Home News Uttar pradesh: ಮಹಾಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆ ಈ ರೀತಿಯಲ್ಲಿ ಒಂದೇ ಒಂದು ಕೇಸ್...

Uttar pradesh: ಮಹಾಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆ ಈ ರೀತಿಯಲ್ಲಿ ಒಂದೇ ಒಂದು ಕೇಸ್ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್

Yogi Adithyanath

Hindu neighbor gifts plot of land

Hindu neighbour gifts land to Muslim journalist

Uttar pradesh: ಉತ್ತರ ಪ್ರದೇಶ (Uttar pradesh) ಸಿಎಂ ಯೋಗಿ ಆದಿತ್ಯನಾಥ್‌ ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್‌ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಮುಟ್ಟಿ ನೋಡುವಂತೆ ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಪವಿತ್ರ ಸ್ನಾನ ಮಹಾ ಕುಂಭಮೇಳದಲ್ಲಿ ದೋಣಿಗಳನ್ನು ಹೊಂದಿರುವ 130 ಕುಟುಂಬ 30 ಕೋಟಿ ರೂ. ಲಾಭಗಳಿಸಿದೆ ಎಂದು ಹೇಳುವ ಮೂಲಕ ಕುಂಭಮೇಳವನ್ನು ಟೀಕಿಸಿದ್ದ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಸಮಾಜವಾದಿ ಪಕ್ಷವು ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂದು ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ ಅವರು 30 ಕೋಟಿ ರೂ. ಲಾಭಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು 50,000-52,000 ಗಳಿಸಿದ್ದಾರೆ ಎಂದು ವಿವರಿಸಿದ್ದಾರೆ.

ಮುಖ್ಯವಾಗಿ ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. 66 ಕೋಟಿ ಜನರು ಆಗಮಿಸಿ ಭಾಗವಹಿಸಿ ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.