Home News ಹೊಸ ವರ್ಷ ಆಚರಣೆ ಮಾಡಲು ನಂದಿ ಹಿಲ್ಸ್‌ಗೆ ಪ್ರವೇಶವಿಲ್ಲ: ಆದೇಶ ಜಾರಿ

ಹೊಸ ವರ್ಷ ಆಚರಣೆ ಮಾಡಲು ನಂದಿ ಹಿಲ್ಸ್‌ಗೆ ಪ್ರವೇಶವಿಲ್ಲ: ಆದೇಶ ಜಾರಿ

Hindu neighbor gifts plot of land

Hindu neighbour gifts land to Muslim journalist

ಚಿಕ್ಕಬಳ್ಳಾಪುರ: ಹೊಸ ವರ್ಷ ಬಂದರೆ ಹೆಚ್ಚಿನ ಜನರು ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ನಂದಿ ಹಿಲ್ಸ್‌ಗೆ ಭೇಟಿ ನೀಡಲು ಹೊಸ ವರ್ಷಕ್ಕೆ ಬ್ರೇಕ್‌ ಹಾಕಲಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಸಂಖ್ಯೆಯ ಜನ ಮತ್ತು ವಾಹನ ದಟ್ಟಣೆಯ ಕಾರಣದಿಂದ ವರ್ಷಾಂತ್ಯದ ದಿನದಂದು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಡಿ.31 ರ ಮಧ್ಯಾಹ್ನ 2 ರಿಂದ ಜ.1 ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರಿಗೆ ಮತ್ತು ವಾಹನಗಳನ್ನು ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರು ಆದೇಶ ನೀಡಿದರು.

ಆದರೆ ಮುಂಗಡವಾಗಿ ಅತಿಥಿ ಕೊಠಡಿಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ವಿನಾಯಿತಿ ನೀಡಲಾಗಿದೆ. ಮುಂಗಡ ಕಾಯ್ದಿರಿಸಿರುವ ಪ್ರವಾಸಿಗರನ್ನು ಹೊರತುಪಡಿಸಿ ಪ್ರವಾಸಿಗರಿಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.