Home News ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ | ಇನ್ನು ಹೈವೇ ಪಕ್ಕ ಮದ್ಯ ಮಾರುವಂತಿಲ್ಲ !

ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ | ಇನ್ನು ಹೈವೇ ಪಕ್ಕ ಮದ್ಯ ಮಾರುವಂತಿಲ್ಲ !

Hindu neighbor gifts plot of land

Hindu neighbour gifts land to Muslim journalist

ನವದೆಹಲಿ, ಜುಲೈ 27: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ, ಹೆದ್ದಾರಿಯ ಅಂಚಿನಿಂದ 500 ಮೀಟರ್ ದೂರದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡುವುದನ್ನು  ಸುಪ್ರೀಂ ಕೋರ್ಟ್ ನಿಷೇಧಿಸಿ ನಿರ್ದೇಶನಗಳನ್ನು ನೀಡಿದೆ.
2016 ರಲ್ಲಿ ನೀಡಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್ ಎಚ್ಚರಿಸಿ ಹೇಳಿದೆ.

20,000 ಜನರು ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳ ಸಂದರ್ಭದಲ್ಲಿ, ಹಿಂದೆ ನೀಡಿದ್ದ 500 ಮೀಟರ್‌ಗಳ ಅಂತರವನ್ನು 220 ಮೀಟರ್‌ಗೆ ಇಳಿಸಿ ಆದೇಶ ಹೊರಡಿಸಿದೆ. ಈ ಮೂಲಕ 220 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮದ್ಯವನ್ನು ಮಾರಾಟ ಮಾಡುವಂತಿಲ್ಲ.

ಸುಪ್ರೀಂ ಕೋರ್ಟ್‌ನ ಆದೇಶದಂತೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾಲಕಾಲಕ್ಕೆ ಆದೇಶ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಇದಲ್ಲದೆ, ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 185 ರಲ್ಲಿ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಕುಡಿದು ವಾಹನ ಚಲಾಯಿಸುವ ಅಪರಾಧಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, ಕುಡಿದು ವಾಹನ ಚಲಾಯಿಸುವುವ ಸಂದರ್ಭ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಸಚಿವಾಲಯವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಅಭಿಯಾನಗಳನ್ನು ಕೈಗೊಳ್ಳುವಂತೆ ಮಹತ್ವದ ಸೂಚನೆ ನೀಡಿದೆ.