Home News Office Party: ‘3 ಗ್ಲಾಸ್ ಎಣ್ಣೆ ಹೊಡಿ ಇಲ್ಲ ನನಗೆ ಕಿಸ್ ಕೊಡಿ’ – ಆಫೀಸ್...

Office Party: ‘3 ಗ್ಲಾಸ್ ಎಣ್ಣೆ ಹೊಡಿ ಇಲ್ಲ ನನಗೆ ಕಿಸ್ ಕೊಡಿ’ – ಆಫೀಸ್ ಪಾರ್ಟಿಯಲ್ಲಿ ಹೀಗೊಂದು ಗೇಮ್, ಕಣ್ಣೀರು ಹಾಕಿದ ಯುವತಿಯರು !!

Hindu neighbor gifts plot of land

Hindu neighbour gifts land to Muslim journalist

Office Party: ಆಫೀಸ್ ಎಂದ ಮೇಲೆ ವಿವಿಧ ರೀತಿಯ ಮೋಜು, ಮಸ್ತಿ ಇದ್ದೇ ಇರುತ್ತದೆ. ಇಡೀ ದಿನ, ಇಡೀ ವಾರ ದುಡಿದು ದುಡಿದು ಸುಸ್ತಾಗೋ ಎಂಪ್ಲಾಯ್ ಗಳಿಗೆ ಅಲ್ಲಿನ ಬಾಸ್ ವೀಕೆಂಡಿಗೋ ಅಥವಾ ಮಂತ್ ಎಂಡಿಗೋ ಪಾರ್ಟಿ(Office Party) ಏರ್ಪಡಿಸೋದು ಇಲ್ಲ ಕೊಲೀಗ್ ಯಾರದ್ದಾದರೂ ಬರ್ಡೇ ಇದ್ದರು ಅವರು ಪಾರ್ಟಿ ಅರೆಂಜ್ ಮಾಡೋದು ಸಹಜ. ಅಂತೆಯೇ ಇಲ್ಲೊಂದು ಕಂಪೆಯೊಂದು ತನ್ನ ಉದ್ಯೋಗಿಗಳಿಗಾಗಿ ಪಾರ್ಟಿ ಏರ್ಪಡಿಸಿದ್ದು, ಆ ಆಫಿಸ್ ಪಾರ್ಟಿಗೆ ಹೋದ ಯುವತಿ ಅಲ್ಲಿಯ ಫುಲ್ ಶಾಕ್ ಆಗಿದ್ದಾಳೆ.

ಅರೆ.. ಪಾರ್ಟಿ ಅಂದರೆ ಖುಷಿ ಪಡಬೇಕು, ಎಂಜಾಯ್ ಮಾಡಬೇಕು ಆದ್ರೆ ಈ ಯುವತಿ ಯಾಕಪ್ಪಾ ಶಾಕ್ ಆದ್ಲು, ಶಾಕ್ ಆಗೋಳು ಪಾರ್ಟಿಗೆ ಯಾಕೆ ಹೋದ್ಲು ಅಂತ ಯೋಚಿಸ್ತಿದ್ದೀರಾ? ಅವಳು ಪಾರ್ಟಿಗೆ ಖುಷಿಯಿಂದಲೇ ಏನೋ ಹೋದಳು. ಆದರೆ ಅಲ್ಲಿಯ ಗೇಮ್ ಚಾಲೆಂಜ್‌ಗಳನ್ನು ನೋಡಿ ಫುಲ್ ಹೌಹಾರಿದ್ದಾಳೆ. ಅಷ್ಟೇ ಅಲ್ಲ ಕಣ್ಣೀರು ಕೂಡ ಹಾಕಿದ್ದಾಳೆ.

ಹೌದು, ಆಫಿಸ್ ಪಾರ್ಟಿಯಲ್ಲಿ ತಮಗಾದ ಕಹಿ ಅನುಭವಗಳ ಬಗ್ಗೆ ಸ್ವತಹ ಆ ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿನ ಬರೆದುಕೊಂಡಿದ್ದಾಳೆ. ಮಹಿಳಾ ಉದ್ಯೋಗಿಗಳನ್ನು ‘ಟೀಂ ಬಿಲ್ಡಿಂಗ್ ಇವೆಂಟ್’ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದ್ರೆ ಈ ಇವೆಂಟ್‌ಗೆ ತೆರಳಿದ ಮೇಲೆ ಅಲ್ಲಾದ ಅನುಭವಗಳ ಬಗ್ಗೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಓರ್ವ ಯುವತಿ ಈ ಕಂಪನಿಯಲ್ಲಿ ಇಂಟರ್‌ನಿಯಾಗಿ ಕೆಲಸ ಮಾಡಿಕೊಂಡಿದ್ದಳು. ಆಕೆಗೂ ಟೀಂ ಬಿಲ್ಡಿಂಗ್ ಇವೆಂಟ್‌ಗೆ ಆಹ್ವಾನಿಸಲಾಗಿತ್ತು. ಒಂದು ವೇಳೆ ಇವೆಂಟ್‌ಗೆ ಗೈರಾದ್ರೆ ಹೆಚ್ಚಿನ ಕೆಲಸ ನೀಡಬಹುದು ಮತ್ತು ಎಲ್ಲರ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಭಯವಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ಯುವತಿ ತೆರಳಿದ್ದಳು. ಆದ್ರೆ ಅಲ್ಲಿಗೆ ಹೋದ ನಂತರ ಇವೆಂಟ್‌ ರಹಸ್ಯ ತಿಳಿದು ಯುವತಿ ಶಾಕ್ ಆಗಿದ್ದಳು.

ಟೀಂ ಬಿಲ್ಡಿಂಗ್ ಹೆಸರಿನಲ್ಲಿ ಹಲವು ಗೇಮ್ ಚಾಲೆಂಜ್‌ಗಳನ್ನು ಆಯೋಜಿಸಲಾಗಿತ್ತು. ತಂದೆಯ ವಯಸ್ಸಿನ ವ್ಯಕ್ತಿಯೋರ್ವ ಯುವತಿಗೆ ಸತತವಾಗಿ ಮೂರು ಗ್ಲಾಸ್ ಮದ್ಯ ಕುಡಿಯಬೇಕೆಂದು ಚಾಲೆಂಜ್ ಹಾಕಿದ್ದನು. ಒಂದು ವೇಳೆ ಮದ್ಯ ಕುಡಿಯದಿದ್ದರೆ ಆ ಮುದಿ ವಯಸ್ಸಿನ ವ್ಯಕ್ತಿಗೆ ಕಿಸ್ ಮಾಡಬೇಕಿತ್ತು. ಆದ್ರೆ ಗೇಮ್ ಆಡಲು ಒಪ್ಪದೇ ಯುವತಿ ಅಲ್ಲಿಂದ ಹೊರಟಿದ್ದಾಳೆ. ಆಗಲೂ ಆ ವ್ಯಕ್ತಿಯ ಆಕೆ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದಾನೆ. ಕೊನೆಗೆ ಬೇರೆ ದಾರಿ ಇಲ್ಲದೆ ಯುವತಿ ಅಳುತ್ತಾ ಮೂರು ಗ್ಲಾಸ್ ಮದ್ಯ ಕುಡಿದಿದ್ದಾಳೆ. ಅಲ್ಲದೆ ಪಾರ್ಟಿಯಿಂದ ಬಂದ ನಂತರ ಯುವತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ.