇವಲ ಒಂದು ರೂಪಾಯಿಗೆ ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ಆದರೆ ಈ ಆವಕಾಶ ಒಬ್ಬರಿಗೆ ಮಾತ್ರ ಸಿಗುತ್ತದೆ. ಇನ್ನು ಒಂದು ರೂ. ಗೆ ಸಿಗುವ ಆ ಸ್ಕೂಟರ್ ಯಾವುದು? ಅಂತ ನೋಡೋಣ.

Okaya ಫಾಸ್ಟ್ F2B ಎಲೆಕ್ಟ್ರಿಕ್ ಸ್ಕೂಟರ್ ನ ಮೇಲೆ ಈ ಆಫರ್ ಇದ್ದು, ಫ್ಲಿಪ್‌ಕಾರ್ಟ್‌ನ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ ಭಾಗವಹಿಸಿದವರಿಗೆ ಮಾತ್ರ ಈ ಅವಕಾಶ ಲಭ್ಯವಿದ್ದು, ಅವರಿಗೆ
ಈ ಸ್ಕೂಟರ್ ಕೇವಲ ಒಂದು ರೂಪಾಯಿಗೆ ಲಭ್ಯವಾಗಲಿದೆ.

ಅಲ್ಲದೆ, ಫ್ಲಿಪ್‌ಕಾರ್ಟ್ Okaya ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ರಿಯಾಯಿತಿಗಳನ್ನು ಸಹ ನೀಡುತ್ತದೆ. ಫ್ರೀಡಂ ಎಲ್ಐ2, ಫಾಸ್ಟ್ ಎಫ್2ಬಿ ಮತ್ತು ಫಾಸ್ಟ್ ಎಫ್4 ಮಾದರಿಗಳು ರೂ.5 ಸಾವಿರ ರಿಯಾಯಿತಿಯ ಮೇಲೆ ಗ್ರಾಹಕರಿಗೆ ಲಭ್ಯವಾಗುತ್ತದೆ. ಈ ಸ್ಕೂಟರ್ ನ ರಿಯಾಯಿತಿ ಬೆಲೆ ಎಷ್ಟು? ಇದರ ಫೀಚರ್ಸ್ ಇಲ್ಲಿದೆ.

Okaya ಎಲೆಕ್ಟ್ರಿಕ್ ಸ್ಕೂಟರ್‌ ನ ಮೂಲ ಬೆಲೆ 74,899 ರೂಪಾಯಿ ಆಗಿದೆ. ಆದರೆ ರಿಯಾಯಿತಿ ಮೇಲೆ 69,899 ರೂಪಾಯಿಗೆ ಈ ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಸಬಹುದು. ಇದರ ವ್ಯಾಪ್ತಿಯು 75 ಕಿಲೋಮೀಟರ್ ಆಗಿದ್ದು, ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್ ಆಗಿದೆ. ವೇಗದ F2B ಮಾದರಿಯು ರೂ. 91,999 ಬದಲಿಗೆ ರೂ. 86,999 ಗೆ ಖರೀದಿಸಬಹುದು. ಇದರ ವ್ಯಾಪ್ತಿಯು 80 ಕಿಲೋಮೀಟರ್ ಆಗಿದ್ದು, ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಇದೆ. ಸದ್ಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.